ಆರ್‌ಸಿಬಿ vs ಸಿಎಸ್‌ಕೆ ನಡುವಿನ ರೋಚಕ ಪಂದ್ಯಕ್ಕಾಗಿ ಬೆಂಗಳೂರಿನ ಚಿನಸ್ವಾಮಿ ಸುತ್ತು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ಒಂದಡೆ ಪ್ಲೇ ಆಫ್ ಲೆಕ್ಕಾಚಾರಗಳು ನಡೆಯುತ್ತಿರುವ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಯ ಮಗನ ನಾಮಕರಣ ವಿಡಿಯೋ ವೈರಲ್ ಆಗಿದೆ. 

ಬೆಂಗಳೂರು(ಮೇ.18) ಐಪಿಎಲ್ 2024ರ ಟೂರ್ನಿಯಲ್ಲಿ ಫೈನಲ್ ಪಂದ್ಯಕ್ಕೆ ಇಷ್ಟು ಕ್ರೇಜ್ ಇರುತ್ತೋ ಗೊತ್ತಿಲ್ಲ. ಆದರೆ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಲೀಗ್ ಪಂದ್ಯ ಮಾತ್ರ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಉತ್ತಮ ರನ್‌ರೇಟ್‌ನೊಂದಿಗೆ ಸಿಎಸ್‌ಕೆ ಮಣಿಸಿ ಪ್ಲೇ ಆಫ್‌ಗೇರುವ ಲೆಕ್ಕಾಚಾರ, ಇತ್ತ ಧೋನಿ-ಕೊಹ್ಲಿಯ ಕೊನೆಯ ಮುಖಾಮುಖಿ ಅನ್ನೋ ಭಾವುಕ ಕ್ಷಣ. ಹೀಗೆ ಹಲವು ಕಾರಣಗಳಿಂದ ಈ ಪಂದ್ಯ ರೋಚಕತೆ ಪಡೆದುಕೊಂಡಿದೆ. ಇದರ ನಡುವೆ ಆರ್‌ಸಿಬಿ ಅಭಿಮಾನಿ ತನ್ನ ಮಗನ ನಾಮಕರಣ ಕಾರ್ಯಕ್ರಮದ ವಿಡಿಯೋ ಬಾರಿ ವೈರಲ್ ಆಗಿದೆ. ಆರ್‌ಸಿಬಿ ಜರ್ಸಿ ಮೂಲಕ ಮಗನಿಗೆ ನಾಮಕರಣ ಮಾಡಿದ ಈ ವಿಡಿಯೋ ಸಂಚಲನ ಸೃಷ್ಟಿಸಿದೆ.

ಆರ್‌ಸಿಬಿ ಅಭಿಮಾನಿ ದಂಪತಿ ಇದೀಗ ತಮ್ಮ ಮಗನ ನಾಮಕರಣ ಸಮಾರಂಭವನ್ನು ಆರ್‌ಸಿಬಿ ಫ್ಲೇವರ್‌ನಲ್ಲೇ ಆಚರಿಸಿದ್ದಾರೆ. ಮಗನ ಹೆಸರಿನ ಆರ್‌ಸಿಬಿ ಜರ್ಸಿ ಬಿಡುಗಡೆ ಮಾಡುವ ಮೂಲಕ ನಾಮಕರಣ ಮಾಡಿದ್ದಾರೆ. ಮಗನ ಹೆಸರು ಹಾಗೂ ಜರ್ಸಿ ನಂಬರ್ ಆಗಿ ಹುಟ್ಟಿದ ದಿನಾಂಕವನ್ನು ಪ್ರಿಂಟ್ ಮಾಡಲಾಗಿದೆ.

RCB vs CSK ಪಂದ್ಯ ರದ್ದಾದರೇ ಯಾರಿಗೆ ಲಾಭ? 5 ಓವರ್ ಪಂದ್ಯ ನಡೆದರೆ ಆರ್‌ಸಿಬಿ ಎಷ್ಟು ರನ್ ಬಾರಿಸಿದ್ರೆ ಪ್ಲೇ ಆಫ್‌ಗೇರುತ್ತೆ?

ಆರ್‌ಸಿಬಿ ಅಭಿಮಾನಿ ತಮ್ಮ ಮಗನಿಗೆ ತ್ರಿಶಾನ್ ಗೌಡ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಆರ್‌ಸಿಬಿ ಜರ್ಸಿ ಮೂಲಕ ಅನಾವರಣಗೊಳಿಸಿ ವಿನೂತನವಾಗಿ ಹೆಸರಿಟ್ಟಿದ್ದಾರೆ. ದಂಪತಿಗಳ ಸಂಭ್ರಮ ಮನೆ ಮಾಡಿದೆ. ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಹೋರಾಟ ರೋಚಕತೆ ಪಡೆದುಕೊಂಡಿದೆ.

Scroll to load tweet…

ಆರ್‌ಸಿಬಿ ಜರ್ಸಿ ಮೂಲಕ ನಾಮಕರಣ ಮಾಡುತ್ತಿರುವ ಟ್ರೆಂಡ್ ಆರ್‌ಸಿಬಿ ಅಭಿಮಾನಿಗಳ ಜೋರಾಗಿದೆ. ಬೆಂಗಳೂರಿನ ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ಪುತ್ರನಿಗೆ ಅಯಾಂಶ್ ಎಂದು ನಾಮಕರಣ ಮಾಡಿದ್ದಾರೆ. ಜರ್ಸಿ ಅನಾವರಣ ಮಾಡುವ ಮೂಲಕ ನಾಮಕರಣ ಮಾಡಿದ್ದಾರೆ. ಅಶಾಂಯ್ ಹುಟ್ಟಿದ ದಿನವನ್ನು ಜರ್ಸಿ ನಂಬರ್ ಆಗಿ ಮುದ್ರಿಸಲಾಗಿದೆ. 

ಒಂದೆಡೆ ಮಳೆ ಭೀತಿ ಮತ್ತೊಂದೆಡೆ ಪ್ಲೇ ಆಫ್ ಲೆಕ್ಕಾಚಾರದಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ. ಕ್ರೀಡಾಂಗಣದ ಸುತ್ತ ಮುತ್ತ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಮುಫ್ತಿಯಲ್ಲೂ ಪೊಲೀಸರು ತಿರುಗಾಡುತ್ತಿದ್ದಾರೆ. ನಿರೀಕ್ಷೆಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ವಾಹನ ಪಾರ್ಕಿಂಗ್, ಮಾರ್ಗ ಸಂಚಾರ ಬದಲಾವಣೆ ಕುರಿತು ಈಗಾಗಲೇ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ. ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆಲುವು ಮಾತ್ರ ಸಾಕು. ಹೀಗಾಗಿ ಆರ್‌ಸಿಬಿ ಹಾದಿ ಕಠಿಣವಾಗಿದ್ದರೂ ಸದ್ಯ ಫಾರ್ಮ್ ಕೈಹಿಡಿಯುವ ಸಾಧ್ಯತೆ ಇದೆ. ಸತತ ಗೆಲಿವಿನ ಮೂಲಕ ಅಂಕಪಟ್ಟಿಯ ಕೊನೆಯ ಸ್ಥಾನದಿಂದ ಇದೀಗ ಪ್ಲೇ ಆಫ್ ಲೆಕ್ಕಾಚಾರದವರೆಗೂ ಪ್ರಯಾಣಿಸಿದ ಆರ್‌ಸಿಬಿ ಅದ್ಭುತ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸ.

ಧೋನಿ ನಿವೃತ್ತಿ ಸುಳಿವು ಬಿಚ್ಚಿಟ್ಟ ವಿರಾಟ್..! ಬೆಂಗ್ಳೂರಲ್ಲಿಂದು ಮಹಿ-ಕೊಹ್ಲಿ ಕೊನೆ ಮುಖಾಮುಖಿ