ಬಂಗಾಳ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ 352 ರನ್‌ಗಳ ಗುರಿ ಸಿಕ್ಕಿದೆ. ಬೃಹತ್ ಗುರಿ ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕೋಲ್ಕತಾ(ಮಾ.02): ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಲು ಬಂಗಾಳ ತಂಡವು 352 ರನ್‌ಗಳ ಗುರಿ ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಬಂಗಾಳ ತಂಡವು 161 ರನ್‌ಗಳಿಗೆ ಆಲೌಟ್‌ ಆಗಿದೆ. ಅಭಿಮನ್ಯು ಮಿಥುನ್ 4, ಗೌತಮ್ 3 ವಿಕೆಟ್ ಪಡೆದು ಮಿಂಚಿದರು.

Scroll to load tweet…

ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದ ಬಂಗಾಳ ತಂಡಕ್ಕೆ ಮೂರನೇ ದಿನದಾಟದಲ್ಲಿ ಅನುಸ್ತೂಪ್(41) ಹಾಗೂ ಶೆಹಬಾಜ್ ಅಹಮ್ಮದ್(31) ಕೆಲಕಾಲ ಕರ್ನಾಟಕ ಬೌಲರ್‌ಗಳನ್ನು ಕಾಡಿದರು. ಸತತ ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ರೋನಿತ್ ಮೋರೆ ಬಂಗಾಳದ ಸುದೀಪ್ ಚಟ್ಟರ್ಜಿ(45) ಹಾಗೂ ಶ್ರೀವಸ್ತ್ ಗೋಸ್ವಾಮಿ ಅವರನ್ನು ಪೆವಿಲಿಯನ್ನಿಗಟ್ಟಿದರು. ಆ ಬಳಿಕ ಮಿಥುನ್ ಹಾಗೂ ಗೌತಮ್ ಬಂಗಾಳ ಬಾಲಂಗೋಚಿಗಳನ್ನು ಕಾಡಿದರು.

ರಣಜಿ ಟ್ರೋಫಿ: ಬಂಗಾಳ ಎದುರು ರನ್ ಗಳಿಸಲು ಪರದಾಡಿದ ಕರ್ನಾಟಕ

Scroll to load tweet…

ಕರ್ನಾಟಕಕ್ಕೆ ಆರಂಭಿಕ ಆಘಾತ: ಸವಾಲಿನ ಗುರಿ ಬೆನ್ನತ್ತಿರುವ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಎರಡನೇ ಎಸೆತದಲ್ಲೇ ಕೆ.ಎಲ್. ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ. ಇಶಾನ್ ಪೊರೆಲ್ ಬಂಗಾಳ ತಂಡಕ್ಕೆ ಮೊದಲ ಯಶಸ್ಸು ಒದಗಿಸಿಕೊಟ್ಟಿದ್ದಾರೆ. ಇದೀಗ ದೇವದತ್ ಪಡಿಕ್ಕಲ್ ಹಾಗೂ ರವಿ ಕುಮಾರ್ ಸಮರ್ಥ್ ಕ್ರೀಸ್‌ನಲ್ಲಿದ್ದಾರೆ.