Asianet Suvarna News Asianet Suvarna News

Ranji Trophy: ಇಂದಿನಿಂದ ಕರ್ನಾಟಕ-ರಾಜಸ್ಥಾನ ಫೈಟ್‌

ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕಕ್ಕೆ ರಾಜಸ್ಥಾನ ಸವಾಲು
ತವರಿನಲ್ಲಿ 4ನೇ ಪಂದ್ಯವನ್ನಾಡುತ್ತಿರುವ ಕರ್ನಾಟಕ ಕ್ರಿಕೆಟ್‌ ತಂಡ
4 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿರುವ ಕರ್ನಾಟಕ

Ranji Trophy Mayank Agarwal led Karnataka take on Rajasthan in Bengaluru kvn
Author
First Published Jan 10, 2023, 9:38 AM IST | Last Updated Jan 10, 2023, 9:38 AM IST

ಬೆಂಗಳೂರು(ಜ.10): 2022-23ರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 5ನೇ ಪಂದ್ಯದಲ್ಲಿ ಕರ್ನಾಟಕ ತಂಡ ಮಂಗಳವಾರದಿಂದ ರಾಜಸ್ಥಾನ ವಿರುದ್ಧ ಕಣಕ್ಕಿಳಿಯಲಿದೆ. ಈ ಋುತುವಿನಲ್ಲಿ ರಾಜ್ಯ ತಂಡ ತವರಿನಲ್ಲಿ 4ನೇ ಪಂದ್ಯ ಆಡುತ್ತಿದ್ದು, ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ರಾಜ್ಯ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದೆ. ಸದ್ಯ ಎಲೈಟ್‌ ‘ಸಿ’ ಗುಂಪಿನಲ್ಲಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯದಲ್ಲೂ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಸ್ಥಾನದತ್ತ ಮತ್ತೊಂದು ಹೆಜ್ಜೆ ಮುಂದಿಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ 4 ಪಂದ್ಯಗಳಲ್ಲಿ 1 ಗೆಲುವು, 3 ಡ್ರಾನೊಂದಿಗೆ 14 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ. 

ಪ್ರತೀ ತಂಡ ಗುಂಪು ಹಂತದಲ್ಲಿ ತಲಾ 7 ಪಂದ್ಯಗಳನ್ನಾಡಲಿದ್ದು, ರಾಜ್ಯ ತಂಡ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ತಾರಾ ಆಟಗಾರ ದೇವದತ್‌ ಪಡಿಕ್ಕಲ್‌ ತಂಡಕ್ಕೆ ಮರಳಿರುವುದು ರಾಜ್ಯ ತಂಡದ ಆತ್ಮಿವಿಶ್ವಾಸ ಹೆಚ್ಚಿಸಿದ್ದು, ಬ್ಯಾಟಿಂಗ್‌ ಪಡೆಗೆ ಬಲ ತುಂಬಲಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಆರ್‌.ಸಮರ್ಥ್‌ ಮತ್ತೊಂದು ದೊಡ್ಡ ಇನ್ನಿಂಗ್ಸ್‌ಗೆ ಕಾಯುತ್ತಿದ್ದಾರೆ.

ಪಂದ್ಯ: ಬೆಳಗ್ಗೆ 9.30ಕ್ಕೆ

ಅಂಧ ಮಹಿಳೆಯರ ಟಿ20: ಕರ್ನಾಟಕ ಶುಭಾರಂಭ

ಬೆಂಗಳೂರು: 3ನೇ ಆವೃತ್ತಿಯ ರಾಷ್ಟ್ರೀಯ ಅಂಧ ಮಹಿಳೆಯರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಶುಭಾರಂಭ ಮಾಡಿದೆ. ಸೋಮವಾರ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ 174 ರನ್‌ ಜಯಗಳಿಸಿತು. 

SA20 Squads: ಸೌಥ್ ಆಫ್ರಿಕಾ 20 ಲೀಗ್ ಟೂರ್ನಿಯಲ್ಲಿ ಯಾವ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ಕಂಪ್ಲೀಟ್

ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡ ನಿಗದಿತ 18 ಓವರಲ್ಲಿ 3 ವಿಕೆಟ್‌ಗೆ 238 ರನ್‌ ಕಲೆ ಹಾಕಿತು. ನಾಯಕಿ ವರ್ಷಾ 53 ಎಸೆತಗಳಲ್ಲಿ 118 ರನ್‌ ಸಿಡಿಸಿದರೆ, ಕಾವ್ಯ 46, ಗಂಗಾ 30 ರನ್‌ ಸಿಡಿಸಿದರು. ಬೃಹತ್‌ ಗುರಿ ಬೆನ್ನತ್ತಿದ ಪ.ಬಂಗಾಳ 18 ಓವರಲ್ಲಿ 7 ವಿಕೆಟ್‌ಗೆ 64 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗಂಗಾ 8 ರನ್‌ಗೆ 4 ವಿಕೆಟ್‌ ಕಿತ್ತರು. ರಾಜ್ಯ ತಂಡ ಮಂಗಳವಾರ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.

ವೈಡ್‌ ನೀಡದ್ದಕ್ಕೆ ಅಂಪೈರ್‌ ವಿರುದ್ಧ ಶಕೀಬ್‌ ಕೆಂಡ

ಢಾಕಾ: ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ಹಲವು ಬಾರಿ ಸುದ್ದಿಯಾಗಿದ್ದ ಬಾಂಗ್ಲಾದೇಶ ನಾಯಕ ಶಕೀಬ್‌ ಅಲ್‌ ಹಸನ್‌ ಶನಿವಾರ ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಟಿ20 ಪಂದ್ಯದಲ್ಲಿ ಅಂಪೈರ್‌ ವಿರುದ್ಧ ಕೆಂಡಾಮಂಡಲವಾದ ಘಟನೆ ನಡೆಯಿತು. ಪಂದ್ಯದ 16ನೇ ಓವರ್‌ ವೇಳೆ ಶೈಲೆಟ್‌ ತಂಡದ ರಹಮಾನ್‌ ಖಾನ್‌ ಎಸೆದ ಚೆಂಡು ಬಾರಿಶಾಲ್‌ ತಂಡದ ಶಕೀಬ್‌ರ ತಲೆಯ ಮೇಲೆ ಹಾದು ಹೋಯಿತು. ಆದರೆ ಅಂಪೈರ್‌ಗಳು ವೈಡ್‌ ನೀಡಲಿಲ್ಲ. ಇದರಿಂದ ಕೆರಳಿದ ಶಕೀಬ್‌ ಇಬ್ಬರೂ ಅಂಪೈರ್‌ಗಳ ಬಳಿ ತೆರಳಿ ಅವರ ಜೊತೆ ವಾಗ್ವಾದಕ್ಕಿಳಿದರು. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Latest Videos
Follow Us:
Download App:
  • android
  • ios