Asianet Suvarna News Asianet Suvarna News

ರಾಜ್‌ಕೋಟ್‌ ಟೆಸ್ಟ್‌ನ ಮೊದಲ ದಿನವೇ ರೋಹಿತ್‌, ಜಡೇಜಾರಿಂದ ಅಪರೂಪದ ದಾಖಲೆ..!

196 ಎಸೆತಗಳಲ್ಲಿ 131 ರನ್‌ ಸಿಡಿಸಿದ ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 4ನೇ, ವಿಶ್ವದ 17ನೇ ಗರಿಷ್ಠ ರನ್‌ ಸರದಾರ ಎನಿಸಿಕೊಂಡರು. ಅವರು 470 ಪಂದ್ಯಗಳಲ್ಲಿ 18,641 ರನ್‌ ಕಲೆಹಾಕಿದ್ದು, ಮಾಜಿ ನಾಯಕ ಸೌರವ್‌ ಗಂಗೂಲಿ(18,575)ಯನ್ನು ಹಿಂದಿಕ್ಕಿದರು.

Rajkot Test Rohit Sharma and Ravindra Jadeja Create unique milestone on day 1 against England kvn
Author
First Published Feb 16, 2024, 10:10 AM IST

ರಾಜ್‌ಕೋಟ್‌(ಫೆ.16): ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನ ನಿರ್ಣಾಯಕ ಘಟ್ಟದಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್‌ ಶರ್ಮಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

196 ಎಸೆತಗಳಲ್ಲಿ 131 ರನ್‌ ಸಿಡಿಸಿದ ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 4ನೇ, ವಿಶ್ವದ 17ನೇ ಗರಿಷ್ಠ ರನ್‌ ಸರದಾರ ಎನಿಸಿಕೊಂಡರು. ಅವರು 470 ಪಂದ್ಯಗಳಲ್ಲಿ 18,641 ರನ್‌ ಕಲೆಹಾಕಿದ್ದು, ಮಾಜಿ ನಾಯಕ ಸೌರವ್‌ ಗಂಗೂಲಿ(18,575)ಯನ್ನು ಹಿಂದಿಕ್ಕಿದರು. ಸಚಿನ್ ತೆಂಡುಲ್ಕರ್‌(24,208), ವಿರಾಟ್‌ ಕೊಹ್ಲಿ(26,733), ರಾಹುಲ್‌ ದ್ರಾವಿಡ್‌ (24,208) ಮೊದಲ 3 ಸ್ಥಾನಗಳಲ್ಲಿದ್ದಾರೆ.

ಭರ್ಜರಿ ಶತಕ ಚಚ್ಚಿದ ರೋಹಿತ್, ಜಡೇಜಾ, ಫಿಫ್ಟಿ ಬಾರಿಸಿ ಪತ್ನಿಗೆ ಸಿಹಿಮುತ್ತು ಕೊಟ್ಟ ಸರ್ಫರಾಜ್..!

ರೋಹಿತ್‌ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ಅತಿ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು ಅಂ.ರಾ. ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 42 ಶತಕ ಸಿಡಿಸಿದ್ದು, ಕ್ರಿಸ್‌ ಗೇಲ್‌ ದಾಖಲೆ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್‌ ವಾರ್ನರ್(49), ಸಚಿನ್ ತೆಂಡುಲ್ಕರ್‌(45) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಸಿಕ್ಸರ್‌ ದಾಖಲೆ: ಪಂದ್ಯದಲ್ಲಿ 3 ಸಿಕ್ಸರ್‌ ಸಿಡಿಸಿದ ರೋಹಿತ್‌, ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಿಕ್ಸರ್‌ ಗಳಿಕೆಯನ್ನು 212ಕ್ಕೆ ಹೆಚ್ಚಿಸಿದರು. ಇದು ಭಾರತದ ನಾಯಕರುಗಳ ಪೈಕಿ ಗರಿಷ್ಠ. ಈ ಮೂಲಕ ಎಂ.ಎಸ್‌.ಧೋನಿ(211 ಸಿಕ್ಸರ್‌) ಅವರನ್ನು ರೋಹಿತ್‌ ಹಿಂದಿಕ್ಕಿದರು. ಒಟ್ಟಾರೆ ವಿಶ್ವದ ನಾಯಕರುಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಇಯಾನ್‌ ಮೊರ್ಗನ್‌ 233 ಸಿಕ್ಸರ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್‌ನಲ್ಲಿ ರೋಹಿತ್‌ ಒಟ್ಟು 79 ಸಿಕ್ಸರ್‌ ಬಾರಿಸಿದ್ದು, ಭಾರತದ ಪರ ಗರಿಷ್ಠ ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲಿ ಎಂ.ಎಸ್‌.ಧೋನಿ(78 ಸಿಕ್ಸರ್)ಅವರನ್ನು ಹಿಂದಿಕ್ಕಿ 2ನೇ ಸ್ಥಾನಿಯಾದರು. ವಿರೇಂದ್ರ ಸೆಹ್ವಾಗ್‌(91) ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್‌ನಲ್ಲಿ 250 ವಿಕೆಟ್‌, 3000 ರನ್‌: ಜಡೇಜಾ ಭಾರತದ 3ನೇ ಕ್ರಿಕೆಟಿಗ

ರಾಜ್‌ಕೋಟ್‌: ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು 3000 ರನ್‌ ಹಾಗೂ 250 ವಿಕೆಟ್‌ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜ್‌ಕೋಟ್‌ ಟೆಸ್ಟ್‌ನಲ್ಲಿ ರೋಹಿತ್ ರಾಜ್ಯಭಾರ; ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ಕ್ಯಾಪ್ಟನ್!

ಭಾರತದ ಪರ ಈ ಮೊದಲು ಕಪಿಲ್‌ ದೇವ್‌(5248 ರನ್‌, 434 ವಿಕೆಟ್‌), ಆರ್‌.ಅಶ್ವಿನ್‌(3271 ರನ್‌, 499 ವಿಕೆಟ್‌) ಈ ಸಾಧನೆ ಮಾಡಿದ್ದಾರೆ. ಇನ್ನು, ಆಸ್ಟ್ರೇಲಿಯಾದ ಶೇನ್‌ ವಾರ್ನ್‌, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌, ನ್ಯೂಜಿಲೆಂಡ್‌ನ ರಿಚರ್ಡ್‌ ಹಾರ್ಡ್ಲೀ, ದ.ಆಫ್ರಿಕಾದ ಶಾನ್‌ ಪೊಲಾಕ್‌, ಇಂಗ್ಲೆಂಡ್‌ನ ಇಯಾನ್‌ ಬೋಥಂ, ಪಾಕಿಸ್ತಾನದ ಇಮ್ರಾನ್ ಖಾನ್‌, ನ್ಯೂಜಿಲೆಂಡ್‌ನ ವೆಟೋರಿ, ಶ್ರೀಲಂಕಾದ ಚಾಮಿಂಡಾ ವಾಸ್‌, ದ.ಆಫ್ರಿಕಾದ ಜ್ಯಾಕ್‌ ಕಾಲೀಸ್‌ ಇತರ ಸಾಧಕರು.
 

Follow Us:
Download App:
  • android
  • ios