Asianet Suvarna News Asianet Suvarna News

ರಾಂಚಿ ಟೆಸ್ಟ್: ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ರಹಾನೆ

ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ದ್ವಿಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ranchi Test Rohit Sharma eyes double hundred after Ajinkya Rahane exit
Author
Ranchi, First Published Oct 20, 2019, 11:25 AM IST

ರಾಂಚಿ[ಅ.20]: ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ, ಕೆಲ ಹೊತ್ತಿನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ 267 ರನ್’ಗಳ ಜತೆಯಾಟಕ್ಕೂ ತೆರೆ ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಇದೀಗ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ.

224/3 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ-ರಹಾನೆ ತಂಡವನ್ನು ಮುನ್ನೂರರ ಗಡಿ ದಾಟಿಸಿತು. ಅಜಿಂಕ್ಯ ರಹಾನೆ 167 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದರು. ಇದರೊಂದಿಗೆ ತವರಿನಲ್ಲಿ ಬರೋಬ್ಬರಿ ಮೂರು ವರ್ಷಗಳ ಬಳಿಕ ರಹಾನೆ ಮೊದಲ ಶತಕ ಬಾರಿಸಿದರು. 2016ರ ಅಕ್ಟೋಬರ್’ನಲ್ಲಿ ರಹಾನೆ ಕಡೆಯ ಬಾರಿಗೆ ಭಾರತದಲ್ಲಿ ಶತಕ ಸಿಡಿಸಿದ್ದರು. ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್’ನಲ್ಲಿ ಬಾರಿಸಿದ 11ನೇ ಶತಕವಾಗಿದೆ. 

ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸುವ ಮುನ್ನ 192 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 115 ರನ್ ಬಾರಿಸಿದ್ದರು. ಜಾರ್ಜ್ ಲಿಂಡೆ ಬೌಲಿಂಗ್’ನಲ್ಲಿ ವಿಕೆಟ್ ಕೀಪರ್ ಹೆನ್ರಿಚ್ ಕ್ಲಸೆನ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಅಂದಹಾಗೆ ಲಿಂಡೆಗಿಂದು ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ವಿಕೆಟ್ ಆಗಿದೆ. 

ಇದೀಗ 82 ಓವರ್ ಮುಕ್ತಾಯದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 332 ರನ್ ಬಾರಿಸಿದ್ದು, ರೋಹಿತ್ ಶರ್ಮಾ 184 ಹಾಗೂ ರವೀಂದ್ರ ಜಡೇಜಾ 7 ರನ್ ಬಾರಿಸಿದ್ದಾರೆ. ಇನ್ನು ಕೇವಲ 16 ರನ್ ಬಾರಿಸಿದರೆ ರೋಹಿತ್ ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ದ್ವಿಶತಕ ಪೂರೈಸಲಿದ್ದಾರೆ. 

Follow Us:
Download App:
  • android
  • ios