ಏಕದಿನ ವಿಶ್ವಕಪ್ ಬಹಿಷ್ಕರಿಸಲು ಪಾಕ್ಗೆ ಅಸಾಧ್ಯ: ರವಿಚಂದ್ರನ್ ಅಶ್ವಿನ್
* ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
* ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಹಿಷ್ಕರಿಸಲು ಪಾಕ್ ನಿರ್ಧಾರ
* ಪಾಕ್‌ನಿಂದ ಈ ನಿರ್ಧಾರ ಕೈಗೊಳ್ಳಲು ಅಸಾಧ್ಯವೆಂದ ರವಿಚಂದ್ರನ್ ಅಶ್ವಿನ್
ನವದೆಹಲಿ(ಫೆ.08): ಏಷ್ಯಾಕಪ್ಗೆ ಭಾರತ ತಂಡ ಪಾಕಿಸ್ತಾನಕ್ಕೆ ಬಾರದಿದ್ದರೆ ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸಲಿದೆ ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಬೆದರಿಕೆಗೆ ಆರ್.ಅಶ್ವಿನ್ ವ್ಯಂಗ್ಯವಾಡಿದ್ದು, ವಿಶ್ವಕಪ್ ಬಹಿಷ್ಕರಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಏಷ್ಯಾಕಪ್ ಯುಎಇ ಬದಲು ಶ್ರೀಲಂಕಾದಲ್ಲಿ ನಡೆದರೆ ಉತ್ತಮ ಎಂದು ಅವರು ಅಭಿಪ್ರಾಯಿಸಿದ್ದಾರೆ.
‘ಭಾರತ ಎಲ್ಲಿಗಾದರೂ ಹೋಗಲ್ಲ ಎಂದರೆ ಅವರೂ ಭಾರತಕ್ಕೆ ಬರಲ್ಲ ಎನ್ನುವುದು ಸಾಮಾನ್ಯ. ಅದೇ ರೀತಿ ಪಾಕ್ ಕೂಡಾ ಹೇಳಿದೆ. ಆದರೆ ಅದು ಸಾಧ್ಯವಿಲ್ಲ. ಏಷ್ಯಾಕಪ್ನಲ್ಲಿ ಆಡಲ್ಲ ಎಂದು ಭಾರತ ಈಗಾಗಲೇ ಘೋಷಿಸಿದೆ. ಭಾರತ ಆಡಬೇಕಿದ್ದರೆ ಏಷ್ಯಾಕಪನ್ನು ದುಬೈ ಅಥವಾ ಬೇರೆ ಕಡೆ ನಡೆಸಲಿ’ ಎಂದಿದ್ದಾರೆ.
2023ರ ಏಷ್ಯಾಕಪ್ ಟೂರ್ನಿಯ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡಮಟ್ಟದ ಚರ್ಚೆ ಚಾಲ್ತಿಯಲ್ಲಿದೆ. 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವನ್ನು ವಹಿಸಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದರೇ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯಲಿದೆ. ಇದರ ಬದಲು, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ನಡೆದರೆ ಮಾತ್ರ, ಟೀಂ ಇಂಡಿಯಾ ಆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಖಚಿತ ನಿಲುವನ್ನು ಪ್ರಕಟಿಸಿದೆ.
ಜೂನಿಯರ್ ಅಶ್ವಿನ್ ಬಳಿ ಆಸೀಸ್ ಅಭ್ಯಾಸದ ಬಗ್ಗೆ ಮಾಹಿತಿ ಪಡೆದ ಆರ್.ಅಶ್ವಿನ್!
ನಾಗ್ಪುರ: ಭಾರತ ವಿರುದ್ಧದ ಸರಣಿಗೆ ಆಸ್ಪ್ರೇಲಿಯಾ ಆಟಗಾರರು ಹೇಗೆ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಆಸೀಸ್ ತಂಡಕ್ಕೆ ನೆರವು ನೀಡುತ್ತಿರುವ ಬರೋಡಾದ ಸ್ಪಿನ್ನರ್, ‘ಜೂನಿಯರ್ ಅಶ್ವಿನ್’ ಎಂದೇ ಖ್ಯಾತಿ ಪಡೆದಿರುವ ಮಹೇಶ್ ಪಥಿನಾ ಬಳಿ ಭಾರತದ ಅಗ್ರ ಸ್ಪಿನ್ನರ್ ಆರ್.ಅಶ್ವಿನ್ ಮಾಹಿತಿ ಪಡೆದಿದ್ದಾರೆ.
'ಭಾರತ ನರಕಕ್ಕೆ ಹೋಗಲಿ' ಎಂದ ಜಾವೇದ್ ಮಿಯಾಂದಾದ್ ಸೊಕ್ಕಡಗಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್..!
ಮಂಗಳವಾರ ನೆಟ್ಸ್ ಅಭ್ಯಾಸದ ವೇಳೆ ಮಹೇಶ್ ಜೊತೆ ದೀರ್ಘಕಾಲ ಮಾತುಕತೆ ನಡೆಸಿದ ಅಶ್ವಿನ್, ಅಗತ್ಯ ಮಾಹಿತಿ ಕಲೆಹಾಕಿದರು. ಇದೇ ವೇಳೆ ನೆಟ್ಸ್ನಲ್ಲಿ ಸ್ಟೀವ್ ಸ್ಮಿತ್ರನ್ನು ಕನಿಷ್ಠ 6 ಬಾರಿ ಔಟ್ ಮಾಡಿದ್ದಾಗಿ ಅಶ್ವಿನ್‌ಗೆ ಮಹೇಶ್ ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆ್ಯರೋನ್ ಫಿಂಚ್ ಗುಡ್ಬೈ
ಮೆಲ್ಬರ್ನ್: ಆಸ್ಪ್ರೇಲಿಯಾದ ತಾರಾ ಬ್ಯಾಟರ್, ಟಿ20 ವಿಶ್ವಕಪ್ ವಿಜೇತ ನಾಯಕ ಆ್ಯರೋನ್ ಫಿಂಚ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2021ರ ಟಿ20 ವಿಶ್ವಕಪ್ನಲ್ಲಿ ಆಸ್ಪ್ರೇಲಿಯಾ ಆ್ಯರೋನ್ ಫಿಂಚ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಕಳೆದ ವರ್ಷವೇ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆ್ಯರೋನ್ ಫಿಂಚ್, 2024ರ ಟಿ20 ವಿಶ್ವಕಪ್ ವರೆಗೂ ತಂಡದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ವಿದಾಯ ಘೋಷಿಸಿದ್ದಾರೆ.
2011ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಆ್ಯರೋನ್ ಫಿಂಚ್ 5 ಟೆಸ್ಟ್, 102 ಟಿ20 ಹಾಗೂ 146 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಕೊನೆ ಬಾರಿ ಅವರು ತಂಡದ ಪರ ಆಡಿದ್ದರು. ಅವರು 76 ಟಿ20, 55 ಏಕದಿನ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿಹೆಚ್ಚು ರನ್ ಸಿಡಿಸಿ ದಾಖಲೆ ಫಿಂಚ್ ಹೆಸರಲ್ಲಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧ ಅವರು 172 ರನ್ ಗಳಿಸಿದ್ದರು.