ಆರ್‌ಸಿಬಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಗೆ ಶುಭ ಹಾರೈಕೆಯ ಸಂದೇಶಗಳು ಹರಿದಾಡಿತ್ತು. ಇದೀಗ ಆರ್‌ಸಿಬಿ ಅಭಿಮಾನಿ ರಚಿಸಿದ ಆರ್‌ಸಿಬಿ ರೂಪಂ, ಶಿವಂ, ಶಿವಂ ಹಾಡು ಭಾರಿ ವೈರಲ್ ಆಗಿದೆ.
ಬೆಂಗಳೂರು(ಮೇ.31) ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಜೂನ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಬಾರಿ ಆರ್‌ಸಿಬಿ ಪ್ರದರ್ಶನಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಾಂಪಿಯನ್ ಆಗೋದರಲ್ಲಿ ಡೌಟೇ ಇಲ್ಲ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಅಭಿಮಾನಿಗಳಿದ್ದೇ ಹವಾ. ಎಲ್ಲಿ ನೋಡಿದರೂ ಆರ್‌ಸಿಬಿ ಪರ ಪೋಸ್ಟ್‌ಗಳೇ ಕಾಣುತ್ತಿದೆ. ಇದರ ನಡುವೆ ಅಭಿಮಾನಿಗಳು ಆರ್‌ಸಿಬಿ ತಂಡವನ್ನು, ಅಭಿಮಾನಿಗಳನ್ನು ಹಾಡಿನ ಮೂಲಕ ಹುರಿದುಂಬಿಸಿದ್ದಾರೆ. ಆರ್‌ಸಿಬಿ ಅಭಿಮಾನಿ ರಚಿಸಿದ ಆರ್‌ಸಿಬಿ ರೂಪಂ, ಶಿವಂ ಶಿವಂ ಹಾಡು ಭಾರಿ ಜನಪ್ರಿಯವಾಗಿದೆ.
ಅರ್ಜುನ್ ಸರ್ಜಾ ಅಭಿನಯದ ಶ್ರೀ ಮಂಜುನಾಥ ಸಿನಿಮಾದ ಮಹಾಪ್ರಾಣಂ ದೀಪಂ ಹಾಡನ್ನು ಇದೀಗ ಆರ್‌ಸಿಬಿ ಅಭಿಮಾನಿ ಆರ್‌ಸಿಬಿ ರೂಪಂ ಶಿವಂ ಶಿವಂ ಎಂದು ಹಾಡಿ ಎಲ್ಲರನ್ನು ಹುರಿದುಂಬಿಸಿದ್ದಾರೆ. ಅದ್ಬುತವಾಗಿ ಗೀತೆ ರಚನೆ ಮಾಡಿ ಹಾಡಲಾಗಿದೆ. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಪ್ರಸನ್ನ ಬೋಜಶೆಟ್ಟರ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಹಾಡನ್ನು ಪೋಸ್ಟ್ ಮಾಡಲಾಗಿದೆ . ಆರ್‌ಸಿಬಿ ಕುರಿತು ಹಲವು ಹಾಡು ರಚಿಸಿ ಪೋಸ್ಟ್ ಮಾಡಲಾಗಿದೆ. ಅದ್ಭುತ ಹಾಡುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಆರ್‌ಸಿಬಿ ತಂಡ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಲಿ ಜೊತೆಗೆ ಚಾಂಪಿಯನ್ ಕಿರೀಟ ಅಲಂಕರಿಸಲಿ ಎಂದು ಹಾಡುಗಳನ್ನು ರಚಿಸಿದ್ದಾರೆ.
ಆರ್‌ಸಿಬಿ ಫೈನಲ್
2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ್ದ ಆರ್‌ಸಿಬಿ, ಪಂಜಾಬ್ ತಂಡವನ್ನು ಕೇವಲ 101 ರನ್‍ಗೆ ಆಲೌಟ್ ಮಾಡಿತ್ತು. ಈ ಗುರಿಯನ್ನು ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿತಲುಪಿತ್ತು.
ಲೀಗ್ ಪಂದ್ಯದಲ್ಲೂ ಆರ್‌ಸಿಬಿ ಉತ್ತಮ ಹೋರಾಟ ನೀಡಿತ್ತು. 14 ಲೀಗ್ ಪಂದ್ಯಗಳಲ್ಲಿ ಆರ್‌ಸಿಬಿ 9 ಪಂದ್ಯ ಗೆದ್ದುಕೊಂಡಿತ್ತು. ಕೇವಲ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. 19 ಅಂಕ ಸಂಪಾದಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತ್ತು.
2025ರ ಆರ್‌ಸಿಬಿ ತಂಡದ ವಿಶೇಷತೆ
2025ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಹಲವು ವಿಶೇಷತಗಳಿವೆ.ಇದಕ್ಕೂ ಹಿಂದಿನ 17 ಆವೃತ್ತಿಗಳಲ್ಲಿ ಬಹುತೇಕ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಕೊಹ್ಲಿ ಪರ್ಫಾಮೆನ್ಸ್ ನೀಡಿದರೆ ಮಾತ್ರ ಪಂದ್ಯದ ಸೋಲು ಗೆಲುವು ನಿರ್ಧಾರವಾಗುತ್ತಿತ್ತು. ಆದರೆ ಈ ಬಾರಿ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಪ್ರತಿಯೊಬ್ಬರು ಗೆಲುವಿನಲ್ಲಿ ಕೊಡುಗೆ ನೀಡುತ್ತಿದ್ದಾರೆ. ತಂಡ ಒಬ್ಬರ ಮೇಲೆ ಅವಲಂಬಿತವಾಗಿಲ್ಲ. ಹೀಗಾಗಿ ಫಲಿತಾಂಶವೂ ಉತ್ತಮವಾಗಿದೆ. ಇತ್ತ ಅಭಿಮಾನಿಗಳ ಪ್ರತಿ ಬಾರಿಯತೆ ಈ ಬಾರಿಯೂ ಆರ್‌ಸಿಬಿಗೆ ಬೆಂಬಲ ನೀಡಿದ್ದಾರೆ. ತಂಡ ಸೋಲಲಿ, ಗೆಲ್ಲಲಿ ಕಳೆದ ಎಲ್ಲಾ ಆವೃತ್ತಿಗಳಲ್ಲಿ ಅಭಿಮಾನಿಗಳು ತಂಡವನ್ನು ಬೆಂಬಲಿಸಿದ್ದಾರೆ.ಇದೀಗ ಫೈನಲ್ ಪಂದ್ಯಕ್ಕಾಗಿ ಆರ್‌ಸಿಬಿ ಅಭಿಮಾನಿಗಳ ಅಹಮ್ಮಾದಾಬಾದ್‌ಗೆ ತೆರಳುತ್ತಿದ್ದಾರೆ. ಹಲವು ಅಭಿಮಮಾನಿಗಳು ಈಗಾಗಲೇ ಅಹಮ್ಮದಾಬಾದ್ ತಲುಪಿದ್ದಾರೆ. ಪೈನಲ್ ಪಂದ್ಯ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
