ರಣಜಿ ಟ್ರೋಫಿ: ಕರ್ನಾಟಕಕ್ಕೆ ಸಮರ್ಥ್ ಶತಕದಾಸರೆ
ರವಿಕುಮಾರ್ ಸಮರ್ಥ್ ಅಜೇಯ ಶತಕ ಸಿಡಿಸುವ ಮೂಲಕ ರಣಜಿ ಟೂರ್ನಿಯಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಆರಂಭವಾದ ಮಧ್ಯ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಸಮರ್ಥ್ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 233 ರನ್‌ಗಳಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಶಿವಮೊಗ್ಗ(ಫೆ.05): ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಅವರ ಅಜೇಯ ಶತಕ ಹಾಗೂ ಕೆ.ವಿ. ಸಿದ್ಧಾರ್ಥ್ ಅವರ ಅಜೇಯ ಅರ್ಧಶತಕದಿಂದಾಗಿ ಕರ್ನಾಟಕ, ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಕರ್ನಾಟಕ ತಂಡ, ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 233 ರನ್‌ಗಳಿಸಿದೆ.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಕ್ವಾರ್ಟರ್ ಗುರಿ!
2019-20ರ ರಣಜಿ ಟ್ರೋಫಿಯ ನಾಕೌಟ್ ಹಂತಕ್ಕೇರಲು ಪೈಪೋಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೆಲುವು ಸಾಧಿಸಲೇಬೇಕಾಗಿದೆ. ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಸಮರ್ಥ್ (ಅಜೇಯ 105 ರನ್) ಹಾಗೂ ಸಿದ್ದಾರ್ಥ್ (ಅಜೇಯ 62 ರನ್) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ದೇವದತ್ (0), ರೋಹನ್ ಕದಂ (9), ನಾಯಕ ಕರುಣ್ ನಾಯರ್ (22) ನಿರಾಸೆ ಮೂಡಿಸಿದರು.
ಸ್ಕೋರ್: ಕರ್ನಾಟಕ 233/3 (ಮೊದಲ ದಿನದಂತ್ಯಕ್ಕೆ)
ಸರ್ಫರಾಜ್ 605 ರನ್:
ಮುಂಬೈ ರಣಜಿ ತಂಡದ ಆಟಗಾರ ಸರ್ಫರಾಜ್ ಖಾನ್ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಔಟಾಗದೇ 605 ರನ್‌ಗಳಿಸಿದ್ದಾರೆ. ಈ ರನ್ ಒಂದೇ ಇನ್ನಿಂಗ್ಸ್‌ನಲ್ಲಿ ಬಂದಿಲ್ಲ. ಬದಲಾಗಿ ಕಳೆದ 2 ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ ಅಜೇಯ 301 ಹಾಗೂ ಅಜೇಯ 226 ರನ್‌ಗಳಿಸಿದ್ದರು. ಮಂಗಳವಾರ ಸೌರಾಷ್ಟ್ರ ವಿರುದ್ಧ 78 ರನ್‌ಗಳಿಸುವ ಮೂಲಕ ಔಟಾಗದೇ 605 ರನ್‌ಗಳಿಸಿದ ಶ್ರೇಯಕ್ಕೆ ಪಾತ್ರರಾದರು. 1997-98ರಲ್ಲಿ ವಿವಿಎಸ್ ಲಕ್ಷ್ಮಣ್ ಹೀಗೆ ಔಟಾಗದೇ 538 ರನ್‌ಗಳಿಸಿದ್ದರು. ಸರ್ಫರಾಜ್ ಲಕ್ಷ್ಮಣ್‌ರನ್ನು ಹಿಂದಿಕ್ಕಿದ್ದಾರೆ.