Asianet Suvarna News Asianet Suvarna News

ರಣಜಿ ಟ್ರೋಫಿ: ಬಂಗಾಳ ಎದುರು ರನ್ ಗಳಿಸಲು ಪರದಾಡಿದ ಕರ್ನಾಟಕ

ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ವೇಗಿ ಇಶಾನ್ ಪೊರೆಲ್ ಮಾರಕ ದಾಳಿಗೆ ತತ್ತರಿಸಿದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ಕೇವಲ 122 ರನ್‌ಗಳಿಗೆ ಸರ್ವಪತಮ ಕಂಡಿದೆ. ಎರಡನೇ ದಿನದಾಟದ ಹೈಲೈಟ್ಸ್‌ ಇಲ್ಲಿದೆ ನೋಡಿ

Ranji Trophy Ishan Porel 5 wickets puts Bengal in driver seat against Karnataka
Author
Kolkata, First Published Mar 1, 2020, 6:54 PM IST

ಕೋಲ್ಕತಾ(ಮಾ.01): ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದ ಕರ್ನಾಟಕ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ಎದುರು 122 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 190 ರನ್‌ಗಳ ಹಿನ್ನಡೆ ಅನುಭವಿಸಿದೆ. ಇನ್ನು 2ನೇ ಇನಿಂಗ್ಸ್ ಆರಂಭಿಸಿರುವ ಬಂಗಾಳ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದು, ಒಟ್ಟಾರೆ 262 ರನ್‌ಗಳ ಮುನ್ನಡೆ ಸಾಧಿಸಿದೆ.

ರಣಜಿ ಟ್ರೋಫಿ: ಬಂಗಾಳ 312ಕ್ಕೆ ಆಲೌಟ್, ಕರ್ನಾಟಕಕ್ಕೆ ಆರಂಭಿಕ ಆಘಾತ..!

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಂಗಾಳ ತಂಡ 312 ರನ್‌ ಗಳಿಸಿ ಆಲೌಟ್‌ಗೊಳಗಾಯಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಮೊದಲ ಓವರ್‌ನಲ್ಲೇ ಆರ್. ಸಮರ್ಥ್ ವಿಕೆಟ್ ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ನಾಯಕ ಕರುಣ್ ನಾಯರ್‌ಗೆ ಇಶಾನ್ ಪೊರೆಲ್ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್(26), ಕೆ. ಗೌತಮ್(31) ಹಾಗೂ ಅಭಿಮನ್ಯು ಮಿಥುನ್(24) ಹೊರತುಪಡಿಸಿ ಉಳಿದ್ಯಾವ ಆಟಗಾರರು 20 ರನ್ ಬಾರಿಸಲು ಶಕ್ತರಾಗಲಿಲ್ಲ. ಮನೀಶ್ ಪಾಂಡೆ(12), ಕೆ. ಸಿದ್ಧಾರ್ಥ್(14), ದೇವದತ್ ಪಡಿಕ್ಕಲ್(4) ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಇಶಾನ್ ಪೊರೆಲ್ ಬಂಗಾಳ ಪರ ಕೇವಲ 39 ರನ್ ನೀಡಿ 5 ವಿಕೆಟ್ ಕಬಳಿಸಿದರು. 

ಒಂದೇ ದಿನ 15 ವಿಕೆಟ್: ಈಡನ್ ಗಾರ್ಡನ್ ಮೈದಾನದಲ್ಲಿ ಬೌಲರ್‌ಗಳು ಕಮಾಲ್ ಮಾಡಿದ್ದು, ಒಂದೇ ದಿನ 15 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಇದರಲ್ಲಿ ಬಂಗಾಳ ಬೌಲರ್‌ಗಳು 10 ವಿಕೆಟ್ ಪಡೆದರೆ, ಕರ್ನಾಟಕ ಬೌಲರ್‌ಗಳು 5 ವಿಕೆಟ್ ಕಬಳಿಸಿದ್ದಾರೆ. ಮಿಥುನ್ ಎರಡನೇ ಇನಿಂಗ್ಸ್‌ನಲ್ಲಿ 9 ರನ್ ನೀಡಿ 3 ವಿಕೆಟ್ ಕಬಳಿಸಿದ್ದು, ಮತ್ತಷ್ಟು ಆಕ್ರಮಣಕಾರಿ ಬೌಲಿಂಗ್ ಮಾಡುವ ಸಾಧ್ಯತೆಯಿದೆ.

ಸಂಕ್ಷಿಪ್ತ ಸ್ಕೋರ್:
ಬಂಗಾಳ: 312& 72/4
ಕರ್ನಾಟಕ: 122/10

(* ಎರಡನೇ ದಿನದಾಟದ ಅಂತ್ಯಕ್ಕೆ ) 
 

Follow Us:
Download App:
  • android
  • ios