ಕೋಲ್ಕೊತಾ[ಡಿ.26]: ತಂಡದ ಬೌಲಿಂಗ್‌ ತರಬೇತುದಾರ ರಣದೇಬ್‌ ಬೋಸ್‌ ಅವರನ್ನು ನಿಂದಿಸಿದ ಕಾರಣಕ್ಕಾಗಿ ಬಂಗಾಳ ತಂಡದ ಬೌಲರ್‌ ಅಶೋಕ್‌ ದಿಂಡಾ ಅವರನ್ನು ತಂಡದಿಂದ ಕೈಬಿಡಲಾಗಿದೆ. 

ರಣಜಿ ಟ್ರೋಫಿ: ಬ್ಯಾಟಿಂಗ್‌ನಿಂದಲೇ ಉತ್ತರ ಕೊಟ್ಟ ಶಿಖರ್ ಧವನ್

ಬುಧವಾರದಿಂದ ಆರಂಭವಾದ ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಿಂದ ಅವರು ಹೊರಬಿದ್ದಿದ್ದಾರೆ. ಡ್ರೆಸ್ಸಿಂಗ್‌ ಕೋಣೆಯಲ್ಲಿ ದಿಂಡಾ ಬೌಲಿಂಗ್‌ ತರಬೇತುದಾರ ಬೋಸ್‌ ಜೊತೆ ಜಗಳ ಮಾಡಿಕೊಂಡು ಅವರನ್ನು ಕೆಟ್ಟಪದ ಬಳಸಿ ನಿಂದಿಸಿದರು. ಕೂಡಲೇ ಕ್ಷಮೆ ಕೇಳುವಂತೆ ದಿಂಡಾ ಅವರಿಗೆ ಬಂಗಾಳ ಕ್ರಿಕೆಟ್‌ ಮಂಡಳಿ ಸೂಚಿಸಿತ್ತು. ಆದರೆ ದಿಂಡಾ ಇದನ್ನು ನಿರಾಕರಿಸಿದ್ದರು. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ. ದಿಂಡಾ ಹಾಗೂ ಬೋಸ್‌ ಒಟ್ಟಿಗೆ ಆಡುತ್ತಿದ್ದಾನಿಂದಲೂ ಇಬ್ಬರ ನಡುವೆ ಮನಸ್ತಾಪವಿದೆ ಎನ್ನಲಾಗಿದೆ.

IPL 2020: ಹರಾಜಿಗೆ ಮುನ್ನ ಮತ್ತೆ 6 ಆಟಗಾರರ ಸೇರ್ಪಡೆ

ಅಶೋಕ್ ದಿಂಡಾ 2020ರ ಐಪಿಎಲ್ ಆಟಗಾರರ ಹರಾಜಿಗೆ ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಂಡಿದ್ದರು. ಆದರೆ ಯಾವೊಬ್ಬ ಫ್ರಾಂಚೈಸಿಯೂ ದಿಂಡಾ ಅವರನ್ನು ಖರೀದಿಸುವ ಮನಸು ಮಾಡಿರಲಿಲ್ಲ. ಆಂಧ್ರ ಪ್ರದೇಶ ವಿರುದ್ಧ ಬಂಗಾಳ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು.