ರಣಜಿ ಟ್ರೋಫಿ ಸೆಮೀಸ್ ಪಂದ್ಯಾಟಗಳಲ್ಲಿ ಮುಂಬೈ, ಮಧ್ಯಪ್ರದೇಶ ಮೇಲುಗೈಬೆಂಗಾಲ್ ತಂಡಕ್ಕೆ ಆಸರೆಯಾಗಿರುವ ಮನೋಜ್ ತಿವಾರಿ, ಶಾಬಾಜ್ಉತ್ತರ ಪ್ರದೇಶ ಎದುರು ಹಿಡಿತ ಸಾಧಿಸಿದ ಮುಂಬೈ
ಬೆಂಗಳೂರು(ಜೂ.16): ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳು ಮೇಲುಗೈ ಸಾಧಿಸಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಿರುದ್ದ ಮಧ್ಯಪ್ರದೇಶ ಹಿಡಿತ ಸಾಧಿಸಿದ್ದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ 41 ಬಾರಿಯ ಚಾಂಪಿಯನ್ ಮುಂಬೈ ತಂಡವು ಉತ್ತರ ಪ್ರದೇಶ ವಿರುದ್ದ ಮೇಲುಗೈ ಸಾಧಿಸಿದೆ.
ಹೌದು, 2022ರ ಸಾಲಿನ ರಣಜಿ ಟ್ರೋಫಿಯ (Ranji Trophy Cricket Tournament) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಮಧ್ಯಪ್ರದೇಶ ಮೇಲುಗೈ ಸಾಧಿಸಿದೆ. ಆದರೆ ದೊಡ್ಡ ಅಂತರದಲ್ಲಿ ಇನ್ನಿಂಗ್‌್ಸ ಮುನ್ನಡೆ ಪಡೆಯುವ ಕನಸಿಗೆ ಮನೋಜ್ ತಿವಾರಿ(Manoj Tiwary) - ಶಾಬಾಜ್ ಅಹ್ಮದ್ ಅಡ್ಡಿಯಾಗಿದ್ದಾರೆ. ಮೊದಲ ದಿನದದಂತ್ಯಕ್ಕೆ 86 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 271 ರನ್ ಕಲೆ ಹಾಕಿದ್ದ ಮಧ್ಯ ಪ್ರದೇಶ ಬುಧವಾರ 341ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. 134 ರನ್ ಸಿಡಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಹಿಮಾಂಶು ಮಂತ್ರಿ 165 ರನ್ ಸಿಡಿಸಿ ನಿರ್ಗಮಿಸಿದರು. ಪುನೀತ್ ದುಬೆ 22 ರನ್ ಕೊಡುಗೆ ನೀಡಿದರು. ಮುಕೇಶ್ ಕುಮಾರ್ 4, ಶಾಬಾಜ್ ಅಹ್ಮದ್ 3 ವಿಕೆಟ್ ಪಡೆದರು.
ಬೆಂಗಾಲ್‌ಗೆ ಮನೋಜ್, ಶಾಬಾಜ್ ಆಸರೆ
ದೊಡ್ಡ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಾಲ್ ರನ್ ಖಾತೆ ತೆರೆಯುವ ಮೊದಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ 54 ರನ್‌ಗೆ 5 ವಿಕೆಟ್ ಕಳೆದುಕೊಂಡ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ 6ನೇ ವಿಕೆಟ್‌ಗೆ ಜೊತೆಯಾದ ಪಶ್ಚಿಮ ಬಂಗಾಲ ಸರ್ಕಾರದ ಕ್ರೀಡಾ ಸಚಿವರೂ ಆಗಿರುವ ತಿವಾರಿ ಹಾಗೂ ಆಲ್ರೌಂಡರ್ ಶಾಬಾಜ್ 143 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಮನೋಜ್(84) ಸತತ 2ನೇ ಶತಕದ ನಿರೀಕ್ಷೆಯಲ್ಲಿದ್ದು, ಶಾಜಾಬ್ 72 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ತಂಡ ಇನ್ನೂ 144 ರನ್ ಹಿನ್ನಡೆಯಲ್ಲಿದೆ.
ಮುಂಬೈ ಮೇಲುಗೈ:
2022ರ ಸಾಲಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ದಾಖಲೆಯ 41 ಬಾರಿ ಚಾಂಪಿಯನ್ ಮುಂಬೈ ಮೇಲುಗೈ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಮುಂಬೈ ಮೊದಲ ದಿನದಂತ್ಯಕ್ಕೆ ಯಶಸ್ವಿ ಜೈಸ್ವಾಲ್(100) ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 260 ರನ್ ಕಲೆ ಹಾಕಿತ್ತು.
ಜೂ.18ಕ್ಕೆ ಕೆಎಲ್ ರಾಹುಲ್‌ಗೆ ಫಿಟ್ನೆಸ್ ಟೆಸ್ಟ್, ಇಂಗ್ಲೆಂಡ್ ಪ್ರವಾಸಕ್ಕೆ ಅನುಮಾನ?
ಬುಧವಾರ ಮತ್ತೆ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ ತಂಡ 393 ರನ್‌ಗಳ ದೊಡ್ಡ ಮೊತ್ತ ಗಳಿಸಿ ಆಲೌಟ್ ಆಯಿತು. ಮಂಗಳವಾರ 51 ರನ್ ಗಳಿಸಿದ್ದ ಹಾರ್ದಿಕ್ ತಮೋರೆ ಉತ್ತರ ಪ್ರದೇಶ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅವರು 233 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರನ್ನೊಳಗೊಂಡ 115 ರನ್ ಸಿಡಿಸಿದರು. ಶಮ್ಸ್ ಮುಲಾನಿ 50 ರನ್ ಕೊಡುಗೆ ನೀಡಿದರು. ಈ ಜೋಡಿ 6ನೇ ವಿಕೆಟ್‌ಗೆ 113 ರನ್ ಜೊತೆಯಾಟವಾಡಿತು. ತಂಡದ ಕೊನೆ 4 ವಿಕೆಟ್ ಕೇವಲ 7 ರನ್ ಅಂತರದಲ್ಲಿ ಉರುಳಿತು. ಕರಣ್ ಶರ್ಮಾ 4, ಸೌರಭ್ ಕುಮಾರ್ 3 ವಿಕೆಟ್ ಕಿತ್ತರು.
ಯುಪಿಗೆ ಆರಂಭಿಕ ಆಘಾತ:
ಬಳಿಕ ಬ್ಯಾಟಿಂಗ್ ಆರಂಭಿಸಿದ ಉತ್ತರ ಪ್ರದೇಶ 2ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದ್ದು, ಇನ್ನೂ 368 ರನ್ ಹಿನ್ನಡೆಯಲ್ಲಿದೆ. ಧವಲ್ ಕುಲ್ಕರ್ಣಿ ಹಾಗೂ ತುಷಾರ್ ದೇಶಪಾಂಡೆ ತಲಾ 1 ವಿಕೆಟ್ ಪಡೆದಿದ್ದಾರೆ.
