ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ವಿದರ್ಭ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿದ್ದು, ಇನ್ನೂ 193 ರನ್‌ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.

ಮುಂಬೈ(ಮಾ.11): ರನ್‌ ಬರ ಎದುರಿಸುತ್ತಿರುವ ಅನುಭವಿ ಆಟಗಾರರಾದ ಶ್ರೇಯಸ್‌ ಅಯ್ಯರ್‌ ಹಾಗೂ ಅಜಿಂಕ್ಯ ರಹಾನೆ ಕಳಪೆ ಆಟ ಮುಂದುವರಿಸಿದ ಪರಿಣಾಮ, ಭಾನುವಾರದಿಂದ ಆರಂಭಗೊಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಮುಂಬೈ 224 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್‌ ಆಯಿತು.

ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ವಿದರ್ಭ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿದ್ದು, ಇನ್ನೂ 193 ರನ್‌ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.

'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ವಿದರ್ಭವನ್ನು ಮುಂಬೈ ಆರಂಭಿಕರಾದ ಪೃಥ್ವಿ ಶಾ(46) ಹಾಗೂ ಭುಪೆನ್‌ ಲಾಲ್‌ವಾನಿ(37) ಕಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 81 ರನ್‌ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಮುಂಬೈ ದಿಢೀರ್‌ ಕುಸಿತ ಅನುಭವಿಸಿತು. ಕೇವಲ 30 ರನ್‌ ಅಂತರದಲ್ಲಿ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಾರ್ದೂಲ್‌ ಠಾಕೂರ್‌ 69 ಎಸೆತದಲ್ಲಿ 8 ಬೌಂಡರಿ, 3 ಸಿಕ್ಸರ್‌ನೊಂದಿಗೆ 75 ರನ್‌ ಸಿಡಿಸಿ ತಂಡ 200ರ ಗಡಿ ದಾಟಲು ನೆರವಾದರು.

ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿದ ವಿದರ್ಭಕ್ಕೆ ಶಾರ್ದೂಲ್‌ ಮೊದಲ ಆಘಾತ ನೀಡಿದರು. ಧೃವ್‌ ಶೋರೆ (0)ಯನ್ನು ಪೆವಿಲಿಯನ್‌ಗಟ್ಟಿದರು. ಅಮನ್‌(8) ಹಾಗೂ ಕರುಣ್‌ ನಾಯರ್‌ (0)ರನ್ನು ಅನುಭವಿ ಧವಳ್‌ ಕುಲ್ಕರ್ಣಿ ಕಟ್ಟಿಹಾಕಿದರು.

5 ಪಂದ್ಯಗಳ ಟೆಸ್ಟ್ ಸರಣಿ, 5 ಸ್ಟಾರ್ ಆಟಗಾರರ ಉಗಮ..!

ಸ್ಕೋರ್‌: ಮುಂಬೈ 224/10 (ಶಾರ್ದೂಲ್‌ 75, ಪೃಥ್ವಿ 46, ಹರ್ಷ್‌ 3-62, ಯಶ್ 3-54), ವಿದರ್ಭ 31/3 (ಅಥರ್ವ 21*, ಧವಳ್‌ 2-9)

ಪಾಕಿಸ್ತಾನಕ್ಕೆ ಬರುವಂತೆ ಬಿಸಿಸಿಐಗೆ ಪಿಸಿಬಿ ಮನವಿ?

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ನೂತನ ಅಧ್ಯಕ್ಷ ಮೊಹ್ಸಿನ್‌ ನಕ್ವಿ, ಮುಂದಿನ ವಾರ ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸಭೆಯಲ್ಲಿ, 2025ರ ಚಾಂಪಿಯನ್ಸ್‌ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರುವಂತೆ ಬಿಸಿಸಿಐಗೆ ಮನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಏಷ್ಯಾಕಪ್‌ ಟೂರ್ನಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವಂತೆ ಬಿಸಿಸಿಐ, ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಮೇಲೆ ಒತ್ತಡ ಹೇರಿತ್ತು. ಚಾಂಪಿಯನ್ಸ್‌ ಟ್ರೋಫಿಯನ್ನೂ ಸ್ಥಳಾಂತರಿಸುವಂತೆ ಬಿಸಿಸಿಐ, ಐಸಿಸಿಗೆ ಕೇಳಬಹುದು ಎನ್ನುವ ನಿಟ್ಟಿನಲ್ಲಿ ಪಿಸಿಬಿ ನೇರವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಜೊತೆ ಮಾತುಕತೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.