ಟೂರ್ನಿ ಆರಂಭಕ್ಕೂ ಮುನ್ನ ಸೆಮೀಸ್‌ಗೇರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ, ಇದೀಗ ಲೀಗ್ ಹಂತದಲ್ಲೇ ತಮ್ಮ ಅಭಿಯಾನ ಮುಗಿಸಿದೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 5 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದೆ.

ಲಾಹೋರ್‌(ನ.14): ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನದ ಹೊರತಾಗಿಯೂ ಪಾಕಿಸ್ತಾನದ ನಾಯಕ ಬಾಬರ್‌ ಆಜಂರ ಬೆನ್ನಿಗೆ ನಿಂತಿರುವ ಮಾಜಿ ನಾಯಕ ರಮೀಜ್‌ ರಾಜಾ, ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ವಿರುದ್ಧ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ರಾಜಾ, ‘ನಾಯಕ, ಕೋಚ್‌ಗಳನ್ನು ಬದಲಿಸಿದ ಕೂಡಲೇ ಪಾಕ್‌ ಕ್ರಿಕೆಟ್‌ ಶ್ರೇಷ್ಠ ಮಟ್ಟಕ್ಕೆ ತಲುಪುವುದಿಲ್ಲ. ಮೊದಲು ಪಿಸಿಬಿ ಮನಸ್ಥಿತಿ ಬದಲಾಗಬೇಕು. ಪಾಕ್‌ ಕ್ರಿಕೆಟ್ ಸಂಪೂರ್ಣ ಕುಸಿದಿದೆ. ಆಟದ ಬಗ್ಗೆ ಪಿಸಿಬಿಗೆ ಉತ್ಸಾಹವಿಲ್ಲದಿದ್ದರೆ ಕ್ರಿಕೆಟ್‌ ಒಂದಿಂಚೂ ಉತ್ತಮವಾಗಲು ಸಾಧ್ಯವಿಲ್ಲ. 70 ವರ್ಷದ ವ್ಯಕ್ತಿಯನ್ನು ಆಯ್ಕೆಗಾರನ್ನಾಗಿ ಮಾಡಿ ಕ್ರಿಕೆಟ್‌ನ ಬೆಳವಣಿಗೆ ಬಗ್ಗೆ ಮಾತನಾಡುತ್ತೀರಿ’ ಎಂದು ಲೇವಡಿ ಮಾಡಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನ ಸೆಮೀಸ್‌ಗೇರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ, ಇದೀಗ ಲೀಗ್ ಹಂತದಲ್ಲೇ ತಮ್ಮ ಅಭಿಯಾನ ಮುಗಿಸಿದೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 5 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದೆ.

ಮುಂಬೈನಲ್ಲಿ ಭಾರತ vs ಕಿವೀಸ್‌ ಸೆಮೀಸ್ ಕದನಕ್ಕೆ ಕ್ಷಣಗಣನೆ..!

ಪಾಕ್‌ ಬೌಲಿಂಗ್‌ ಕೋಚ್‌ ಮೋರ್ಕೆಲ್‌ ರಾಜೀನಾಮೆ

ಲಾಹೋರ್‌: ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಪಾಕಿಸ್ತಾನ ಲೀಗ್‌ ಹಂತದಿಂದಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದ ಬೌಲಿಂಗ್‌ ಕೋಚ್‌ ಹುದ್ದೆಗೆ ಮೋರ್ನೆ ಮೋರ್ಕೆಲ್‌ ರಾಜೀನಾಮೆ ನೀಡಿದ್ದಾರೆ. ಮೋರ್ಕೆಲ್‌ ಕಳೆದ ಜೂನ್‌ನಲ್ಲಿ ಪಾಕ್‌ ಬೌಲಿಂಗ್ ಕೋಚ್‌ ಆಗಿ ನೇಮಕಗೊಂಡಿದ್ದರು. ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಇಂಜಮಾಮ್‌ ಉಲ್‌ ಹಕ್‌ ರಾಜೀನಾಮೆ ನೀಡಿದ್ದರು.

ಜಯ್‌ ಶಾ ನಿಯಂತ್ರಣದಲ್ಲಿ ಲಂಕಾ ಮಂಡಳಿ: ಅರ್ಜುನ!

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ನಿಯಂತ್ರಣದಲ್ಲಿದೆ ಎಂದು 1996ರ ವಿಶ್ವಕಪ್‌ ವಿಜೇತ ಲಂಕಾ ನಾಯಕ ಅರ್ಜುನ ರಣತುಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲಂಕಾ ಪತ್ರಿಕೆಯೊಂದರ ಲೇಖನದಲ್ಲಿ ಉಲ್ಲೇಖಿಸಿರುವ ಅವರು, ‘ಎಸ್‌ಎಲ್‌ಸಿ ಅಧಿಕಾರಿಗಳ ಜೊತೆಗಿನ ಸಂಪರ್ಕದಿಂದಾಗಿ ಜಯ್‌ ಶಾ ಈಗ ಮಂಡಳಿಯನ್ನೇ ನಿಯಂತ್ರಿಸುತ್ತಿದ್ದಾರೆ. ಜಯ್ ಶಾ ಒತ್ತಡದಿಂದಾಗಿ ಲಂಕಾ ಮಂಡಳಿ ಹಾಳಾಗುತ್ತಿದೆ. ಅವರು ಲಂಕಾ ಕ್ರಿಕೆಟ್‌ಅನ್ನೇ ನಾಶ ಮಾಡುತ್ತಿದ್ದಾರೆ. ಜಯ್‌ ಶಾ ತಮ್ಮ ತಂದೆಯ ಕಾರಣಕ್ಕೆ ಮಾತ್ರ ಇಷ್ಟು ಪ್ರಭಾವಿ ಎನಿಸಿಕೊಂಡಿದ್ದಾರೆ’ ಎಂದು ರಣತುಂಗ ಟೀಕಿಸಿದ್ದಾರೆ.

ಸಿಡಿಲಮರಿ ಸೆಹ್ವಾಗ್‌ಗೆ Hall of Fame ಗೌರವ; ಅರವಿಂದ ಡಿ ಸಿಲ್ವಾ, ಡಯಾನ ಎಡುಲ್ಜಿಗೂ ಐಸಿಸಿಯಿಂದ ಗೌರವ

ಭಾರತದ ‘9 ಬೌಲರ್ಸ್‌’ ರಹಸ್ಯ ಬಿಚ್ಚಿಟ್ಟ ರೋಹಿತ್ ಶರ್ಮಾ

ಬೆಂಗಳೂರು: ನೆದರ್‌ಲೆಂಡ್ಸ್‌ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ ಭಾರತದ 9 ಆಟಗಾರರು ಬೌಲ್‌ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ರೋಹಿತ್‌ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ‘ತಂಡದಲ್ಲಿ 5 ತಜ್ಞ ಬೌಲರ್‌ಗಳಿದ್ದಾಗ ಮತ್ತೊಂದು ಆಯ್ಕೆಯನ್ನು ಸೃಷ್ಟಿಸಬೇಕಾಗುತ್ತದೆ. ಇದೇ ಕಾರಣಕ್ಕೆ 9 ಮಂದಿ ಬೌಲ್‌ ಮಾಡಿದರು’ ಎಂದಿದ್ದಾರೆ. 

9 ಮಂದಿ ಬೌಲ್‌ ಮಾಡಿದ್ದು ನಮ್ಮ ವಿಭಿನ್ನ ಪ್ರಯತ್ನ. ಮುಂದಿನ ಪಂದ್ಯಗಳಿಗೆ ಹೆಚ್ಚುವರಿ ಬೌಲಿಂಗ್‌ ಆಯ್ಕೆ ಇಟ್ಟುಕೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ತಂಡದಲ್ಲಿದ್ದಾಗ ಭಾರತಕ್ಕೆ 6 ಬೌಲರ್‌ಗಳ ಆಯ್ಕೆ ಇತ್ತು. ಆದರೆ ಗಾಯಗೊಂಡು ಅವರು ಹೊರಬಿದ್ದ ಬಳಿಕ ಸದ್ಯ 5 ಬೌಲಿಂಗ್‌ ಆಯ್ಕೆ ಮಾತ್ರ ಭಾರತಕ್ಕಿದೆ.