*ಮತ್ತೊಮ್ಮೆ ಅಗ್ರ ಪಟ್ಟಕ್ಕೇರಿದ ಸರ್ ರವೀಂದ್ರ ಜಡೇಜಾ* ಶ್ರೀಲಂಕಾ ವಿರುದ್ಧ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ* ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಜಡ್ಡು

ಮೊಹಾಲಿ(ಮೇ 09) ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಸರ್ ರವೀಂದ್ರ ಜಡೇಜಾ (Ravindra Jadeja) ಇದೀಗ ಟೆಸ್ಟ್ ಆಲ್ ರೌಂಡರ್(Test Cricket) ಪಟ್ಟಿಯಲ್ಲಿ ನಂಬರ್ ಒನ್. ಮೊಹಾಲಿಯಲ್ಲಿ (Mohali)ನೀಡಿದ ಅದ್ಭುತ ಪ್ರದರ್ಶನದ ಕಾರಣ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ (Srilanka)ವಿರುದ್ಧ ಟೆಸ್ಟ್ ನಲ್ಲಿ ಅಜೇಯ 175 ರನ್‌ ಸಿಡಿಸಿ ಬ್ಯಾಟಿಂಗ್ ವಿಭಾಗದಲ್ಲಿ 17 ಸ್ಥಾನಗಳ ಏರಿಕೆ ಕಂಡಿರುವ ಜಡೇಜಾ 54ರಿಂದ 34ನೇ ಸ್ಥಾನಕ್ಕೇರಿದ್ದಾರೆ. ಇನ್ನು 9 ವಿಕೆಟ್ ಪಡೆದ ಜಡೇಜಾ ಬೌಲರ್‌ಗಳ ಪಟ್ಟಿಯಲ್ಲಿ 17ನೇ ಸ್ಥಾನಕ್ಕೇರಿದ್ದಾರೆ. ಟೆಸ್ಟ್‌ ಆಲ್ ರೌಂಡರ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಸ್ಥಾನ ಪಲ್ಲಟವಾಗಿಒದ್ದಾರೆ. ಜಡೇಜಾ 2017ರ ಆಗಸ್ಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಆದರೆ ಆಗ ಕೇವಲ ಒಂದು ವಾರಗಳ ಕಾಲ ಮಾತ್ರವೇ ಅಗ್ರಸ್ಥಾನದಲ್ಲಿ 'ಸರ್' ಇದ್ದರು.

IPL 2022: ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕನಾಗಲಾರ ಎಂದ ಡೇನಿಯಲ್ ವೆಟ್ಟೋರಿ

ಭಾರತವು ಮೊದಲ ಇನಿಂಗ್ಸ್ ನಲ್ಲಿ 228 ರನ್ ಗಳಿಸಿ 5 ವಿಕೆಟ್‌ ಕಳೆದುಕೊಂಡಿತ್ತು. ನಂತರ ನಂ. 7 ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಜಡೇಜಾ ರಲ್ಲಿ ಬಂದ ಜಡೇಜಾ 228 ಎಸೆತ ಎದುರಿಸಿ ಅವರ ಅಜೇಯ 175 ಕ್ಕೆ ಗಳಿಸಿದರು. ಚೆಂಡು ವಿಪರೀತ ತಿರುವು ಪಡೆದುಕೊಳ್ಳುತ್ತಿದೆ ಎಂಬುದನ್ನು ಅರಿತು ಭಾರತ ಡಿಕ್ಲೇರ್ ಮಾಡಿಕೊಂಡಿತು. 76.75 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಜಡೇಜಾ 17 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಆರ್ ಅಶ್ವಿನ್ ಅವರೊಂದಿಗೆ ಶತಕದ ಜೊತೆಯಾಟವನ್ನು ನಿಭಾಯಿಸಿ ಅಂತಿಮವಾಗಿ 8 ವಿಕೆಟಿಗೆ 574 ರನ್ ಗೆ ಡಿಕ್ಲೇರ್ ಮಾಡಲಾಯಿತು. ನಂತರ ಬ್ಯಾಟಿಂಗ್ ಇಳಿದ ಶ್ರೀಲಂಕಾ ಇನಿಂಗ್ಸ್ ಸೋಲು ಕಂಡಿತು. ಬೌಲಿಂಗ್ ನಲ್ಲಿಯೂ ಮಿಂಚಿದ ಸರ್ ಜಡೇಜಾ ಎರಡು ಇನಿಂಗ್ಸ್ ಸೇರಿ ಒಂಭತ್ತು ವಿಕೆಟ್ ಕಿತ್ತರು. 

ಬ್ಯಾಟಿಂಗ್ ದಿಗ್ಗಜನ ಆಟ: ಆಧುನಿಕ ಜಗತ್ತಿನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ 100 ನೇ ಟೆಸ್ಟ್‌ನಲ್ಲಿ 45 ರನ್ ಗಳಿಸಿದರು.ಈ ಮೂಲಕ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನ ಬಡ್ತಿ ಪಡೆದು ನಂ. 5 ಕ್ಕೆ ತಲುಪಿದರು. 96 ರನ್ ಗಳಿಸಿದ ರಿಷಬ್ ಪಂತ್ ಒಂದು ಸ್ಥಾನ ಜಿಗಿದು ಅಗ್ರ ಹತ್ತರೊಳಗೆ ಪ್ರವೇಶಿಸಿದರೆ ಆಸ್ಟ್ರೇಲಿಯಾದ ಯುವ ಬ್ಯಾಟರ್ ಮಾರ್ನಾಸ್ ಲ್ಯಾಬುಶೈನ್ ಅಗ್ರಸ್ಥಾನದಲ್ಲಿದ್ದು 936 ಅಂಕಗಳನ್ನು ಸಂಪಾದನೆಯಲ್ಲಿದ್ದಾರೆ. ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದಾರೆ. 

ಪಾಕಿಸ್ತಾನ -ಆಸ್ಟ್ರೇಲಿಯಾ ಟೆಸ್ಟ್: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಟೆಸ್ಟ್ ಶ್ರೇಯಾಂಕದ ಮೇಲೆ ಪರಿಣಾಂ ಬೀರುತ್ತಿದೆ. ಪಾಕಿಸ್ತಾದ ಯುವ ಆಟಗಾರ ಇಮಾಮ್-ಉಲ್-ಹಕ್ ಅವರು ಶತಕ ದಾಖಲಿಸಿಕೊಂಡರು. ಅಜರ್ ಅಲಿ 12 ನೇ ಸ್ಥಾನಕ್ಕೆ ಜಿಗಿದರು 

ರವಿಚಂದ್ರನ್ ಅಶ್ವಿನ್ ಮ್ಯಾಜಿಕ್: ವಿಶ್ವ ಕ್ರಿಕೆಟ್‌ನಲ್ಲಿ ಹಾಲಿ ಅಗ್ರಮಾನ್ಯ ಆಫ್‌ ಸ್ಪಿನ್ನರ್‌ ಎನಿಸಿಕೊಂಡಿರುವ ಭಾರತದ ಆರ್‌.ಅಶ್ವಿನ್‌ (Ravichandran Ashwin) ತಮ್ಮ ಟೆಸ್ಟ್‌ ಬದುಕಿನಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ ಕಬಳಿಸಿದ ಅವರು ತಮ್ಮ ಒಟ್ಟಾರೆ ಗಳಿಕೆಯನ್ನು 436ಕ್ಕೆ ಏರಿಸಿಕೊಂಡಿದ್ದರು. ತನ್ಮೂಲಕ, ದಿಗ್ಗಜ ವೇಗಿ ಕಪಿಲ್‌ ದೇವ್‌ (Kapil Dev) ಅವರ 434 ವಿಕೆಟ್‌ ಸಾಧನೆಯನ್ನು ಹಿಂದಿಕ್ಕಿ ವಿಕೆಟ್‌ ಗಳಿಕೆಯಲ್ಲಿ ಭಾರತದ ನಂ.2 ಟೆಸ್ಟ್‌ ಬೌಲರ್‌ ಸ್ಥಾನ ಪಡೆದುಕೊಂಡಿದ್ದು. ದಿಗ್ಗಜ ಅನಿಲ್‌ ಕುಂಬ್ಳೆ (619 ವಿಕೆಟ್‌) ಮೊದಲ ಸ್ಥಾನದಲ್ಲಿದ್ದಾರೆ.

ಬಿ.ಟೆಕ್‌ ಪದವೀಧರರಾಗಿರುವ 35 ವರ್ಷದ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ ವಿಕೆಟ್‌ ಗಳಿಕೆಗೆ ಹೆಸರುವಾಸಿಯಾಗಿದ್ದಾರೆ. ಅತಿ ವೇಗದ 50, 100, 150, 200, 250, 300, 350, 400 ವಿಕೆಟ್‌ ಗಳಿಕೆಯ ದಾಖಲೆಗಳೆಲ್ಲ ಅಶ್ವಿನ್‌ ಹೆಸರಿನಲ್ಲಿಯೇ ಇನ್ನು ಇನ್ನಷ್ಟು ಕ್ರಿಕೆಟ್ ಜೀವನ ಬಾಕಿ ಇದೆ.