ನವದೆಹಲಿ(ಜ.27): 2019-20ರ ರಣಜಿ ಋುತುವಿನ ‘ಎ’ ಮತ್ತು ‘ಬಿ’ ಗುಂಪಿನ ಅಂಕಪಟ್ಟಿಯ ಅಗ್ರ 5 ರಿಂದ 7ನೇ ಸ್ಥಾನಕ್ಕೆ ಕುಸಿದಿರುವ ಕರ್ನಾಟಕ ತಂಡ ರಣಜಿ ಟ್ರೋಫಿಯ ತನ್ನ 6ನೇ ಸುತ್ತಿನ ಪಂದ್ಯದಲ್ಲಿ ಸೋಮವಾರ ರೈಲ್ವೇಸ್‌ ಸವಾಲನ್ನು ಎದುರಿಸುತ್ತಿದ್ದು, ಸಂಪೂರ್ಣ ಅಂಕ ಸಂಪಾದಿಸುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯುತ್ತಿದೆ.

ರಣಜಿ ಟ್ರೋಫಿ : ಸರ್ವೀಸಸ್ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಸದ್ಯ ಆಡಿರುವ 5 ಪಂದ್ಯಗಳಿಂದ 17 ಅಂಕಗಳಿಸಿರುವ ಕರ್ನಾಟಕ, ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ 5 ಸ್ಥಾನದಲ್ಲಿರುವ ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯಲಿರುವ ಕಾರಣ ಕರ್ನಾಟಕದ ಪಾಲಿಗೆ ಈ ಪಂದ್ಯ ಮಹತ್ವದ್ದಾಗಿದೆ. ನಾಕೌಟ್‌ ಹಂತವನ್ನು ಜೀವಂತವಾಗಿರಿಸಿ ಕೊಳ್ಳಬೇಕಾದರೆ ಕರುಣ್‌ ನಾಯರ್‌ ಪಡೆ ರೈಲ್ವೇಸ್‌ ಸೇರಿದಂತೆ ಉಳಿದೆಲ್ಲ ಗುಂಪು ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಜಯಭೇರಿ ಬಾರಿಸಿದರೇ, ನಾಕೌಟ್‌ಗೇರುವ ಸಾಧ್ಯತೆ ಹೆಚ್ಚಿರುತ್ತದೆ. ಅಥವಾ 2 ಪಂದ್ಯಗಳಲ್ಲಿ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಡ್ರಾ ಸಾಧಿಸಬೇಕಿದೆ. 6 ಪಂದ್ಯಗಳಿಂದ ಒಟ್ಟು 13 ಅಂಕ ಹೊಂದಿರುವ ರೈಲ್ವೇಸ್‌ ಮುಂದಿನ ಹಂತವನ್ನು ದುರ್ಗಮ ಮಾಡಿಕೊಂಡಿದೆ. ಆದರೂ ಕರ್ನಾಟಕ ವಿರುದ್ಧ ಗೆದ್ದು ನಾಕೌಟ್‌ಗೆ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

ರಣಜಿ ಟ್ರೋಫಿ : ಸರ್ವೀಸಸ್ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಮದುವೆಗಾಗಿ ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಕರುಣ್‌ ನಾಯರ್‌, ರೈಲ್ವೇಸ್‌ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಹೀಗಾಗಿ ತಂಡದ ಬ್ಯಾಟಿಂಗ್‌ ಬಲ ಹೆಚ್ಚಾಗಿದೆ. ಕರುಣ್‌ ನಾಯರ್‌ ರಜೆಯಲ್ಲಿದ್ದ ವೇಳೆ ಸೌರಾಷ್ಟ್ರ ವಿರುದ್ಧ ಶ್ರೇಯಸ್‌ ಗೋಪಾಲ್‌ ನಾಯಕತ್ವದಲ್ಲಿ ಆಡಿದ್ದ ಕರ್ನಾಟಕ ತಂಡ ಇನಿಂಗ್ಸ್‌ ಹಿನ್ನಡೆಗೊಳಗಾಗಿತ್ತು. ಏತನ್ಮಧ್ಯೆ, ಗಾಯದಿಂದ ಚೇತರಿಸಿಕೊಂಡಿರುವ ಆಲ್ರೌಂಡರ್‌ ಕೆ. ಗೌತಮ್‌ ಗುಣಮುಖರಾಗಿದ್ದು, ತಂಡಕ್ಕೆ ಲಭ್ಯರಾಗಿದ್ದಾರೆ. ಹೀಗಾಗಿ ಕರ್ನಾಟಕದ ಬೌಲಿಂಗ್‌ ವಿಭಾಗಕ್ಕೂ ಮತ್ತಷ್ಟುಬಲ ಬಂದಿದೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ಸ್ಥಳ: ಕರ್ನೈಲ್‌ ಸಿಂಗ್‌ ಕ್ರೀಡಾಂಗಣ