Asianet Suvarna News Asianet Suvarna News

ಅನುಮತಿ ಇಲ್ಲದೆ ಡ್ರೆಸಿಂಗ್ ರೂಂ ಪ್ರವೇಶಿಸಿದ ಗಾಂಧಿ; ಹೊರಕ್ಕೆ ಹಾಕಿದ ACU!

ಕ್ರಿಕೆಟ್ ಆಟಗಾರರ ಡ್ರೆಸಿಂಗ್ ರೂಂ ಪ್ರವೇಶ ಪ್ರಕರಣ ಇದೀಗ ಬಿಸಿಸಿಐಗೆ ತಲುಪಿದೆ. ಕ್ರಿಕೆಟಿಗ ಮನೋಜ್ ತಿವಾರಿ ಕುರಿತು ದೂರು ನೀಡಿದ್ದಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ಗಾಂಧಿಯನ್ನು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ಘಟಕ ಅಧಿಕಾರಿಗಳುಹೊರ ಕಳುಹಿಸಿದ್ದಾರೆ. ಈ ಘಟನ ವಿವರ ಇಲ್ಲಿದೆ. 

Ranji trophy ACU officials kicked out selector devang gandhi from dressing room
Author
Bengaluru, First Published Dec 27, 2019, 10:24 AM IST
  • Facebook
  • Twitter
  • Whatsapp

ಕೋಲ್ಕತಾ(ಡಿ.27):  ಅನಧಿಕೃತವಾಗಿ ಪಶ್ಚಿಮ ಬಂಗಾಳ ತಂಡದ ಡ್ರೆಸಿಂಗ್‌ ಕೊಠಡಿಗೆ ಪ್ರವೇಶಿಸಿದ್ದಕ್ಕಾಗಿ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ದೇವಾಂಗ್‌ ಗಾಂಧಿ ಅವರನ್ನು ಹೊರ ಕಳುಹಿಸಿದ ಘಟನೆ ಗುರುವಾರ ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ನಡುವಣ ರಣಜಿ ಪಂದ್ಯದ ವೇಳೆ ಈ ಅನುಮತಿ ಇಲ್ಲದೇ ಗಾಂಧಿ ಡ್ರೆಸಿಂಗ್‌ ಕೊಠಡಿ ಒಳ ಪ್ರವೇಶಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಇದನ್ನೂ ಓದಿ: ತೆಂಡುಲ್ಕರ್‌ ಭದ್ರತೆ ಇಳಿಸಿ ಆದಿತ್ಯ ಠಾಕ್ರೆ ಭದ್ರತೆ ಹೆಚ್ಚಿಸಿದ ಮಹಾ ಸರ್ಕಾರ.

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿ ಸೌಮೆನ್‌ ಕರ್ಮಾಕರ್‌, ಗಾಂಧಿ ಅವರನ್ನು ತೆರಳುವಂತೆ ಸೂಚಿಸಿದ್ದಾರೆ. ಈ ವೇಳೆ ತಂಡದ ಫಿಸಿಯೋ ಅವರನ್ನು ಕಾಣಲು ಬಂದಿರುವುದಾಗಿ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಮಾಜಿ ನಾಯಕ ಮನೋಜ್‌ ತಿವಾರಿ ಪ್ರಶ್ನಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತಾದ ಮಾಹಿತಿ ಈಗ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ತಲುಪಿದೆ.

ಇದನ್ನೂ ಓದಿ: ಕೋಚ್‌ಗೆ ಬೈದು ತಂಡದಿಂದಲೇ ಕಿಕೌಟ್‌ ಆದ ಅಶೋಕ್ ದಿಂಡಾ!.

ವೈದ್ಯಕೀಯ ಚಿಕಿತ್ಸೆಗಾಗಿ ಗಾಂಧಿ ಅವರು ಆಟಗಾರರ ಡ್ರೆಸಿಂಗ್‌ ಕೊಠಡಿಗೆ ಆಗಮಿಸಿದ್ದರು. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೂ ತರಲಾಗಿತ್ತು. ಪ್ರವೇಶಕ್ಕೆ ಅಧಿಕೃತ ಪರವಾನಗಿ ನೀಡಿದ ಬಳಿಕವೇ ಪ್ರವೇಶಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.

Follow Us:
Download App:
  • android
  • ios