ರಣಜಿ ಟ್ರೋಫಿ ಸೆಮಿಫೈನಲ್: ಸೌರಾಷ್ಟ್ರ 527ಕ್ಕೆ ಆಲೌಟ್ಮೊದಲ ಇನಿಂಗ್ಸ್ ಮುನ್ನಡೆ ಸಂಪಾದಿಸಿದ ಸೌರಾಷ್ಟ್ರಇಂದು ಕೊನೆ ದಿನ, ಡ್ರಾ ಆದ್ರೆ ಸೌರಾಷ್ಟ್ರ ಫೈನಲ್‌ಗೆ ಲಗ್ಗೆ
ಬೆಂಗಳೂರು(ಫೆ.12): ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಫೈನಲ್ ಪ್ರವೇಶಿಸುವ ಕರ್ನಾಟಕದ ಕನಸು ಭಗ್ನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸೆಮಿಫೈನಲ್ನಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ಇನ್ನಿಂಗ್‌್ಸ ಮುನ್ನಡೆ ಸಾಧಿಸಲು ಯಶಸ್ವಿಯಾಗಿದ್ದು, 2019-20ರ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತಗೊಂಡಿದೆ. ಭಾನುವಾರ ಪಂದ್ಯದ ಕೊನೆ ದಿನವಾಗಿದ್ದು, ಅಸಾಧಾರಣ ಪ್ರದರ್ಶನ ತೋರಿ ಗೆದ್ದರೆ ಮಾತ್ರ ಕರ್ನಾಟಕಕ್ಕೆ ಫೈನಲ್ ತಲುಪುವ ಅವಕಾಶವಿದೆ. ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಅಧಾರದಲ್ಲಿ ಸೌರಾಷ್ಟ್ರ ಫೈನಲ್ಗೇರಲಿದೆ.
ಕರ್ನಾಟಕದ 407 ರನ್‌ಗೆ ಉತ್ತರವಾಗಿ 3ನೇ ದಿನ 4 ವಿಕೆಟ್ಗೆ 364 ರನ್ ಗಳಿಸಿದ್ದ ಸೌರಾಷ್ಟ್ರ ಶನಿವಾರ 527 ರನ್‌ಗೆ ಆಲೌಟಾಗಿ 120 ರನ್ ಮುನ್ನಡೆ ಸಾಧಿಸಿತು. 112 ರನ್ ಗಳಿಸಿ ಕ್ರೀಸ್ನಲ್ಲಿದ್ದ ನಾಯಕ ಅರ್ಪಿತ್ ವಸಾವ್ಡಾ, ಜಿರಾಗ್ ಜಾನಿ ಜೊತೆಗೂಡಿ 5ನೇ ವಿಕೆಟ್ಗೆ 142 ರನ್ ಜೊತೆಯಾಟವಾಡಿದರು. ಚಿರಾಗ್ 72ಕ್ಕೆ ವಿಕೆಟ್ ಒಪ್ಪಿಸಿದರೂ ಅರ್ಪಿತ್ ಅಬ್ಬರ ಕಡಿಮೆಯಾಗಲಿಲ್ಲ. ಅವರು 406 ಎಸೆತಗಳಲ್ಲಿ 21 ಬೌಂಡರಿ, 1 ಸಿಕ್ಸರ್ನೊಂದಿಗೆ 202 ರನ್ ಸಿಡಿಸಿ ನಿರ್ಗಮಿಸಿದರು. ವಿದ್ವತ್ ಕಾವೇರಪ್ಪ 5, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.
ರಾಜ್ಯಕ್ಕೆ ಶಾಕ್: ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಕರ್ನಾಟಕ ವೇಗವಾಗಿ ರನ್ ಕಲೆಹಾಕುವ ನಿರೀಕ್ಷೆಯಲ್ಲಿದ್ದರೂ ಸೌರಾಷ್ಟ್ರ ಬೌಲರ್ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಸಮರ್ಥ್(00), ಪಡಿಕ್ಕಲ್(07), ಮನೀಶ್ ಪಾಂಡೆ(04) ಬೇಗನೇ ನಿರ್ಗಮಿಸಿದರು. ಆದರೆ ಮಯಾಂಕ್ ಅಗರ್ವಾಲ್ 55, ನಿಕಿನ್ ಜೋಸ್ ಔಟಾಗದೆ 54 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ತಂಡ ಸದ್ಯ 4ಕ್ಕೆ 123 ರನ್ ಗಳಿಸಿದ್ದು, ಕೇವಲ 3 ರನ್ ಮುನ್ನಡೆಯಲ್ಲಿದೆ. ಭಾನುವಾರ ಮತ್ತಷ್ಟುರನ್ ಸೇರಿಸಿ, ಸೌರಾಷ್ಟ್ರವನ್ನು ಬೇಗನೇ ಆಲೌಟ್ ಮಾಡಲು ರಾಜ್ಯ ತಂಡ ಕಾಯುತ್ತಿದೆ.
Ranji Trophy: ಕರ್ನಾಟಕಕ್ಕೆ ಮತ್ತೆ ಸೌರಾಷ್ಟ್ರ ಕಂಟಕ; ಇನಿಂಗ್ಸ್ ಹಿನ್ನಡೆ ಭೀತಿ..!
ಸ್ಕೋರ್: ಸ್ಕೋರ್: ಕರ್ನಾಟಕ 407/10,
ಸೌರಾಷ್ಟ್ರ 527/10 (ಅರ್ಪಿತ್ 202, ಚಿರಾಗ್ 72, ವಿದ್ವತ್ 5-83)
ಕರ್ನಾಟಕ 2ನೇ ಇನ್ನಿಂಗ್‌್ಸ 123/4(ಮಯಾಂಕ್ 55, ನಿಕಿನ್ 54*, ಸಕಾರಿಯಾ 2-24)
ಮಧ್ಯಪ್ರದೇಶ ಎದುರು ಬಂಗಾಳ ಬಿಗಿ ಹಿಡಿತ..!
ಇಂದೋರ್: ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶ ವಿರುದ್ಧ ಬಂಗಾಳ ಬಿಗಿಹಿಡಿತ ಸಾಧಿಸಿದ್ದು, ಫೈನಲ್ಗೇರುವುದು ಬಹುತೇಕ ಖಚಿತಗೊಂಡಿದೆ. 2ನೇ ಇನ್ನಿಂಗ್್ಸನಲ್ಲಿ ಬಂಗಾಳ ತಂಡ ಅನುಸ್ತುಪ್(80), ಪ್ರದಿಪ್ತಾ ಪ್ರಮಾಣಿಕ್(ಔಟಾಗದೆ 60) ನೆರವಿನಿಂದ 4ನೇ ದಿನದಂತ್ಯಕ್ಕೆ 9 ವಿಕೆಟ್ಗೆ 279 ರನ್ ಗಳಿಸಿದ್ದು, ಬರೋಬ್ಬರಿ 547 ರನ್ ಮುನ್ನಡೆ ಪಡೆದಿದೆ.
ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ಬಂಗಾಳ ಫೈನಲ್ ತಲುಪಲಿದೆ. ಮೊದಲ ಇನ್ನಿಂಗ್್ಸನಲ್ಲಿ ಬಂಗಾಳದ 438 ರನ್‌ಗೆ ಉತ್ತರವಾಗಿ ಮಧ್ಯಪ್ರದೇಶ ಕೇವಲ 170 ರನ್‌ಗೆ ಸರ್ವಪತನ ಕಂಡಿತ್ತು.
