IPL 2022 ಟೀಮ್ ಯಾವುದಾದರೇನು, ಸ್ನೇಹಕ್ಕೆ ಸಾವಿಲ್ಲ!

ಐಪಿಎಲ್ ಹರಾಜು, ಟೀಮ್ ಗಳು ಆಟಗಾರರನ್ನು ಬೇರೆ ಬೇರೆ ಮಾಡಬಹುದು. ಆದರೆ, ಆಟಗಾರರ ನಡುವಿನ ಸ್ನೇಹವನ್ನು ಬೇರೆ ಮಾಡೋಕೆ ಸಾಧ್ಯವೇ ಇಲ್ಲ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ಧ ವೈರಿಗಳಾದರೂ, ಆಟಗಾರರ ನಡುವೆ ಇದಾವುದೂ ಇಲ್ಲ ಎನ್ನುವುದನ್ನು ತೋರಿಸುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದೆ.
 

RCB captain Faf du Plessis met Chennai Super Kings players ahead of their game vs royal challengers bangalore san

ಬೆಂಗಳೂರು (ಏ.12): ಐಪಿಎಲ್ ಆಟಗಾರರ ಟ್ರಾನ್ಸ್ ಫರ್ (IPL Transfer) ಮತ್ತು ಹರಾಜುಗಳು (Auction) ತಂಡಗಳಲ್ಲಿ ಬದಲಾವಣೆಗೆ ಕಾರಣವಾಗಬಹುದು, ಡ್ರೆಸ್ಸಿಂಗ್ ರೂಮ್ ಹಳೆಯ ಸ್ನೇಹಿತರನ್ನು ಭಿನ್ನ ಭಿನ್ನ ತಂಡಗಳಿಗೆ ಕಳುಹಿಸಬಹುದು ಆದರೆ ಕ್ರಿಕೆಟಿಗರ ನಡುವಿನ ಬಂಧಗಳನ್ನು ಮುರಿಯಲು ಯಾವುದೇ ಹರಾಜು ಹಾಗೂ ಟ್ರಾನ್ಸ್ ಫರ್ ಗಳಿಗೆ ಸಾಧ್ಯವಿಲ್ಲ.

ಆದರೆ, ಈ ವರ್ಷದ ಟೂರ್ನಿಯ ವಿಶೇಷತೆ ಏನೆಂದರೆ, 2022ರ ಐಪಿಎಲ್ ಗೆ (2022 IPL )ಆಗಿರುವುದು ಮೆಗಾ ಹರಾಜು. ಹೀಗಾಗಿ ಬಹುತೇಕ ತಂಡಗಳು ತನ್ನ ಪ್ರಮುಖ ಆಟಗಾರರನ್ನು ಕಳೆದುಕೊಂಡಿವೆ. ಆರ್ ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖಾಮುಖಿ ಎಂದರೆ, ಹಾವು ಮುಂಗುಸಿಯ ಕಾದಾಟ. ಆದರೆ, ತನ್ನ ಐಪಿಎಲ್ ಜೀವನವನ್ನು ಚೆನ್ನೈ ತಂಡದ ಮೂಲಕ ಆರಂಭಿಸಿದ್ದ ಫಾಫ್ ಡು ಪ್ಲೆಸಿಸ್ (Faf Du Plesis) ಈಗ ಆರ್ ಸಿಬಿಯ ನಾಯಕ.

ಚೆನ್ನೈನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಫಾಫ್ ಡು ಪ್ಲೆಸಿಸ್ ಈಗ ಆರ್ ಸಿಬಿ ಅಭಿಮಾನಿಗಳಿಂದಲೂ ಅಷ್ಟೇ ಪ್ರೀತಿ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪ್ರಕಟಿಸಿರುವ ವಿಡಿಯೋ ಎರಡೂ ತಂಡಗಳ ಆಟಗಾರರ ನಡುವೆ ಇರುವ ಸ್ನೇಹದ ಬಗ್ಗೆ ಇನ್ನಷ್ಟು ಗೌರವ ಮೂಡುವಂತೆ ಮಾಡಿದೆ.
 


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ಮುಂಬೈನ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ಮಾಜಿ ಸಿಎಸ್ ಕೆ ಸಹ ಆಟಗಾರರೊಂದಿಗೆ ತಮಾಷೆಯ ಕ್ಷಣಗಳನ್ನು ಕಳೆದರು. ಚೆನ್ನೈನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಡು ಪ್ಲೆಸಿಸ್ ಈಗ ಐಪಿಎಲ್‌ನಲ್ಲಿ ಬೆಂಗಳೂರನ್ನು ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ, ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್, ಫ್ರಾಂಚೈಸ್‌ನ ಇತರ ಆಟಗಾರರನ್ನು ಅಪ್ಪಿ ಹಿಡಿದು, ಅಭಿನಂದಿಸುತ್ತಿರುವ ವಿಡಿಯೋವನ್ನು ಸೌತ್ ಇಂಡಿಯಾ ಡರ್ಬಿ ಪಂದ್ಯಕ್ಕೂ ಮುನ್ನ ಚೆನ್ನೈ ಬಿಡುಗಡೆ ಮಾಡಿದೆ.

IPL 2022: ಸಿಎಸ್‌ಕೆ ತಂಡಕ್ಕೆ ಗಾಯದ ಮೇಲೆ ಬರೆ, ದೀಪಕ್‌ ಚಹರ್ ಈ ಐಪಿಎಲ್ ಆಡೋದು ಅನುಮಾನ..!

ಆರ್ ಸಿಬಿ ವಿರುದ್ಧದ ಪಂದ್ಯದ ನಿಟ್ಟಿನಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ಅಭ್ಯಾಸ ಅವಧಿಯ ಹಲವಷ್ಟು ವಿಡಿಯೋಗಳನ್ನು ಟ್ವಿಟರ್ ಹಾಗೂ ಇನ್ಸ್ ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದೆ. 49 ಸೆಕಂಡ್ ನ ವಿಡಿಯೋದಲ್ಲಿ, ಅಭ್ಯಾಸಕ್ಕಾಗಿ ವಿರಾಟ್‌ ಕೊಹ್ಲಿ ಮೈದಾನಕ್ಕೆ ಆಗಮಿಸುವ ವೇಳೆ ನೇರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ನಾಯಕ ರವೀಂದ್ರ ಜಡೇಜಾ ಬಳಿ ತೆರಳುತ್ತಾರೆ. ಈ ವೇಳೆ ಇಬ್ಬರು ಅಪ್ಪಿಕೊಂಡು ಕೆಲ ಕ್ಷಣ ಮಾತನಾಡುತ್ತಾರೆ. ಅದರ ಬೆನ್ನಲ್ಲೇ, ಮೈದಾನ್ಕೆ ಓಡಿ ಬರುವ  ಫಾಫ್ ಡು ಪ್ಲೆಸಿಸ್, ಚೆನ್ನೈ ತಂಡ ಕೋಚ್ ಫ್ಲೆಮಿಂಗ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಆ ಬಳಿಕ ರಾಬಿನ್ ಉತ್ತಪ್ಪ ಅವರನ್ನು ಪ್ಲೆಸಿಸ್ ತಬ್ಬಿ ಮಾತನಾಡಿಸುತ್ತಾರೆ. ವಿರಾಟ್ ಕೊಹ್ಲಿ ಹಾಗೂ ಡ್ವೇನ್ ಬ್ರಾವೋ ಕೂಡ ಕೈಕುಲುಕುವ ಕ್ಷಣಗಳು ಈ ವಿಡಿಯೋದಲ್ಲಿದೆ.

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆ..?

ಚೆನ್ನೈ ಮಾಜಿ ಆಟಗಾರ ಕರ್ಣ್ ಶರ್ಮ ಹಾಗೂ ರವಿಂದ್ರ ಜಡೇಜಾ ಮಾತನಾಡಿ, ಜೋಕ್ ಗಳನ್ನು ಹಂಚಿಕೊಂಡಿರುವ ವಿಡಿಯೋ ಇದರಲ್ಲಿದೆ. ಮಾಜಿ ಚೆನ್ನೈ ಆಟಗಾರ ಹಾಗೂ ಪ್ರಸ್ತುತ ಆರ್ ಸಿಬಿ ಪ್ಲೇಯರ್ ಆಗಿರುವ ಜೋಸ್ ಹ್ಯಾಸಲ್ ವುಡ್ ಕೂಡ ಚೆನ್ನೈ ಆಟಗಾರರ ಜೊತೆ ಕುಶಲೋಪರಿ ವಿಚಾರಿಸಿರುವ ಕ್ಷಣಗಳು ದಾಖಲಾಗಿದೆ. ಚೆನ್ನೈ ತಂಡದಲ್ಲಿರುವ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಹಾಗೂ ಫಾಫ್ ಡು ಪ್ಲೆಸಿಸ್ ಕೈ ಕುಲುಕಿ ಮಾತನಾಡಿದ್ದಾರೆ. ಒಟ್ಟಾರೆ ಇಡೀ ಚೆನ್ನೈ ತಂಡದ ಆಟಗಾರರು, ಸಿಬ್ಬಂದಿ ಫಾಫ್ ಡು ಪ್ಲೆಸಿಸ್ ಗೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಕೆಲ ಹೊತ್ತು ತಮಾಷೆಯ ಕ್ಷಣಗಳನ್ನು ಕಳೆದಿದ್ದರೆ, ಡ್ವೇನ್ ಬ್ರಾವೋ ಅವರ ಹೊಸ ಹಾಡಿಗೆ ಕೊಹ್ಲಿ ಡಾನ್ಸ್ ಕೂಡ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios