Asianet Suvarna News Asianet Suvarna News

ರಣಜಿ ಟ್ರೋಫಿ: ಬಂಗಾಳ 312ಕ್ಕೆ ಆಲೌಟ್, ಕರ್ನಾಟಕಕ್ಕೆ ಆರಂಭಿಕ ಆಘಾತ..!

ರಣಜಿ ಟ್ರೋಫಿ ಸೆಮೀಸ್ ಪಂದ್ಯದಲ್ಲಿ ಬಂಗಾಳವನ್ನು 312 ರನ್‌ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ಇದೀಗ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Ranji Trophy Karnataka lose early 2 wickets against Bengal
Author
Kolkata, First Published Mar 1, 2020, 10:54 AM IST

ಕೋಲ್ಕತಾ(ಮಾ.01): ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡವು ಮೊದಲ ಇನಿಂಗ್ಸ್‌ನಲ್ಲಿ 312 ರನ್‌ ಗಳಿಸಿ ಸರ್ವಪತನ ಕಂಡಿದೆ. ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ 5 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ರಣಜಿ ಟ್ರೋಫಿ: ಬಂಗಾಳಕ್ಕೆ ಆಸರೆಯಾದ ಮಜುಂದಾರ್

ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 275 ರನ್ ಬಾರಿಸಿದ್ದ ಬಂಗಾಳ ತಂಡವು ಎರಡನೇ ದಿನದಲ್ಲಿ ತನ್ನ ಖಾತೆಗೆ 37 ರನ್ ಸೇರಿಸಿತು. ಈ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಅನುಸ್ತೂಪ್-ಇಶಾನ್ ಪೋರೆಲ್ ಜೋಡಿ ಯಶಸ್ವಿಯಾದರು. ಅಂತಿಮವಾಗಿ ಈ  ಜೋಡಿಯನ್ನು ಬೇರ್ಪಡಿಸುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು. ಅನುಸ್ತೂಪ್ ಮಜುಂದಾರ್ 149 ರನ್ ಗಳಿಸಿ ಅಜೇಯರಾಗುಳಿದರು.

ರಾಜ್ಯ ತಂಡಕ್ಕೆ ಆಘಾತ: ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ರವಿಕುಮಾರ್ ಸಮರ್ಥ್(0) ಹಾಗೂ ನಾಯಕ ಕರುಣ್ ನಾಯರ್(03) ಬೇಗನೇ ವಿಕೆಟ್ ಒಪ್ಪಿಸಿದ್ದಾರೆ. ಈ ಇಬ್ಬರು ಆಟಗಾರರನ್ನು ಪೆವಿಲಿಯನ್ನಿಗಟ್ಟುವಲ್ಲಿ ಇಶಾನ್ ಪೋರೆಲ್ ಯಶಸ್ವಿಯಾಗಿದ್ದಾರೆ.  

Follow Us:
Download App:
  • android
  • ios