ಇಂದು ಗ್ರೀನ್ ಜೆರ್ಸಿಯಲ್ಲಿ RCB ಕಣಕ್ಕೆ ..! ಬೆಂಗಳೂರು ತಂಡಕ್ಕೆ ಹಸಿರು ಬಣ್ಣ ವರನಾ..? ಶಾಪನಾ..?
ಪ್ರಸಕ್ತ IPLನಲ್ಲಿ RCB, ಇಂದು ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಕೋಲ್ಕತಾದಲ್ಲಿ ಟೇಬಲ್ ಟಾಪರ್ KKR ವಿರುದ್ಧ ಗೆದ್ದು, ಸೋಲಿನ ಸುಳಿಯಿಂದ ಹೊರಬರೋ ಪ್ಲಾನ್ನಲ್ಲಿದೆ. ಆದ್ರೆ, ಇವತ್ತಿನ ಪಂದ್ಯದಲ್ಲಿ RCB ಆಟಗಾರರು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಇದೇ ಈಗ ರೆಡ್ ಆರ್ಮಿ ಅಭಿಮಾನಿಗಳ ಟೆನ್ಷನ್‌ಗೆ ಕಾರಣವಾಗಿದೆ.
ಕೋಲ್ಕತಾ(ಏ.21): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿಂದು RCB ಗೆಲ್ಲಲೇಬೇಕು. ಗೆದ್ದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ. ಆದ್ರೆ, ಈ ನಡುವೆ RCB ಫ್ಯಾನ್ಸ್‌ಗೆ ಮ್ಯಾಚ್ ನಡೆಯೋ ಮೊದಲೇ ಸೋಲಿನ ಭಯ ಶುರುವಾಗಿದೆ. ಈ ಭಯಕ್ಕೆ ಅದೊಂದು ಬಣ್ಣ ಕಾರಣವಾಗಿದೆ. ಯಾವುದು ಆ ಬಣ್ಣ..? ಅದಕ್ಕೂ RCB ಸೋಲಿಗೆ ಕಾರಣ ಏನು ಅಂತೀರಾ..? ಈ ಸ್ಟೋರಿ ನೋಡಿ....!
ಗ್ರೀನ್ ಜೆರ್ಸಿಯಲ್ಲಿ ಆಡಿದ್ರೆ ಸೋಲು ಪಕ್ಕಾ..!
ಪ್ರಸಕ್ತ IPLನಲ್ಲಿ RCB, ಇಂದು ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಕೋಲ್ಕತಾದಲ್ಲಿ ಟೇಬಲ್ ಟಾಪರ್ KKR ವಿರುದ್ಧ ಗೆದ್ದು, ಸೋಲಿನ ಸುಳಿಯಿಂದ ಹೊರಬರೋ ಪ್ಲಾನ್ನಲ್ಲಿದೆ. ಆದ್ರೆ, ಇವತ್ತಿನ ಪಂದ್ಯದಲ್ಲಿ RCB ಆಟಗಾರರು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಇದೇ ಈಗ ರೆಡ್ ಆರ್ಮಿ ಅಭಿಮಾನಿಗಳ ಟೆನ್ಷನ್‌ಗೆ ಕಾರಣವಾಗಿದೆ.
IPL 2024: KKR ಎದುರು ಈಡನ್ ಗಾರ್ಡನ್‌ನಲ್ಲಾದರೂ ಗೆಲ್ಲುತ್ತಾ ಆರ್‌ಸಿಬಿ..?
ಯೆಸ್, RCB ಗ್ರೀನ್ ಜೆರ್ಸಿಯಲ್ಲಿ ಆಡುತ್ತೆ ಅಂದ್ರೆ, ಅಭಿಮಾನಿಗಳ ಹಾರ್ಟ್‌ಬೀಟ್ ಡಬಲ್ ಆಗುತ್ತೆ. ಯಾಕಂದ್ರೆ, ಗ್ರೀನ್ ಜೆರ್ಸಿ RCBಗೆ ಶಾಪವಾಗಿ ಪರಿಣಮಿಸಿದೆ. ಗ್ರೀನ್ ಜೆರ್ಸಿಯಲ್ಲಿ ಬೆಂಗಳೂರು ತಂಡ ಗೆದ್ದಿರೋದಕ್ಕಿಂತ ಸೋತಿದ್ದೇ ಹೆಚ್ಚು. ಈವರೆಗೂ RCB, ಗ್ರೀನ್ ಜೆರ್ಸಿಯಲ್ಲಿ 13 ಪಂದ್ಯಗಳನ್ನಾಡಿದೆ. ಇದ್ರಲ್ಲಿ 4 ಪಂದ್ಯಗಳಲ್ಲಿ ಮಾತ್ರ ಗೆದ್ದು ಬೀಗಿದೆ. 8 ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿದೆ. 1 ಪಂದ್ಯ ಮಾತ್ರ ನೋ ರಿಸಲ್ಟ್‌ನಲ್ಲಿ ಅಂತ್ಯವಾಗಿದೆ.
ಗ್ರೀನ್ ಜೆರ್ಸಿಯಲ್ಲಿ ಗೆದ್ದರೇ ಪ್ಲೇ ಆಫ್ ಫಿಕ್ಸ್..!
ಗ್ರೀನ್ ಜೆರ್ಸಿ RCB ಪಾಲಿಗೆ ಶಾಪವೂ ಹೌದು, ವರವೂ ಹೌದು. ಹಸಿರು ಬಣ್ಣದ ಬಟ್ಟೆ ಧರಿಸಿ ಗೆದ್ದ ಹಲವು ಬಾರಿ RCB ನಾಕೌಟ್ ಹಂತಕ್ಕೆ ಎಂಟ್ರಿ ಕೊಟ್ಟಿರೋದಕ್ಕೆ ಇದಕ್ಕೆ ಸಾಕ್ಷಿ. RCB ಫಸ್ಟ್ ಟೈಮ್ ಗ್ರೀನ್ ಜೆರ್ಸಿ ಧರಿಸಿ 2011ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯವನ್ನ 9 ವಿಕೆಟ್‌ಗಳಿಂದ ಜಯಿಸಿ ಫೈನಲ್‌ಗೆ ಎಂಟ್ರಿಕೊಟ್ಟಿತ್ತು. ಆದ್ರೆ, ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶರಣಾಗಿತ್ತು.
2011 ರಿಂದ 2015ರ ವರೆಗೆ RCBಗೆ ಗ್ರೀನ್ ಜೆರ್ಸಿಯಲ್ಲಿ ಗೆಲುವು ದಕ್ಕಲಿಲ್ಲ. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 144 ರನ್‌ಗಳ ಪ್ರಚಂಡ ಗೆಲುವು ದಾಖಲಿಸಿತ್ತು. ಮಾತ್ರವಲ್ಲ ಟೂರ್ನಿಯಲ್ಲಿ ರನ್ ಅಪ್ ಆಗಿ ಹೊರಹೊಮ್ಮಿತ್ತು. 2017 ರಿಂದ 2020ವರೆಗೆ ಗ್ರೀನ್ ಜೆರ್ಸಿಯಲ್ಲಿ ಸಕ್ಸಸ್ ಸಿಗಲಿಲ್ಲ. ಆದ್ರೆ, 2022ರಲ್ಲಿ ಗೆದ್ದು ಪ್ಲೇ ಆಫ್ ಎಂಟ್ರಿ ನೀಡಿತ್ತು.
ಐಪಿಎಲ್‌ನಲ್ಲಿ ಮರೀಚಿಕೆಯಾದ ಸೂಪರ್ ಓವರ್..! ಎರಡು ವರ್ಷದಿಂದ ಒಂದೂ ನಡೆದಿಲ್ಲ ಸೂಪರ್ ಓವರ್..!
ಸಕ್ಸಸ್ ಸಿಗದೇ ಇದ್ದರೂ ಪರಿಸರ ಕಾಳಜಿ ಬಿಟ್ಟಿಲ್ಲ..!
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಗೋ ಗ್ರೀನ್ ಅಭಿಯಾನದಡಿ RCB, ಕಳೆದ 13 ವರ್ಷಗಳಿಂದ ಗ್ರೀನ್ ಜೆರ್ಸಿ ಧರಿಸಿ ಆಡ್ತಿದೆ. ಗ್ರೀನ್ ಜೆರ್ಸಿಯಲ್ಲಿ ಆಡಿದ್ರೆ, ಗೆಲುವು ಸಿಗಲ್ಲ ಅನ್ನೋದು ಗೊತ್ತಿದ್ದರೂ, ಗೆಲುವಿಗಿಂತ ಸಾಮಾಜಿಕ ಕಳಕಳಿ ಮುಖ್ಯ ಅಂತ RCB ಫ್ರಾಂಚೈಸಿ, ಗೋ ಗ್ರೀನ್ ಅಭಿಯಾನವನ್ನ ಬಿಟ್ಟಿಲ್ಲ
RCBಯಿಂದ ಬೆಂಗಳೂರಿನ ಮೂರು ಕೆರೆ ಅಭಿವೃದ್ಧಿ..!
ಯೆಸ್ RCB ಫ್ಲಾಪ್ ಶೋ ನೀಡುತ್ತಾ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಆದ್ರೆ , ಮತ್ತೊಂದೆಡೆ RCB ಫ್ರಾಂಚೈಸಿ, ಸಾಮಾಜಿಕ ಕಾರ್ಯದ ಮೂಲಕ ಅಭಿಮಾನಿಗಳ ಮನಗೆದ್ದಿದೆ. ಗೋ ಗ್ರೀನ್ ಅಭಿಯಾನದಡಿ ಬೆಂಗಳೂರಿನ ಮೂರು ಕೆರೆಗಳನ್ನು ಅಭಿವೃದ್ಧಿ ಮಾಡಿದೆ. ಕಳೆದ ವರ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅದೇನೆ ಇರಲಿ, ಇಂದಿನ ಪಂದ್ಯದಲ್ಲಿ RCB ಭರ್ಜರಿ ಜಯ ಸಾಧಿಸಲಿ. ಗ್ರೀನ್ ಜೆರ್ಸಿ ಶಾಪದ ಬದಲು ವರವಾಗಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್