ಬೆಂಗಳೂರು(ಡಿ.31): ಜ.3 ರಿಂದ 6ರವರೆಗೆ ಮುಂಬೈ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ 4ನೇ ಸುತ್ತಿನ ಪಂದ್ಯಕ್ಕಾಗಿ 15 ಆಟಗಾರರ ಕರ್ನಾಟಕ ತಂಡವನ್ನು ಸೋಮವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. 

ರಣಜಿ ಟ್ರೋಫಿ: ಹಿಮಾಚಲ ವಿರುದ್ಧ ಕರ್ನಾಟಕದ ಪಂದ್ಯ ಡ್ರಾನಲ್ಲಿ ಅಂತ್ಯ

ಕರುಣ್‌ ನಾಯರ್‌ ತಂಡದ ನಾಯಕರಾಗಿ ಮುಂದುವರಿದಿದ್ದು, ಲಯ ಕಳೆದುಕೊಂಡಿರುವ ಬ್ಯಾಟ್ಸ್‌ಮನ್‌ ಆರ್‌.ಸಮರ್ಥ್’ರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಅಭಿಷೇಕ್‌ ರೆಡ್ಡಿಗೆ ಸ್ಥಾನ ಸಿಕ್ಕಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ರೋನಿತ್‌ ಮೋರೆ ತಂಡಕ್ಕೆ ಮರಳಿದ್ದು, ತಂಡಕ್ಕೆ ಇನ್ನೂ ಪಾದಾರ್ಪಣೆ ಮಾಡದ ಕೆ.ಎಸ್‌.ದೇವಯ್ಯ ಅವರನ್ನು ಕೈಬಿಡಲಾಗಿದೆ. ಕರ್ನಾಟಕ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಇದೇ ವೇಳೆ ಮುಂಬೈ ತಂಡ ಸಹ ಪ್ರಕಟಗೊಂಡಿದ್ದು, ಅಜಿಂಕ್ಯ ರಹಾನೆ ಹಾಗು ಪೃಥ್ವಿ ಶಾಗೆ ಸ್ಥಾನ ಸಿಕ್ಕಿದೆ. ಸೂರ್ಯಕುಮಾರ್‌ ಯಾದವ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ದೇವದತ್‌ ಪಡಿಕ್ಕಲ್‌, ನಿಶ್ಚಲ್‌ ಡಿ., ಮಯಾಂಕ್‌ ಅಗರ್‌ವಾಲ್‌, ಅಭಿಷೇಕ್‌ ರೆಡ್ಡಿ, ಶರತ್‌, ಬಿ.ಆರ್‌., ರೋಹನ್‌ ಕದಂ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ.