Ranji Trophy: ಸೆಮೀಸ್ ಹೊಸ್ತಿಲಲ್ಲಿ ಕರ್ನಾಟಕ ಕ್ರಿಕೆಟ್ ತಂಡ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂದುವರೆದ ಕರ್ನಾಟಕದ ಬಿಗಿ ಹಿಡಿತ
ಉತ್ತರಾಖಂಡ ಎದುರು ಮೊದಲ ಇನಿಂಗ್ಸ್‌ನಲ್ಲಿ 606 ರನ್ ಕಲೆಹಾಕಿದ ಕರ್ನಾಟಕ
ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 490 ರನ್‌ಗಳ ಮುನ್ನಡೆ ಪಡೆದ ರಾಜ್ಯ ತಂಡ
ಬೆಂಗಳೂರು(ಫೆ.03): ಆಲ್ರೌಂಡರ್ ಶ್ರೇಯಸ್ ಗೋಪಾಲ್‌ರ ವೃತ್ತಿಬದುಕಿನ ಶ್ರೇಷ್ಠ 161* ರನ್‌ಗಳ ಅಮೋಘ ಆಟದ ನೆರವಿನಿಂದ ಉತ್ತರಾಖಂಡ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನ ಮೊದಲ ಇನ್ನಿಂಗ್ಸಲ್ಲಿ 606 ರನ್ ಕಲೆಹಾಕಿದ ಕರ್ನಾಟಕ, 490 ರನ್ ಮುನ್ನಡೆ ಸಂಪಾದಿಸಿತು.
3ನೇ ದಿನವಾದ ಗುರುವಾರ 2ನೇ ಇನ್ನಿಂಗ್‌್ಸ ಆರಂಭಿಸಿದ ಉತ್ತರಾಖಂಡ ದಿನದಂತ್ಯಕ್ಕೆ 3 ವಿಕೆಟ್‌ಗೆ 106 ರನ್ ಗಳಿಸಿದ್ದು, ಇನ್ನೂ 384 ರನ್ ಹಿನ್ನಡೆಯಲ್ಲಿದೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದ್ದು, 4ನೇ ದಿನವಾದ ಶುಕ್ರವಾರ ಎದುರಾಳಿಯನ್ನು ಆಲೌಟ್ ಮಾಡಿ ಇನ್ನಿಂಗ್‌್ಸ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸಲು ರಾಜ್ಯ ತಂಡ ಕಾತರಿಸುತ್ತಿದೆ.
5 ವಿಕೆಟ್‌ಗೆ 474 ರನ್‌ಗಳಿಂದ 3ನೇ ದಿನವನ್ನು ಆರಂಭಿಸಿದ ಕರ್ನಾಟಕ, ಡಿಕ್ಲೇರ್ ಮಾಡಿಕೊಳ್ಳುವ ಉದ್ದೇಶವನ್ನೇ ಹೊಂದಿರಲಿಲ್ಲ. ಬಿ.ಆರ್.ಶರತ್(33) ಔಟಾದ ಬಳಿಕ ಕೆ.ಗೌತಮ್ ಜೊತೆ 7ನೇ ವಿಕೆಟ್‌ಗೆ ಶ್ರೇಯಸ್ 85 ರನ್ ಸೇರಿಸಿದರು. ಕರ್ನಾಟಕ 162.5 ಓವರ್ ಬ್ಯಾಟ್ ಮಾಡಿ ಉತ್ತರಾಖಂಡ ಆಟಗಾರರನ್ನು ಸುಸ್ತಾಗಿಸಿತು. 288 ಎಸೆತ ಎದುರಿಸಿದ ಶ್ರೇಯಸ್ 16 ಬೌಂಡರಿ, 1 ಸಿಕ್ಸರ್‌ನೊಂದಿಗೆ 161 ರನ್ ಗಳಿಸಿ ಔಟಾಗದೆ ಉಳಿದರು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟಲ್ಲಿ 300 ರನ್ ಪೂರೈಸಿದರು. 2ನೇ ಇನ್ನಿಂಗ್ಸ್ ಆರಂಭಿಸಿದ ಉತ್ತರಾಖಂಡ ಪ್ರಮುಖ 3 ಬ್ಯಾಟರ್‌ಗಳನ್ನು ಕಳೆದುಕೊಂಡಿತು. ವೇಗಿಗಳಾದ ವಿದ್ವತ್ 2, ವೆಂಕಟೇಶ್ 1 ವಿಕೆಟ್ ಕಿತ್ತರು.
ಸ್ಕೋರ್:
ಉತ್ತರಾಖಂಡ 116 ಹಾಗೂ 106/3(ದಿಕ್ಷಾಂಕ್ಶು 27*, ಸ್ವಪ್ನಿಲ್ 27*, ವಿದ್ವತ್ 2/22)
ಕರ್ನಾಟಕ 606(ಶ್ರೇಯಸ್ 161*, ಮಯಾಂಕ್ 83, ಅಭಯ್ 4/109)
ಜಯದ ನಿರೀಕ್ಷೆಯಲ್ಲಿ ಪಂಜಾಬ್, ಬಂಗಾಳ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ ಹಾಗೂ ಪಂಜಾಬ್ ತಂಡಗಳು ಜಯದ ನಿರೀಕ್ಷೆಯಲ್ಲಿವೆ. ಜಾರ್ಖಂಡ್ 2ನೇ ಇನ್ನಿಂಗ್ಸಲ್ಲಿ 3ನೇ ದಿನಕ್ಕೆ 7 ವಿಕೆಟ್‌ಗೆ 162 ರನ್ ಗಳಿಸಿದ್ದು, ಕೇವಲ 7 ರನ್ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್ಸಲ್ಲಿ ಜಾರ್ಖಂಡ್‌ನ 173 ರನ್‌ಗೆ ಉತ್ತರವಾಗಿ ಬಂಗಾಳ 328 ರನ್ ಗಳಿಸಿತ್ತು. ಇನ್ನು ಪಂಜಾಬ್ ವಿರುದ್ಧ ಸೌರಾಷ್ಟ್ರ 2ನೇ ಇನ್ನಿಂಗ್ಸಲ್ಲಿ 3 ದಿನಕ್ಕೆ 4 ವಿಕೆಟ್‌ಗೆ 138 ರನ್ ಗಳಿಸಿದ್ದು ಕೇವಲ 10 ರನ್ ಮುನ್ನಡೆಯಲ್ಲಿದೆ. ಸೌರಾಷ್ಟ್ರ ಮೊದಲ ಇನ್ನಿಂಗ್ಸಲ್ಲಿ 303 ರನ್ ಗಳಿಸಿದರೆ, ಪಂಜಾಬ್ 431 ರನ್ ಕಲೆಹಾಕಿತ್ತು.
Border Gavaskar Trophy: ಕಾಮೆಂಟರಿ ಬಾಕ್ಸ್‌ಗೆ ಮರಳಿದ ಡಿಕೆ ಬಾಸ್..!
ಬೆಂಗಳೂರಲ್ಲಿ ಅಭ್ಯಾಸ ಆರಂಭಿಸಿದ ಆಸ್ಪ್ರೇಲಿಯಾ
ಬೆಂಗಳೂರು: ಭಾರತ ವಿರುದ್ಧ 4 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿ ಆಡಲು ಆಗಮಿಸಿರುವ ಅಸ್ಪ್ರೇಲಿಯಾ ತಂಡ ಗುರುವಾರದಿಂದ ಬೆಂಗಳೂರು ಹೊರವಲಯದಲ್ಲಿರುವ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಫೆ.6ರ ವರೆಗೂ ಶಿಬಿರ ನಡೆಯಲಿದ್ದು, ಆ ನಂತರ ಮೊದಲ ಟೆಸ್ಟ್ ಆಡಲು ತಂಡ ನಾಗ್ಪುರಕ್ಕೆ ಪ್ರಯಾಣಿಸಲಿದೆ. ವೀಸಾ ವಿಳಂಬದಿಂದ ತಂಡದೊಂದಿಗೆ ಆಗಮಿಸದ ಉಸ್ಮಾನ್ ಖವಾಜ, ಗುರುವಾರ ಭಾರತಕ್ಕೆ ಬಂದಿಳಿದಿದ್ದು ಶುಕ್ರವಾರ ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ.
ನಾನೀಗ ಧೋನಿ ಪಾತ್ರ ನಿರ್ವಹಿಸಬೇಕು: ಪಾಂಡ್ಯ
ಅಹಮದಾಬಾದ್: ಭಾರತ ತಂಡದಲ್ಲಿ ಎಂ.ಎಸ್.ಧೋನಿ ನಿಭಾಯಿಸುತ್ತಿದ್ದ ಪಾತ್ರವನ್ನು ಈಗ ನಾನು ನಿರ್ವಹಿಸಬೇಕಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 3ನೇ ಟಿ20 ಬಳಿಕ ಮಾತನಾಡಿದ ಪಾಂಡ್ಯ, ‘ಧೋನಿ ತಂಡದ ಅಗತ್ಯತೆಗೆ ತಕ್ಕಂತೆ ಆಡುತ್ತಿದ್ದರು. ತಮ್ಮ ಜೊತೆಗಾರನಿಗೆ ಹೆಚ್ಚು ಅವಕಾಶ ನೀಡಿ ಇನ್ನಿಂಗ್‌್ಸ ಬೆಳೆಸಲು ಆದ್ಯತೆ ನೀಡುತ್ತಿದ್ದರು. ಆ ಪಾತ್ರವನ್ನು ನಾನೀಗ ಮಾಡಬೇಕಿದೆ. ಕೇವಲ ಆಕ್ರಮಣಕಾರಿಯಾಗಿ ಆಡುವುದಷ್ಟೇ ಅಲ್ಲ, ಕ್ರೀಸ್‌ನಲ್ಲಿ ನೆಲೆಯೂರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದನ್ನು ಕರಗತಗೊಳಿಸಿಕೊಳ್ಳಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ.