ಬೆಂಗಳೂರು(ಡಿ.22): ಹಿಮಾಚಲ ಪ್ರದೇಶ ವಿರುದ್ಧ ಡಿ.25ರಿಂದ ಮೈಸೂರಿನಲ್ಲಿ ನಡೆಯಲಿರುವ ‘ಬಿ’ ಗುಂಪಿನ ರಣಜಿ ಪಂದ್ಯಕ್ಕೆ ಶನಿವಾರ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಮಯಾಂಕ್‌ ಅಗರ್‌ವಾಲ್‌ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ಕೆ.ಎಲ್‌.ರಾಹುಲ್‌ ಹಾಗೂ ಮನೀಶ್‌ ಪಾಂಡೆ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. 

ರಣಜಿ ಟ್ರೋಫಿ: ದಾಖಲೆಯ 200ನೇ ಜಯಕ್ಕೆ ಕಾಯಬೇಕು ಕರ್ನಾಟಕ!

ಆಲ್ರೌಂಡರ್‌ಗಳಾದ ಕೆ.ಗೌತಮ್‌ ಹಾಗೂ ಪವನ್‌ ದೇಶಪಾಂಡೆ ಇನ್ನು ಗುಣಮುಖರಾಗದ ಕಾರಣ, ಇಬ್ಬರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹುಬ್ಬಳ್ಳಿಯಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಆಡಿದ ಬ್ಯಾಟ್ಸ್‌ಮನ್‌ ಅಭಿಷೇಕ್‌ ರೆಡ್ಡಿಯನ್ನು ಕೈಬಿಡಲಾಗಿದೆ. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಶುಭಾರಂಭ ಮಾಡಿತ್ತು. ಇನ್ನು ಉತ್ತರ ಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ 3 ಅಂಕ ಗಳಿಸಿತ್ತು. 

ತಂಡ: ಕರುಣ್‌ ನಾಯರ್‌ (ನಾಯಕ), ದೇವದತ್‌ ಪಡಿಕ್ಕಲ್‌, ಮಯಾಂಕ್‌ ಅಗರ್‌ವಾಲ್‌, ರೋಹನ್‌ ಕದಂ, ಡಿ.ನಿಶ್ಚಲ್‌, ಆರ್‌.ಸಮರ್ಥ್, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಪ್ರವೀಣ್‌ ದುಬೆ, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌, ರೋನಿತ್‌ ಮೋರೆ, ವಿ.ಕೌಶಿಕ್‌, ಅಭಿಮನ್ಯು ಮಿಥುನ್‌, ಕೆ.ಎಸ್‌.ದೇವಯ್ಯ.