Asianet Suvarna News Asianet Suvarna News

ರಣಜಿ ಟ್ರೋಫಿ: ಮುಂಬೈ, ಡೆಲ್ಲಿ ಗುಂಪಿನಲ್ಲೇ ಕರ್ನಾಟಕಕ್ಕೆ ಸ್ಥಾನ..!

* 2022ರ ಆವೃತ್ತಿಯ ರಣಜಿ ಪಂದ್ಯಾವಳಿಗೆ ವೇದಿಕೆ ಸಿದ್ಧ

* ಜನವರಿ 05ರಿಂದ ಆರಂಭವಾಗಲಿದೆ ರಣಜಿ ಟೂರ್ನಿ

* ಕರ್ನಾಟಕ ಈ ಬಾರಿ ಎಲೈಟ್‌ ಗ್ರೂಪ್‌ ‘ಸಿ’ಯಲ್ಲಿ ಸ್ಥಾನ

Ranji Trophy 2022 Karnataka Delhi and Mumbai Cricket Team Clubbed In Same Group kvn
Author
New Delhi, First Published Sep 1, 2021, 8:15 AM IST

ನವದೆಹಲಿ(ಸೆ.01): ಕೊರೋನಾ ಕಾರಣದಿಂದ ಕಳೆದ ಸಾಲಿನಲ್ಲಿ ರದ್ದುಗೊಂಡಿದ್ದ ದೇಸಿ ಕ್ರಿಕೆಟ್‌ ಚಟುವಟಿಕೆಗಳು ಚುರುಕುಗೊಂಡಿದೆ. 2022ರ ಆವೃತ್ತಿಯ ರಣಜಿ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದ್ದು, ಜನವರಿ 5ರಿಂದ ಟೂರ್ನಿ ಆರಂಭವಾಗಲಿದೆ. ಈ ಬಾರಿ ಕರ್ನಾಟಕಕ್ಕೆ ಕಠಿಣ ಸವಾಲು ಎದುರಾಗಲಿದ್ದು, ದೆಹಲಿ ಮತ್ತು ಮುಂಬೈನಂತಹ ಬಲಿಷ್ಠ ತಂಡಗಳು ರಾಜ್ಯ ಇರುವ ಗುಂಪಿನಲ್ಲೇ ಸ್ಥಾನ ಪಡೆದಿದೆ.

ಕರ್ನಾಟಕ ಈ ಬಾರಿ ಎಲೈಟ್‌ ಗ್ರೂಪ್‌ ‘ಸಿ’ಯಲ್ಲಿ ಸ್ಥಾನ ಪಡೆದಿದ್ದು, ಮುಂಬೈ, ದೆಹಲಿ ಜತೆಗೆ ಹೈದರಾಬಾದ್‌, ಉತ್ತರಾಖಂಡ್‌ ಮತ್ತು ಮಹಾರಾಷ್ಟ್ರಗಳು ಇದೇ ಗುಂಪಿನಲ್ಲಿವೆ. 2022ರ ರಣಜಿ ಪಂದ್ಯಾವಳಿಗೆ ಮುಂಬೈ (ಎಲೈಟ್‌-ಎ), ಬೆಂಗಳೂರು (ಎಲೈಟ್‌-ಬಿ), ಬೆಂಗಳೂರು (ಎಲೈಟ್‌-ಸಿ) ಅಹಮದಾಬಾದ್‌ (ಎಲೈಟ್‌-ಡಿ), ತಿರುವನಂತಪುರ (ಎಲೈಟ್‌-ಇ) ಹಾಗೂ ಚೆನ್ನೈ(ಪ್ಲೇಟ್‌) ಈ ಐದು ನಗರಗಳು ಆತಿಥ್ಯ ವಹಿಸಲಿವೆ.

ದೇಶಿ ಕ್ರಿಕೆಟ್‌ ಟೂರ್ನಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ: ಬಿಸಿಸಿಐ

ಈಡನ್‌ನಲ್ಲಿ ಫೈನಲ್‌:

2022ನೇ ಸಾಲಿನ ರಣಜಿ ಪಂದ್ಯಾವಳಿಯ ನಾಕೌಟ್‌ ಹಾಗೂ ಫೈನಲ್‌ ಪಂದ್ಯಗಳು ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳದಲ್ಲಿ ನಡೆಯಲಿವೆ. ಫೈನಲ್‌ಗೆ ಮಾ.16ರಂದು ದಿನಾಂಕ ನಿಗದಿ ಪಡಿಸಲಾಗಿದೆ. ಇದೇ ನ.4ರಿಂದ ಸೈಯದ್‌ ಮುಷ್ತಾಕ್‌ ಅಲಿ ಟಿ-20 ಚಾಂಪಿಯನ್‌ಶಿಪ್‌ ಟೂರ್ನಿಯೊಂದಿಗೆ ಭಾರತದ ಪುರುಷರ ದೇಶಿ ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಡಿ.8ರಿಂದ ವಿಜಯ್‌ ಹಜಾರೆ ಏಕದಿನ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಲಿದೆ.

ಎಲೈಟ್‌-ಎ: ಗುಜರಾಜ್‌, ಪಂಜಾಬ್‌, ಹಿಮಾಚಲ ಪ್ರದೇಶ, ಸವೀರ್‍ಸಸ್‌, ಮಧ್ಯಪ್ರದೇಶ, ಅಸ್ಸಾಂ

ಎಲೈಟ್‌-ಬಿ: ಪ.ಬಂಗಾಳ, ರಾಜಸ್ಥಾನ, ಕೇರಳ, ಹರ್ಯಾಣ, ವಿದರ್ಭ, ತ್ರಿಪುರ

ಎಲೈಟ್‌-ಸಿ: ಕರ್ನಾಟಕ, ಮುಂಬೈ, ದೆಹಲಿ, ಹೈದರಾಬಾದ್‌, ಉತ್ತರಾಖಂಡ್‌, ಮಹಾರಾಷ್ಟ್ರ

ಎಲೈಟ್‌-ಡಿ: ಸೌರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ರೈಲ್ವೇಸ್‌, ಗೋವಾ

ಎಲೈಟ್‌-ಇ: ಆಂಧ್ರಪ್ರದೇಶ, ಉತ್ತರ ಪ್ರದೇಶ, ಬರೋಡಾ, ಒಡಿಶಾ, ಛತ್ತೀಸ್‌ಗಢ, ಪಾಂಡಿಚೇರಿ

ಪ್ಲೇಟ್‌: ಬಿಹಾರ, ಮೇಘಾಲಯಾ, ಚಂಡೀಗಢ, ನಾಗಾಲ್ಯಾಂಡ್‌, ಮಿಜೋರಾಂ, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ

Follow Us:
Download App:
  • android
  • ios