ರಣಜಿ ಟ್ರೋಫಿ ಫೈನಲ್‌ನತ್ತ ದಾಪುಗಾಲಿಡುತ್ತಿರುವ ಮಧ್ಯಪ್ರದೇಶ, ಮುಂಬೈಬೆಂಗಾಲ್ ಎದುರು ಸ್ಪಷ್ಟ ಮೇಲುಗೈ ಸಾಧಿಸಿದ ಮಧ್ಯಪ್ರದೇಶಮುಂಬೈ ಬಿಗಿ ಹಿಡಿತದಲ್ಲಿದೆ ಉತ್ತರಪ್ರದೇಶ
ಬೆಂಗಳೂರು(ಜೂ.17): 2022ರ ಸಾಲಿನ ರಣಜಿ ಟ್ರೋಫಿಯ (Ranji Trophy) ಸೆಮಿಫೈನಲ್ ಪಂದ್ಯಗಳಲ್ಲಿ ಮಧ್ಯಪ್ರದೇಶ ಹಾಗೂ ಮುಂಬೈ ತಂಡಗಳು ಪ್ರಶಸ್ತಿ ಸುತ್ತಿನತ್ತ ದಾಪುಗಾಲಿಡಲಾರಂಭಿಸಿವೆ. ಮೂರನೇ ದಿನದಾಟದಲ್ಲೂ ಈ ಎರಡು ತಂಡಗಳು ತಮ್ಮ ಪ್ರಾಬಲ್ಯವನ್ನು ಮೆರೆದಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ಎದುರು ಮಧ್ಯಪ್ರದೇಶ ತಂಡವು ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ. ಇನ್ನೊಂದೆಡೆ ಎರಡನೇ ಸೆಮೀಸ್‌ನಲ್ಲಿ 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡವು ಉತ್ತರ ಪ್ರದೇಶದ ಎದುರು ಸ್ಪಷ್ಟ ಮೇಲುಗೈ ಸಾಧಿಸಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ (Bengal) ವಿರುದ್ಧ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಆರಂಭಿಕ ಕುಸಿತ ಕಂಡ ಹೊರತಾಗಿಯೂ ಮನೋಜ್ ತಿವಾರಿ-ಶಾಬಾಜ್ ಅಹ್ಮದ್ ಅವರ ಶತಕದ ನೆರವಿನಿಂದ ಬೆಂಗಾಲ್ ದೊಡ್ಡ ಹಿನ್ನಡೆ ಅನುಭವಿಸುವುದರಿಂದ ಪಾರಾಯಿತು. ಮಧ್ಯಪ್ರದೇಶ ಮೊದಲಇನ್ನಿಂಗ್ಸ್‌ನಲ್ಲಿ 341 ರನ್ ಕಲೆ ಹಾಕಿದ್ದರೆ, ಬೆಂಗಾಲ್ ಗುರುವಾರ 273ಕ್ಕೆ ಆಲೌಟಾಯಿತು.
ಕ್ವಾರ್ಟರ್‌ನಲ್ಲೂ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಕ್ರೀಡಾ ಸಚಿವ ಮನೋಜ್ ತಿವಾರಿ (Manoj Tiwary) 102 ರನ್ ಸಿಡಿಸಿದರೆ, ಶಾಬಾಜ್ 116 ರನ್‌ಗೆ ವಿಕೆಟ್ ಒಪ್ಪಿಸಿದರು. ತಂಡದ 8 ಮಂದಿ ಎರಡಂಕಿ ಮೊತ್ತ ಗಳಿಸಲು ವಿಫಲರಾದರು. ಕುಮಾರ್ ಕಾರ್ತಿಕೇಯ, ಶರನ್ಶ್ ಜೈನ್ ಹಾಗೂ ಪುನೀತ್ ತಲಾ 3 ವಿಕೆಟ್ ಪಡೆದರು. ಇನ್ನು 68 ಮುನ್ನಡೆಯೊಂದಿಗೆ ಮಧ್ಯಪ್ರದೇಶ 2ನೇ ಇನ್ನಿಂಗ್ಸ್ ಆರಂಭಿಸಿದ್ದು 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 163 ರನ್ ಗಳಿಸಿದೆ. ತಂಡ ಒಟ್ಟು 231 ರನ್ ಮುನ್ನಡೆಯಲ್ಲಿದೆ.
ಉತ್ತರ ಪ್ರದೇಶ ಎದುರು ಮುಂಬೈ ಬಿಗಿಹಿಡಿತ
ಬೆಂಗಳೂರು: 2022ರ ಸಾಲಿನ ರಣಜಿ ಟ್ರೋಫಿ 2ನೇ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಬಿಗಿ ಹಿಡಿತ ಸಾಧಿಸಿದ್ದು, ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿದೆ. ಮುಂಬೈನ ಮೊದಲ ಇನ್ನಿಂಗ್‌್ಸನ 393 ರನ್‌ಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಉ.ಪ್ರದೇಶ 2ನೇ ದಿನ 2 ವಿಕೆಟ್‌ಗೆ 25 ರನ್ ಗಳಿಸಿತ್ತು. ಗುರುವಾರ 180 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ಶಿವಂ ಮಾವಿ 48 ರನ್ ಸಿಡಿಸಿ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಮಾಧವ್ ಕೌಶಿಕ್ 38, ನಾಯಕ ಕರಣ್ ಶರ್ಮಾ 27 ರನ್ ಗಳಿಸಿದರು. ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ತನುಶ್ ಕೋಟ್ಯಾನ್ ತಲಾ 3 ವಿಕೆಟ್ ಪಡೆದಿದ್ದಾರೆ.
Ranji Trophy: ಸೆಮೀಸ್‌ನಲ್ಲಿ ಮುಂಬೈ, ಮಧ್ಯಪ್ರದೇಶ ಮೇಲುಗೈ
ಮೊದಲ ಇನ್ನಿಂಗ್‌್ಸನಲ್ಲಿ 213 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ಮುಂಬೈ ಬಳಿಕ 2ನೇ ಇನ್ನಿಂಗ್‌್ಸ ಆರಂಭಿಸಿದ್ದು, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 133 ರನ್ ಕಲೆ ಹಾಕಿದೆ. ಪೃಥ್ವಿ ಶಾ 71 ಎಸೆತಗಳಲ್ಲಿ 64 ರನ್ ಸಿಡಿಸಿದರು. ಮೊದಲ ಇನ್ನಿಂಗ್‌್ಸನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್(35) ಹಾಗೂ ಅಮನ್ ಜಾಫರ್(32) ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಒಟ್ಟು 346 ರನ್ ಮುನ್ನಡೆಯಲ್ಲಿದೆ.
ಇಂದಿನಿಂದ ಎಸಿಸಿ ಮಹಿಳಾ ಟಿ20 ಕ್ರಿಕೆಟ್ ಲೀಗ್
ಕೌಲಾಲಂಪುರ: ಎಸಿಸಿ ಮಹಿಳಾ ಟಿ20 ಚಾಂಪಿಯನ್‌ಶಿಪ್ 9 ವರ್ಷಗಳ ಬಳಿಕ ಮತ್ತೆ ನಡೆಯಲಿದ್ದು, ಶುಕ್ರವಾರ ಕೌಲಾಲಂಪುರದಲ್ಲಿ ಆರಂಭವಾಗಲಿದೆ. ಟೂರ್ನಿಯಲ್ಲಿ ಯುಎಇ, ಮಲೇಷ್ಯಾ, ಒಮಾನ್, ಖತರ್, ನೇಪಾಳ, ಹಾಂಕಾಂಗ್, ಕುವೈತ್, ಬಹರೇನ್, ಸಿಂಗಾಪೂರ ಹಾಗೂ ಭೂತಾನ್ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳಲಿವೆ.
