ರಣಜಿ ಟ್ರೋಫಿ ಎರಡನೇ ಪಂದ್ಯದಲ್ಲಿಂದು ಕರ್ನಾಟಕ ತಂಡವು ಕೇರಳದ ಸವಾಲು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ‌ ಮೊದಲ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ಶುಕ್ರವಾರದಿಂದ ಕೇರಳ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ನಗರದ ಹೊರವಲಯದ ಆಲೂರು ಕೆ‌ಎಸ್‌ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮಳೆಯಿಂದ ಮೈದಾನ ಕೊಂಚ ಒದ್ದೆಯಾಗಿರುವುದರಿಂದ ಟಾಸ್ ಕೊಂಚ ತಡವಾಗಲಿದೆ.

ಕಳೆದ ವಾರ ಇಂದೋರ್‌ನಲ್ಲಿ ನಡೆದಿದ್ದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಮಳೆಯಿಂದಾಗಿ ಇತ್ತಂಡಗಳ ಮೊದಲ ಇನ್ನಿಂಗ್ಸ್ ಕೂಡ ಮುಗಿದಿರಲಿಲ್ಲ. ಹೀಗಾಗಿ ತಲಾ 1 ಅಂಕ ಹಂಚಿಕೊಂಡಿದ್ದವು. ಅತ್ತ ಕೇರಳ ತಂಡ ಆರಂಭಿಕ‌ ಪಂದ್ಯದಲ್ಲಿ ಪಂಜಾಬ್ ವಿರುದ್ಧ 8 ವಿಕೆಟ್‌ನಿಂದ ಗೆಲುವು ಸಾಧಿಸಿತ್ತು. ಈ ಬಾರಿ ತಂಡಕ್ಕೆ ಸಂಜು ಸ್ಯಾಮ್ಸನ್‌ ಉಪಸ್ಥಿತಿ ಬಲ ಒದಗಿಸಲಿದ್ದು, ಸತತ 2ನೇ ಗೆಲುವಿನ ಕಾತರದಲ್ಲಿದೆ.

ಇಂದಿನಿಂದ ಹೈದರಾಬಾದ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌: ಈ ವರ್ಷ ಬೆಂಗಳೂರಲ್ಲಿಲ್ಲ ಪಂದ್ಯ

ಮಧ್ಯ ಪ್ರದೇಶ ವಿರುದ್ಧ ರಾಜ್ಯದ ಪ್ರಮುಖ ಬ್ಯಾಟ‌ರ್‌ಗಳು ವೈಫಲ್ಯ ಅನುಭವಿಸಿದ್ದರು. ಮಯಾಂಕ್‌ ಸೊನ್ನೆಗೆ ಔಟಾಗಿದ್ದರೆ, ಮನೀಶ್ ಪಾಂಡೆ 9, ದೇವದತ್ ಪಡಿಕ್ಕಲ್ 16 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಈ‌ ಪಂದ್ಯದಲ್ಲಾದರೂ ತಂಡ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ. ಬೌಲರ್‌ಗಳು ಮೊನಚು ದಾಳಿ ಸಂಘಟಿಸಿದರಷ್ಟೇ ತಂಡಕ್ಕೆ ಗೆಲುವು ದಕ್ಕಲಿದೆ.

ಕಿವೀಸ್‌ ವಿರುದ್ಧ ಏಕದಿನ: ಭಾರತ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ನಾಯಕಿ

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಅ.24ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಹರ್ಮನ್‌ಪ್ರೀತ್‌ ಕೌರ್‌ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್‌ನ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಹರ್ಮನ್‌ ನಾಯಕತ್ವದಕ್ಕೆ ಕುತ್ತು ಬರುವ ಸಾಧ್ಯತೆ ಎಂದು ಹೇಳಲಾಗುತ್ತಿತ್ತು. ಆದರೆ ಕಿವೀಸ್‌ ಸರಣಿಗೂ ಹರ್ಮನ್‌ರನ್ನೇ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಕರ್ನಾಟಕದ ಶ್ರೇಯಾಂಕ ಪಾಟೀಲ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ತೇಜಲ್‌ ಹಸಬ್‌ನಿಸ್‌, ಸಯಾಲಿ ಸತ್ಗಾರೆ, ಪ್ರಿಯಾ ಮಿಶ್ರಾ, ಸೈಮಾ ಠಾಕೂರ್‌ ಮೊದಲ ಬಾರಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಂದ್ಯಗಳು ಅ.24, ಅ.27 ಹಾಗೂ 29ರಂದು ಅಹಮದಾಬಾದ್‌ನಲ್ಲಿ ನಡೆಯಲಿವೆ.

ಬೆಂಗಳೂರು ಟೆಸ್ಟ್: ಕೈಕೊಟ್ಟ ಬ್ಯಾಟರ್ಸ್‌, ಬೃಹತ್ ಮುನ್ನಡೆಯತ್ತ ಕಿವೀಸ್ ಪಡೆ

ತಂಡ: ಹರ್ಮನ್‌ಪ್ರೀತ್‌(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಶಫಾಲಿ ವರ್ಮಾ, ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ಯಸ್ತಿಕಾ ಭಾಟಿಯಾ, ಉಮಾ ಚೆಟ್ರಿ, ಸಯಾಲಿ, ಅರುಂಧತಿ, ರೇಣುಕಾ ಸಿಂಗ್‌, ತೇಜಲ್‌, ಸೈಮಾ, ಪ್ರಿಯಾ ಮಿಶ್ರಾ, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್.

ಮೊದಲ ಸಲ ವಿಂಡೀಸ್‌ ಟಿ20 ಸರಣಿ ಗೆದ್ದ ಲಂಕಾ

ಡಾಂಬುಲಾ: ಶ್ರೀಲಂಕಾ ತಂಡ ಇದೇ ಮೊದಲ ಬಾರಿ ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಸರಣಿ ಗೆಲುವು ಸಾಧಿಸಿದೆ. ಗುರುವಾರ 3ನೇ ಟಿ20 ಪಂದ್ಯದಲ್ಲಿ ಲಂಕಾ 9 ವಿಕೆಟ್‌ ಜಯಗಳಿಸಿತು. ಈ ಮೂಲ 3 ಪಂದ್ಯಗಳ ಸರಣಿಯನ್ನು 2-1 ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 8 ವಿಕೆಟ್‌ಗೆ 162 ರನ್‌ ಗಳಿಸಿತು. ಲಂಕಾ 18 ಓವರ್‌ಗಳಲ್ಲೇ ಜಯಭೇರಿ ಬಾರಿಸಿತು. ಕುಸಾಲ್‌ ಮೆಂಡಿಸ್‌ ಔಟಾಗದೆ 68, ಕುಸಾಲ್‌ ಪೆರೆರಾ ಔಟಾಗದೆ 55 ರನ್‌ ಗಳಿಸಿದರು.