Asianet Suvarna News Asianet Suvarna News

IPL 2023: ರಾಜಸ್ಥಾನ ರಾಯಲ್ಸ್‌ ತಂಡ ಎದುರಿಸುವ ಮುನ್ನವೇ ಆರ್‌ಸಿಬಿ ಪ್ಲೇಯರ್‌ಗೆ ಸಿಕ್ತು ಬಂಪರ್‌ ಸುದ್ದಿ!

ಆರ್‌ಸಿಬಿ ಸ್ಟಾರ್‌ ಆಟಗಾರ ಹಾಗೂ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಪತ್ನಿ ಭಾರತೀಯ ಮೂಲಕ ವಿನಿ ರಮನ್‌ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 

RCB All Rounder Glenn Maxwell Wife Vini Raman Shares News Of Pregnancy On Social Media san
Author
First Published May 11, 2023, 3:49 PM IST

ಬೆಂಗಳೂರು (ಮೇ.11): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಜೈಪುರದಲ್ಲಿ ಎದುರಿಸಲಿದೆ. ಇದರ ನಡುವೆಯೇ ತಂಡದ ಸ್ಟಾರ್‌ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ವೈಯಕ್ತಿಕ ಜೀವನದಲ್ಲಿ ಸಂಭ್ರಮದ ಸುದ್ದಿಯನ್ನು ಪಡೆದುಕೊಂಡಿದ್ದಾರೆ.  ಈ ವರ್ಷದ ಸೆಪ್ಟೆಂಬರ್‌ನಲ್ಲಿ ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಗುರುವಾರ ತಮ್ಮ ಸಾಮಾಜಿಕ ಮೀಡಿಯಾ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ್ದಾರೆ.  ಮ್ಯಾಕ್ಸ್‌ವೆಲ್ ಕಳೆದ ವರ್ಷದ ಐಪಿಎಲ್‌ಗೂ ಮುನ್ನ ಕ್ರಿಶ್ಚಿಯನ್ ಮತ್ತು ತಮಿಳು ಸಂಪ್ರದಾಯದಲ್ಲಿ ಭಾರತೀಯ ಮೂಲದ ಪತ್ನಿ ವಿನಿ ರಾಮನ್ ಅವರನ್ನು ವಿವಾಹವಾಗಿದ್ದರು. ವಿನಿ ರಾಮನ್ ಅವರು ವೃತ್ತಿಯಲ್ಲಿ ಮೆಲ್ಬೋರ್ನ್ ಮೂಲದ ಫಾರ್ಮಾಸಿಸ್ಟ್ ಆಗಿದ್ದಾರೆ. "ನಮ್ಮ ಬದುಕಿನ ಕಾಮನಬಿಲ್ಲು ಆಗಿರುವ ಮಗುವು ಸೆಪ್ಟೆಂಬರ್ 2023ಕ್ಕೆ ಬರಲಿದೆ ಎಂದು ಘೋಷಿಸಲು ಗ್ಲೆನ್ ಮತ್ತು ನಾನು ಭಾವುಕರಾಗಿದ್ದೇವೆ" ಎಂದು ವಿನಿ ರಾಮನ್ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

'ನಮ್ಮ ಈ ಪ್ರಯಾಣವು ಸುಗಮ ಹಾಗೂ ಸುಲಭವಾಗಿರಲಿಲ್ಲ ಎಂದು ಒಪ್ಪಿಕೊಳ್ಳುವುದು ನಮಗೆ ಬಹಳ ಮುಖ್ಯವಾಗಿದೆ. ನಿಮಗೆ ಮಗು ಯಾವಾಗ ಎಂದು ಕೇಳುವ ಪೋಸ್ಟ್‌ಗಳನ್ನು ನೋಡುವುದು ಎಷ್ಟು ನೋವಿನಿಂದ ಕೂಡಿದೆ ಎಂದು ನನಗೆ ತಿಳಿದಿದೆ. ಫಲವತ್ತತೆ ಅಥವಾ ನಷ್ಟದೊಂದಿಗೆ ಹೋರಾಡುತ್ತಿರುವ ಇತರ ದಂಪತಿಗಳಿಗೆ ನಾವು ನಮ್ಮ ಪ್ರೀತಿ ಮತ್ತು ಶಕ್ತಿಯನ್ನು ಕಳುಹಿಸುತ್ತೇವೆ' ಎಂದು ಅವರು ಬರೆದುಕೊಂಡಿದ್ದಾರೆ.

ವಿನಿ ರಾಮನ್ ಅವರು ಮಗುವನ್ನು 'ರೇನ್ಬೋ ಬೇಬಿ' ಎಂದು ಕರೆದಿದ್ದಾರೆ. ಇದು ಗರ್ಭಪಾತ, ಹುಟ್ಟುವ ವೇಳೆಗೆ ಮಗುವಿನ ಸಾವು ಅಥವಾ ನೈಸರ್ಗಿಕ ಕಾರಣದಿಂದ ಶಿಶುವಿನ ಮರಣದ ನಂತರ ಜನಿಸಿದ ಮಗುವನ್ನು ಸೂಚಿಸುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ವಿನಿ ರಾಮನ್‌ ಗರ್ಭಪಾತಕ್ಕೆ ಒಳಗಾಗಿದ್ದರು ಎಂದು ಹೇಳುವುದು ಇಲ್ಲಿ ಅಗತ್ಯವಾಗಿದೆ.

ಇನ್ನು ಆಸ್ಟ್ರೇಲಿಯಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಳೆದ ವರ್ಷದ ಐಪಿಎಲ್‌ಅನ್ನು ಬಹುತೇಕವಾಗಿ ಕಳೆದುಕೊಂಡಿದ್ದರು. ಮನೆಯಲ್ಲಿ ಸಂಭವಿಸಿದ, ವಿಚಿತ್ರ ಅಪಘಾತದಲ್ಲಿ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. 2023ರ ಐಪಿಎಲ್‌ ವೇಳೆಗೆ ಅವರು ತಂಡಕ್ಕೆ ವಾಪಸಾಗಿದ್ದರು.

IPL 2023: ಚಿನ್ನಸ್ವಾಮಿಯಲ್ಲಿ ಪೂರನ್‌ ವೈಲೆಂಟ್‌, ಆರ್‌ಸಿಬಿ ಫುಲ್‌ ಸೈಲೆಂಟ್‌!

34 ವರ್ಷದ ಮ್ಯಾಕ್ಸ್‌ವೆಲ್‌ ಐಪಿಎಲ್‌ 2023ರಲ್ಲಿ ಆರ್‌ಸಿಬಿ ಪರವಾಗಿ ಅದ್ಭುತ ಆಟವಾಡಿದ್ದಾರೆ. ಇದುವರೆಗೆ 11 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 186.44 ರ ಸ್ಟ್ರೈಕ್ ರೇಟ್‌ನಲ್ಲಿ 4 ಅರ್ಧಶತಕಗಳೊಂದಿಗೆ 330 ರನ್ ಗಳಿಸಿದ್ದಾರೆ.ಒಟ್ಟಾರೆ ಅವರ ಐಪಿಎಲ್ ವೃತ್ತಿಜೀವನದಲ್ಲಿ, ಮ್ಯಾಕ್ಸ್‌ವೆಲ್ 17 ಅರ್ಧಶತಕಗಳೊಂದಿಗೆ 2,649 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 157.3. ವಿನಿ ರಾಮನ್ ಅವರು ಭಾರತಕ್ಕೆ ಬಂದಿದ್ದರು ಮತ್ತು ಕಳೆದ ತಿಂಗಳು ಐಪಿಎಲ್ 2023 ರ ಭಾಗವಾಗಿ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಮ್ಯಾಕ್ಸ್‌ವೆಲ್ ಮತ್ತು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಐಪಿಎಲ್‌ 2023ಯಲ್ಲಿ ನಾಲ್ಕು ಶತಕದ ಜೊತೆಯಾಟವನ್ನು ಆಡಿದ್ದಾರೆ. ಮುಂಬೈ ವಿರುದ್ಧ ಮ್ಯಾಕ್ಸ್‌ವೆಲ್‌ ಹಾಗೂ ಪ್ಲೆಸಿಸ್‌ 120 ರನ್‌ಗಳ ಜೊತೆಯಾಟವಾಡಿದ್ದರು. "ನಾನು ಮತ್ತು ಫಾಫ್ ಕೆಲವು ಉತ್ತಮ ಜೊತೆಯಾಟವಾಡಿದ್ದೇವೆ, ಆದ್ದರಿಂದ ಬಹಳ ಆನಂದದಾಯಕವಾಗಿತ್ತು" ಎಂದು ಪಂದ್ಯದ ವೇಳೆ ಹೇಳಿದ್ದರು.

IPL 2023: ಬ್ಯಾಟಿಂಗ್‌ ಸ್ವರ್ಗದಲ್ಲಿ ಆರ್‌ಸಿಬಿ ತ್ರಿಮೂರ್ತಿಗಳ ರುದ್ರತಾಂಡವ

Follow Us:
Download App:
  • android
  • ios