ದೇಶೀ ಕ್ರಿಕೆಟ್‌ನಲ್ಲಿ ವಿದರ್ಭ, ಮುಂಬೈ ತಂಡಗಳು ಉತ್ತಮ ಆರಂಭ ಪಡೆದಿವೆ. ಕರುಣ್ ನಾಯರ್ (ಔಟಾಗದೆ 100) ಶತಕ, ಮಲೆವಾರ್ (75) ಅರ್ಧಶತಕಗಳ ನೆರವಿನಿಂದ ವಿದರ್ಭ 6 ವಿಕೆಟ್‌ಗೆ 264 ರನ್ ಗಳಿಸಿದೆ. ಮುಂಬೈ 8 ವಿಕೆಟ್‌ಗೆ ೨೭೮ ರನ್ ಗಳಿಸಿದ್ದು, ಮುಲಾನಿ (91), ಕೋಟ್ಯಾನ್ (ಔಟಾಗದೆ 85) ರನ್ ಗಳಿಸಿದರು. ಗುಜರಾತ್, ಕೇರಳ ತಂಡಗಳು ಮೇಲುಗೈ ಸಾಧಿಸಿವೆ
ನಾಗ್ಪುರ: ದೇಸಿ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ಮತ್ತೆ ಅಬ್ಬರಿಸಿದ್ದಾರೆ. ತಮಿಳುನಾಡು ವಿರುದ್ಧ ನಡೆಯುತ್ತಿರುವ ಕ್ವಾರ್ಟರ್ ಫೈನಲ್‌ನಲ್ಲಿ ಕರುಣ್ ಶತಕದ ನೆರವಿನಿಂದ ವಿದರ್ಭ ತಂಡ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 264 ರನ್ ಕಲೆಹಾಕಿದೆ. 44ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕರುಣ್ ಆಸರೆಯಾದರು. ಅವರು ಔಟಾಗದೆ 100 ರನ್ ಗಳಿಸಿದ್ದಾರೆ. ದಿನೇಶ್ ಮಲೆವಾರ್ 75 ರನ್ ಗಳಿಸಿದರು.
ಮುಂಬೈ ಚೇತರಿಕೆ: ಕೋಲ್ಕತಾದಲ್ಲಿ ನಡೆಯುತ್ತಿರುವ ಮತ್ತೊಂದು ಕ್ವಾರ್ಟರ್‌ನಲ್ಲಿ ಹರ್ಯಾಣ ವಿರುದ್ಧ ಮುಂಬೈ ಆರಂಭಿಕ ಆಘಾತರಿಂದ ಚೇತರಿಸಿಕೊಂಡಿದೆ. 25ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ದಿನದಂತ್ಯಕ್ಕೆ 8 ವಿಕೆಟ್ ನಷ್ಟದಲ್ಲಿ 278 ರನ್ ಗಳಿಸಿದೆ. ಶಮ್ಸ್ ಮುಲಾನಿ 91ಕ್ಕೆ ಔಟಾದರೆ, ತನುಶ್ ಕೋಟ್ಯನ್ ಔಟಾಗದೆ 85 ರನ್ ಗಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಈ 3 ತಂಡಗಳು ಸೆಮೀಸ್ ಪ್ರವೇಶಿಸಲಿವೆ: ಅಚ್ಚರಿ ಭವಿಷ್ಯ ನುಡಿದ ಶೋಯೆಬ್ ಅಖ್ತರ್
ಗುಜರಾತ್, ಕೇರಳ ತಂಡಗಳು ಮೇಲುಗೈ
ಪುಣೆಯಲ್ಲಿ ನಡೆಯಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್‌ನಲ್ಲಿ ಕೇರಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 228 ರನ್ ಗಳಿಸಿದೆ. ಕನ್ಹಯ್ಯಾ ವಧ್ವಾನ್ 48, ಲೋನೆ ನಾಸಿರ್ 44 ರನ್ ಗಳಿಸಿದರು. ನಿಧೀಶ್ 5 ವಿಕೆಟ್ ಕಿತ್ತರು. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಗುಜರಾತ್ ವಿರುದ್ಧ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 216ಕ್ಕೆ ಆಲೌಟಾಗಿದೆ. ದಿನದಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಬಿಗ್ ಶಾಕ್; ಮಾರ್ಷ್ ಸೇರಿ ನಾಲ್ವರು ಟೂರ್ನಿಯಿಂದ ಔಟ್!
ಐಪಿಎಲ್ ಮುನ್ನ ಮೈದಾನ ಬಳಸಲು ಬಿಡಬೇಡಿ: ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ
ನವದೆಹಲಿ: ಐಪಿಎಲ್‌ಗೂ ಮುನ್ನ ಅಭ್ಯಾಸ ಹಾಗೂ ಯಾವುದೇ ಪಂದ್ಯಗಳಿಗೆ ಕ್ರೀಡಾಂಗಣವನ್ನು ಬಿಟ್ಟುಕೊಡದಂತೆ ಶುಕ್ರವಾರ ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ನಿರ್ದೇಶಿಸಿದೆ. ಮಾ.24ರಿಂದ ಐಪಿಎಲ್ ಆರಂಭಗೊಳ್ಳಲಿವೆ. ಈ ವೇಳೆಗೆ ಮೈದಾನಗಳು ಸಮರ್ಪಕ ರೀತಿಯಲ್ಲಿರಬೇಕು. ಪಿಚ್, ಔಟ್‌ಫೀಲ್ಡ್‌ಗೆ ಯಾವುದೇ ಸಮಸ್ಯೆಯಾಗಬಾರದು. ಹೀಗಾಗಿ ಯಾವುದೇ ಕಾರಣಕ್ಕೂ ಸ್ಥಳೀಯ ಪಂದ್ಯಗಳು, ಲೆಜೆಂಡ್ಸ್ ಲೀಗ್, ಸೆಲೆಬ್ರಿಟಿ ಕ್ರಿಕೆಟ್‌ಗೆ ಮೈದಾನ ಬಿಟ್ಟುಕೊಡದಂತೆ ಬಿಸಿಸಿಐ ಸೂಚಿಸಿದೆ. ಅಲ್ಲದೆ, ಐಪಿಎಲ್ ಫ್ರಾಂಚೈಸಿಗಳು ಕೂಡಾ ಅಭ್ಯಾಸಕ್ಕೆ ಮೈದಾನವನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳಲು ರಾಜ್ಯ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಆದೇಶಿಸಿದೆ.
