Asianet Suvarna News Asianet Suvarna News

Ranji Trophy: ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್

* ಇಂದಿನಿಂದ ರಣಜಿ ಟ್ರೋಫಿ ಸೆಮಿಫೈನಲ್‌ ಕದನ ಆರಂಭ
* 15ನೇ ಬಾರಿ ಫೈನಲ್‌ಗೇರುವ ತವಕದಲ್ಲಿ ಕರ್ನಾಟಕ
* ಎರಡನೇ ಸೆಮೀಸ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ

Ranji Trophy Semi Final Fight Karnataka take on Saurashtra in Bengaluru kvn
Author
First Published Feb 8, 2023, 8:14 AM IST

ಬೆಂಗ​ಳೂ​ರು(ಫೆ.08): 2022-23ರ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಹಣಾ​ಹ​ಣಿಗೆ ವೇದಿಕೆ ಸಜ್ಜು​ಗೊಂಡಿದ್ದು, 8 ಬಾರಿ ಚಾಂಪಿಯನ್‌ ಕರ್ನಾಟಕ ಬುಧವಾರದಿಂದ ಬದ್ಧ​ವೈರಿ ಸೌರಾಷ್ಟ್ರ ವಿರುದ್ಧ ಕಾದಾ​ಡ​ಲಿದೆ. ಪಂದ್ಯಕ್ಕೆ ಚಿನ್ನ​ಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿದೆ. ಅಂಕಿ-ಅಂಶ​ಗಳ ಆಧಾ​ರ​ದಲ್ಲಿ ರಾಜ್ಯದ ವಿರುದ್ಧ ಸೌರಾಷ್ಟ್ರ ಉತ್ತಮ ದಾಖಲೆ ಹೊಂದಿ​ದ್ದರೂ ಕರ್ನಾ​ಟಕ ತವ​ರಿನ ಅಂಗಳದ ಲಾಭ​ವೆ​ತ್ತುವ ನಿರೀ​ಕ್ಷೆ​ಯ​ಲ್ಲಿದೆ. ಕಳೆದ ವರ್ಷ ಕ್ವಾರ್ಟರ್‌ನಲ್ಲೇ ಮುಗ್ಗ​ರಿ​ಸಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ತವ​ಕ​ದ​ಲ್ಲಿ​ದ್ದು, ಸೌರಾಷ್ಟ್ರ 2019-20ರ ಬಳಿಕ ಮತ್ತೊಮ್ಮೆ ಫೈನ​ಲ್‌​ಗೇ​ರಲು ಕಾಯು​ತ್ತಿ​ದೆ.

ಎಲೈಟ್‌ ‘ಸಿ’ ಗುಂಪಿ​ನಿಂದ ಅಗ್ರಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿದ್ದ ರಾಜ್ಯ ತಂಡ ಕ್ವಾರ್ಟರ್‌ನಲ್ಲಿ ಉತ್ತ​ರಾ​ಖಂಡ​ವನ್ನು ಸೋಲಿ​ಸಿತ್ತು. ಮತ್ತೊಂದೆಡೆ ಸೌರಾ​ಷ್ಟ್ರ ಅಂತಿಮ 8ರ ಘಟ್ಟ​ದಲ್ಲಿ ಪಂಜಾಬ್‌ ವಿರುದ್ಧ ಜಯಿ​ಸಿ​ತ್ತು. ರಾಜ್ಯ ತಂಡ ಎಲ್ಲಾ ವಿಭಾ​ಗ​ಗ​ಳಲ್ಲೂ ಬಲಿ​ಷ್ಠ​ವಾಗಿ ತೋ​ರು​ತ್ತಿದ್ದು, ನಾಯಕ ಮಯಾಂಕ್‌, ಆರ್‌.ಸಮರ್ಥ್ ತಂಡದ ಬ್ಯಾಟಿಂಗ್‌ ಬಲ. 8 ಪಂದ್ಯ​ಗ​ಳಲ್ಲಿ ಮಯಾಂಕ್‌ 686, ಸಮರ್ಥ್ 659 ರನ್‌ ಕಲೆ​ಹಾ​ಕಿದ್ದಾರೆ. ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ನಿಕಿನ್‌ ಜೋಸ್‌ ಕೂಡಾ ಲಯದಲ್ಲಿದ್ದು, ಲಯ ಕಂಡುಕೊಳ್ಳುತ್ತಿದ್ದ ಬಿ.ಆರ್‌.ಶರತ್‌ ಅನಾರೋಗ್ಯದ ಕಾರಣ ಹೊರಬಿದ್ದಿದ್ದು ಅವರ ಬದಲು ತಂಡಕ್ಕೆ ಸೇರ್ಪ​ಡೆ​ಗೊಂಡಿ​ರುವ ನಿಹಾಲ್‌ ಉಳ್ಳಾಲ ಅವ​ಕಾ​ಶದ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ತಮ್ಮ ನೈಜ ಆಟ ಪ್ರದರ್ಶಿಸಿದರೆ ಕರ್ನಾಟಕವನ್ನು ಕಟ್ಟಿಹಾಕಲು ಸೌರಾಷ್ಟ್ರಕ್ಕೆ ಕಷ್ಟವಾಗಬಹುದು. ಪ್ರಸಿದ್‌್ಧ ಕೃಷ್ಣ, ರೋನಿತ್‌ ಮೋರೆ ಅನು​ಪ​ಸ್ಥಿ​ತಿ​ಯಲ್ಲೂ ವೇಗಿ​ಗ​ಳಾದ ವಿದ್ವತ್‌ ಕಾವೇರಪ್ಪ, ವೈಶಾಖ್‌, ವಾಸುಕಿ ಕೌಶಿ​ಕ್‌ ಹಾಗೂ ಪಾದಾ​ರ್ಪಣೆ ಪಂದ್ಯದಲ್ಲೇ 5 ವಿಕೆಟ್‌ ಗೊಂಚಲು ಪಡೆ​ದಿದ್ದ ವೆಂಕ​ಟೇಶ್‌ ಮತ್ತೊಮ್ಮೆ ಎದು​ರಾಳಿ ಬ್ಯಾಟ​ರ್‌​ಗ​ಳನ್ನು ಕಾಡಲು ಸಜ್ಜಾ​ಗಿ​ದ್ದಾರೆ.

'ಭಾರತ ನರಕಕ್ಕೆ ಹೋಗಲಿ' ಎಂದ ಜಾವೇದ್ ಮಿಯಾಂದಾದ್‌ ಸೊಕ್ಕಡಗಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್..!

ಮತ್ತೊಂದೆಡೆ ಸೌರಾ​ಷ್ಟ್ರಕ್ಕೆ ಚೇತೇ​ಶ್ವರ ಪೂಜಾರ, ರವೀಂದ್ರ ಜಡೇಜಾ, ಜಯ್‌​ದೇವ್‌ ಉನಾ​ದ್ಕತ್‌ ಅನು​ಪ​ಸ್ಥಿ​ತಿ​ ಕಾಡು​ತ್ತಿ​ದ್ದರೂ ತಾರಾ ಆಟ​ಗಾ​ರರಿಗೆ ತಂಡ​ದಲ್ಲಿ ಕೊರ​ತೆ​ಯಿಲ್ಲ. ಅರ್ಪಿತ್‌ ವಸ​ವಾಡ, ಹಾರ್ವಿಕ್‌ ದೇಸಾಯಿ, ಚಿರಾಗ್‌ ಜಾನಿ ಬ್ಯಾಟಿಂಗ್‌ ಆಧಾ​ರ​ಸ್ತಂಭ​ಗ​ಳಾ​ಗಿದ್ದು, ಬೌಲಿಂಗ್‌​ನಲ್ಲಿ ಧರ್ಮೇಂದ್ರ​ಸಿಂಗ್‌ ಜಡೇಜಾ, ಯುವ​ರಾಜ್‌ ಸಿಂಗ್‌ ದೊಡಿಯಾ ಮಿಂಚಲು ರೆಡಿ​ಯಾ​ಗಿ​ದ್ದಾರೆ. ಪ್ರೇರಕ್‌ ಮಂಕಡ್‌, ಪಾರ್ಥ್‌ ಭುಟ್‌ ಆಲ್ರೌಂಡ್‌ ಆಟ ತಂಡಕ್ಕೆ ಮಹತ್ವದೆನಿಸಿದೆ.

ಪಂದ್ಯ: ಬೆಳಗ್ಗೆ 9.30ಕ್ಕೆ, 
ನೇರ​ಪ್ರ​ಸಾ​ರ: ಸ್ಟಾರ್‌ ಸ್ಪೋರ್ಟ್ಸ್

ಸೌರಾಷ್ಟ್ರ ವಿರುದ್ಧ ಕಳಪೆ ದಾಖಲೆ!

ರಣ​ಜಿ​ಯಲ್ಲಿ ಕರ್ನಾ​ಟ​ಕ-ಸೌರಾಷ್ಟ್ರ ಈ ಮೊದಲು 11 ಬಾರಿ ಮುಖಾ​ಮುಖಿ​ಯಾ​ಗಿದ್ದು, 5 ಪಂದ್ಯ​ದಲ್ಲಿ ಸೌರಾ​ಷ್ಟ್ರ ಗೆದ್ದಿದೆ. 2ರಲ್ಲಿ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆ​ದಿತ್ತು. ಇದೇ ವೇಳೆ ಕರ್ನಾ​ಟಕ 2 ಪಂದ್ಯ​ಗ​ಳಲ್ಲಿ ಜಯಿ​ಸಿದ್ದು, 2ರಲ್ಲಿ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿ​ಸಿದೆ. ನಾಕೌ​ಟ್‌​ನಲ್ಲಿ 3 ಬಾರಿ ಈ ತಂಡ​ಗಳು ಎದು​ರಾ​ಗಿದ್ದು, 2ರಲ್ಲಿ ರಾಜ್ಯ ತಂಡ ಸೋತು, 1ರಲ್ಲಿ ಇನ್ನಿಂಗ್‌್ಸ ಹಿನ್ನಡೆ ಅನು​ಭ​ವಿ​ಸಿದೆ. 

2008-09 ಮತ್ತು 2012-13ರ ಕ್ವಾರ್ಟ​ರ್‌​ನಲ್ಲಿ, 2018-19ರಲ್ಲಿ ಸೆಮೀ​ಸ್‌​ನಲ್ಲಿ ರಾಜ್ಯ ತಂಡ ಸೌರಾ​ಷ್ಟ್ರಕ್ಕೆ ಶರ​ಣಾ​ಗಿತ್ತು. ಕರ್ನಾ​ಟ​ಕ 2009ರ ಬಳಿಕ ಸೌರಾಷ್ಟ್ರ ವಿರುದ್ಧ ಮೊದಲ ಜಯದ ತವ​ಕ​ದ​ಲ್ಲಿದೆ.

ಪಿಚ್‌ ರಿಪೋರ್ಚ್‌

ಚಿನ್ನಸ್ವಾಮಿ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾಗಿರಲಿದ್ದು, ಹಿಂದಿನ ಕೆಲ ಪಂದ್ಯಗಳಲ್ಲಿ ವೇಗದ ಬೌಲಿಂಗ್‌ಗೆ ಹೆಚ್ಚು ಸಹಕಾರ ದೊರೆತಿದೆ. ದಿನದ ಆರಂಭಿಕ ಅವಧಿಯಲ್ಲಿ ಸ್ವಿಂಗ್‌ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. 3ನೇ ದಿನದಿಂದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ.

ಸತತ 2ನೇ ಫೈನ​ಲ್‌ ನಿರೀ​ಕ್ಷೆ​ಯಲ್ಲಿ ಮಧ್ಯಪ್ರದೇಶ

ಟೂರ್ನಿಯ ಮತ್ತೊಂದು ಸೆಮಿ​ಫೈ​ನ​ಲ್‌​ನ​ಲ್ಲಿ ಹಾಲಿ ಚಾಂಪಿ​ಯನ್‌ ಮಧ್ಯ​ಪ್ರ​ದೇಶ ತಂಡ ಬಂಗಾಳ ವಿರುದ್ಧ ಸೆಣ​ಸಾ​ಡ​ಲಿದೆ. ಮಧ್ಯ​ಪ್ರ​ದೇಶ ಸತತ 2ನೇ ಫೈನಲ್‌ ಮೇಲೆ ಕಣ್ಣಿ​ಟ್ಟಿದ್ದು, 2 ಬಾರಿ ಚಾಂಪಿ​ಯನ್‌ ಬಂಗಾ​ಳ 14ನೇ ಬಾರಿ ಫೈನ​ಲ್‌​ಗೇ​ರುವ ನಿರೀ​ಕ್ಷೆ​ಯ​ಲ್ಲಿದೆ. ಪಂದ್ಯ ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

Follow Us:
Download App:
  • android
  • ios