ರಣಜಿ ಟ್ರೋಫಿ ಟೂರ್ನಿಯ ಸೆಮೀಸ್‌ನಲ್ಲಿ ಕರ್ನಾಟಕ ಎದುರು ಸೌರಾಷ್ಟ್ರ ತಿರುಗೇಟುಇನಿಂಗ್ಸ್ ಹಿನ್ನಡೆ ಅನುಭವಿಸುವ ಭೀತಿಯಲ್ಲಿದೆ ಮಯಾಂಕ್ ಅಗರ್‌ವಾಲ್ ಪಡೆಆಕರ್ಷಕ ಶತಕ ಸಿಡಿಸಿ ಮಿಂಚಿದ ಸೌರಾಷ್ಟ್ರದ ಶೆಲ್ಡನ್ ಜ್ಯಾಕ್ಸನ್, ಅರ್ಪಿತ್ ವಸಾವ್ಡಾ
ಬೆಂಗಳೂರು(ಫೆ.11): ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಬದ್ಧವೈರಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡ ಅನುಭವಿಸುವ ಸಂಕಷ್ಟದ ಸಂಪ್ರದಾಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಿಂದಿನ 3 ನಾಕೌಟ್ ಮುಖಾಮುಖಿಗಳಲ್ಲಿ ಸೌರಾಷ್ಟ್ರಕ್ಕೆ ಶರಣಾಗಿದ್ದ ಕರ್ನಾಟಕ, ಈ ಸಲವೂ ಅದೇ ದಿಕ್ಕಿನಲ್ಲಿ ಸಾಗಿದೆ.
ಮಯಾಂಕ್ ಅಗರ್‌ವಾಲ್ ಸಾಹಸ ದಿಂದಾಗಿ ರಾಜ್ಯ ತಂಡ 400ಕ್ಕೂ ಹೆಚ್ಚು ರನ್ ಕಲೆ ಹಾಕಿದರೂ, ಶೆಲ್ಡನ್ ಜ್ಯಾಕ್ಸನ್ ಹಾಗೂ ಹಂಗಾಮಿ ನಾಯಕ ಅರ್ಪಿತ್ ವಸಾವ್ಡಾ ಮನಮೋಹಕ ಬ್ಯಾಟಿಂಗ್ನಿಂದಾಗಿ ಸೌರಾಷ್ಟ್ರ ತಂಡ ಸೆಮಿಫೈನಲ್ ಕಾದಾಟದಲ್ಲಿ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿಸುವತ್ತ ದಾಪುಗಾಲಿಟ್ಟಿದೆ.
ತಂಡ 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 364 ರನ್ ಗಳಿಸಿದ್ದು, ಇನ್ನು ಕೇವಲ 43 ರನ್ ಹಿನ್ನಡೆಯಲ್ಲಿದೆ. 5 ದಿನದ ಆಟದ ಮುಕ್ತಾಯಕ್ಕೆ ಯಾವುದೇ ಫಲಿತಾಂಶ ಬರದಿದ್ದರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆದ ತಂಡ ಫೈನಲ್ ಪ್ರವೇಶಿಸಲಿದ್ದು, ಕರ್ನಾಟಕ ಪಂದ್ಯ ತನ್ನದಾಗಿಸಿಕೊಳ್ಳಲು ಕೊನೆ 2 ದಿನ ಅಸಾಧಾರಣ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.
Ranji Trophy ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ದ್ವಿಶತಕ; ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ..!
232 ರನ್ ಜೊತೆಯಾಟ: 2ನೇ ದಿನ 2 ವಿಕೆಟ್‌ಗೆ 76 ರನ್ ಗಳಿಸಿದ್ದ ಸೌರಾಷ್ಟ್ರ ಶುಕ್ರವಾರ ರಾಜ್ಯದ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿತು. 3ನೇ ದಿನ ಪಿಚ್ ಸ್ಪಿನ್ನರ್ಗಳಿಗೆ ನೆರವಾಗುವ ನಿರೀಕ್ಷೆಯಿತ್ತಾದ್ದರೂ ಜ್ಯಾಕ್ಸನ್, ಅರ್ಪಿತ್ ಆತಿಥೇಯ ತಂಡದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಹಾರ್ವಿಕ್ ದೇಸಾಯಿ 33 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಜ್ಯಾಕ್ಸನ್ಗೆ ಜೊತೆಯಾದ ಅರ್ಪಿತ್ 4ನೇ ವಿಕೆಟ್‌ಗೆ 378 ಎಸೆತಗಳಲ್ಲಿ 232 ರನ್ ಜೊತೆಯಾಟವಾಡಿದರು.
2ನೇ ದಿನ ಸಮಥ್‌ರ್ ಕೈಚೆಲ್ಲಿದ್ದ ಕ್ಯಾಚ್‌ನ ಲಾಭವೆತ್ತಿ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ ಜ್ಯಾಕ್ಸನ್ ಕರ್ನಾಟಕಕ್ಕೆ ಕಂಟಕರಾದರು. ಅವರು 245 ಎಸೆತಗಳಲ್ಲಿ 23 ಬೌಂಡರಿ, 2 ಸಿಕ್ಸರನ್ನೊಳಗೊಂಡ 160 ರನ್ ಸಿಡಿಸಿ ಕೆ.ಗೌತಮ್ಗೆ ವಿಕೆಟ್ ಒಪ್ಪಿಸಿದರು. ಸದ್ಯ 112 ರನ್ ಗಳಿಸಿರುವ ಅರ್ಪಿತ್ ಜೊತೆಗೆ ಚಿರಾಗ್ ಜಾನಿ(19) ಕ್ರೀಸ್ ಕಾಯ್ದುಕೊಂಡಿದ್ದಾರೆ. ಸೌರಾಷ್ಟ್ರದ ಬ್ಯಾಟಿಂಗ್ ಪಡೆ ಉದ್ದವಿದ್ದು, ದೊಡ್ಡ ಮುನ್ನಡೆ ಸಂಪಾದಿಸಿ ಕರ್ನಾಟಕಕ್ಕೆ ಫೈನಲ್ ಬಾಗಿಲು ಬಂದ್ ಆಗುವಂತೆ ಮಾಡಲು ಎದುರು ನೋಡುತ್ತಿದೆ.
ಸ್ಕೋರ್: ಕರ್ನಾಟಕ 407/10
ಸೌರಾಷ್ಟ್ರ(3ನೇ ದಿನದಂತ್ಯಕ್ಕೆ) 364/4
(ಜಾಕ್ಸನ್ 160, ಅರ್ಪಿತ್ 112*, ವಿದ್ವತ್ 2-64)
ಮಧ್ಯ ಪ್ರದೇಶ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಪಡೆದ ಬಂಗಾಳ
ಇಂದೋರ್: ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡ ಬಂಗಾಳ ವಿರುದ್ಧ ಇನ್ನಿಂಗ್‌್ಸ ಹಿನ್ನಡೆ ಅನುಭವಿಸಿದೆ. ಬಂಗಾಳದ 438 ರನ್‌ಗೆ ಉತ್ತರವಾಗಿ ಮಧ್ಯಪ್ರದೇಶ ಕೇವಲ 170 ರನ್‌ಗೆ ಸರ್ವಪತನ ಕಂಡಿತು. ಸರನ್ಶ್ ಜೈನ್(65) ತಂಡದ ಪರ ಏಕೈಕ ಅರ್ಧಶತಕ ಸಿಡಿಸಿದರೆ, ಶುಭಂ ಶರ್ಮಾ ಔಟಾಗದೆ 44 ರನ್ ಸಿಡಿಸಿದರು. ಆಕಾಶ್‌ದೀಪ್ 42ಕ್ಕೆ 5 ವಿಕೆಟ್ ಕಿತ್ತರು.
268 ರನ್ ಮುನ್ನಡೆ ಪಡೆದರೂ ಫಾಲೋ-ಆನ್ ಹೇರದೆ ಬಂಗಾಳ 2ನೇ ಇನ್ನಿಂಗ್‌್ಸ ಆರಂಭಿಸಿದ್ದು, 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 59 ರನ್ ಗಳಿಸಿದೆ. ತಂಡ ಒಟ್ಟಾರೆ 329 ರನ್ ಮುನ್ನಡೆಯಲ್ಲಿದ್ದು, 4ನೇ ದಿನವಾದ ಶನಿವಾರ ಮತ್ತಷ್ಟು ರನ್ ಸೇರಿಸಿ ಮಧ್ಯಪ್ರದೇಶಕ್ಕೆ ದೊಡ್ಡ ಗುರಿ ನೀಡುವ ನಿರೀಕ್ಷೆಯಲ್ಲಿದೆ.
