Asianet Suvarna News Asianet Suvarna News

ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್ ಕಪೂರ್, ಆಲಿಯಾ ಭಟ್..! ಫೋಟೋ ವೈರಲ್

ಸದ್ಯ ಏಷ್ಯಾಕಪ್‌ ಟೂರ್ನಿಯ ಬಗ್ಗೆ ಹೇಳುವುದಾದರೇ, ಆಫ್ಘಾನಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೇರಲು ವಿಫಲವಾಗಿತ್ತು. ಇದೀಗ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ಅಕ್ಟೋಬರ್ 05ರಿಂದ ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಮೇಲೆ ಕಣ್ಣಿಟ್ಟಿದೆ.

Ranbir Kapoor Alia Bhatt pose with Afghanistan cricketer Rashid Khan in New York pic goes viral kvn
Author
First Published Sep 16, 2023, 11:31 AM IST

ನ್ಯೂಯಾರ್ಕ್‌(ಸೆ.16): ಬಾಲಿವುಡ್ ತಾರಾ ದಂಪತಿಗಳಾದ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಸದ್ಯ ತಮ್ಮ ಬೇಸಿಗೆ ಬಿಡುವಿನ ಸಮಯವನ್ನು ಎಂಜಾಯ್ ಮಾಡಲು ನ್ಯೂಯಾರ್ಕ್‌ನಲ್ಲಿ ಕ್ವಾಲಿಟಿ ಸಮಯವನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸೆಲಿಬ್ರಿಟಿ ಜೋಡಿ ಆಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಸೆಪ್ಟೆಂಬರ್ 15ರಂದು ಸ್ವತಃ ರಶೀದ್ ಖಾನ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಈ ಫೋಟೋವನ್ನು ಶೇರ್ ಮಡಿದ್ದಾರೆ. 

ಈ ಕುರಿತಂತೆ "ಬಾಲಿವುಡ್‌ನ ಬಿಗ್ಗೆಸ್ಟ್‌ ಜತೆ, ಇದು ತುಂಬಾ ಸುಂದರವಾದ ಭೇಟಿಯಾಗಿತ್ತು ರಣ್ಬೀರ್, ಆಲಿಯಾ" ಎಂದು ರಶೀದ್ ಖಾನ್ ಬರೆದುಕೊಂಡಿದ್ದಾರೆ. ರಶೀದ್ ಖಾನ್, ಸದ್ಯ ಆಫ್ಘಾನಿಸ್ತಾನ ಪುರುಷರ ಟಿ20 ತಂಡದ ನಾಯಕರಾಗಿದ್ದಾರೆ. ರಶೀದ್‌ ಖಾನ್, ಈ ವೇಳೆ ಕಪ್ಪು ಹೂಡಿ ಹಾಗೂ ನೀಲಿ ಜೀನ್ಸ್‌ನಲ್ಲಿ ಬಾಲಿವುಡ್‌ ಸೆಲಿಬ್ರಿಟಿಗಳ ಜತೆ ಪೋಸ್‌ ಮಾಡಿದ್ದಾರೆ. ಇನ್ನು ಆಲಿಯಾ ಭಟ್ ಕಪ್ಪು ಟೀ-ಶರ್ಟ್‌ ತೊಟ್ಟಿದ್ದರೆ, ರಣ್ಬೀರ್ ಕಪೂರ್ ನೀಲಿ ಟೀ-ಶರ್ಟ್‌ ತೊಟ್ಟಿದ್ದಾರೆ.

ಪಾಕ್ ಗಳಿಸಿದ್ದು 252, ಲಂಕಾ ಬಾರಿಸಿದ್ದು 252, ಹಾಗಿದ್ರೂ ಲಂಕಾ ಗೆದ್ದಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

 
 
 
 
 
 
 
 
 
 
 
 
 
 
 

A post shared by Rashid Khan (@rashid.khan19)

ಇನ್ನು ಕ್ರಿಕೆಟ್ ವಿಚಾರವಾಗಿ ಹೇಳಬೇಕೆಂದರೆ, ಸದ್ಯ ಏಷ್ಯಾಕಪ್‌ ಟೂರ್ನಿಯ ಬಗ್ಗೆ ಹೇಳುವುದಾದರೇ, ಆಫ್ಘಾನಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೇರಲು ವಿಫಲವಾಗಿತ್ತು. ಇದೀಗ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ಅಕ್ಟೋಬರ್ 05ರಿಂದ ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಮೇಲೆ ಕಣ್ಣಿಟ್ಟಿದೆ. ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಇನ್ನು ಅಕ್ಟೋಬರ್ 11ರಂದು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಮಗುವಾದ್ಮೇಲೆ ಚಾರ್ಮ್ ಕಳೆದುಕೊಂಡ್ರಾ ಮಯಾಂತಿ ಲ್ಯಾಂಗರ್? ನೆಟ್‌ವರ್ಥ್ ಮಾತ್ರ ಹೆಚ್ಚಾಗಿದೆ, ಏಷ್ಟಿದೆ ಆಸ್ತಿ?

2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರೆ ಲೀಗ್ ಹಂತದಲ್ಲಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ಸೆಣಸಾಡಲಿವೆ. ಲೀಗ್ ಹಂತ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಇದಾದ ಬಳಿಕ ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. 
 

Follow Us:
Download App:
  • android
  • ios