Asianet Suvarna News Asianet Suvarna News

ICC ಮನಗೆದ್ದ 3 ಕ್ರಿಕೆಟ್‌ ಸ್ಟೇಡಿಯಂ; ಆ ಮೂರು ಕ್ರೀಡಾಂಗಣಕ್ಕೆ ವಿಶ್ವಕಪ್ ಆತಿಥ್ಯ ಸಿಕ್ಕಿದ್ದು ಹೇಗೆ..?

* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ
* ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿವೆ ದೇಶದ 3 ಸ್ಟೇಡಿಯಂ
* ಐಸಿಸಿ ಮನಸ್ಸು ಗೆದ್ದ ಮೂರು ಸ್ಟೇಡಿಯಂಗಳು ಯಾವುವು ಗೊತ್ತಾ?

Rajiv Gandhi International Stadium Ekana Stadium and Pune MCA Stadium for the first time host World Cup matches kvn
Author
First Published Jun 30, 2023, 3:39 PM IST

ಬೆಂಗಳೂರು(ಜೂ.30): ಮುಂಬರುವ ಅಕ್ಟೋಬರ್​​ 5ರಿಂದ 19ರವರೆಗೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಭಾರತಕ್ಕೆ 4ನೇ ಬಾರಿಗೆ ಏಕದಿನ ವಿಶ್ವಕಪ್ ಆತಿಥ್ಯ ಸಿಕ್ಕಿದೆ. ಈ ಮೊದಲು 1987, 1996 ಮತ್ತು 2011ರಲ್ಲಿ ಏಷ್ಯಾ ರಾಷ್ಟ್ರಗಳೊಂದಿಗೆ ವರ್ಲ್ಡ್​ಕಪ್ ಆಯೋಜಿಸಿದ್ದ ಭಾರತ, ಈ ಸಲ ಫಸ್ಟ್​ ಟೈಮ್ ಏಕಾಂಗಿಯಾಗಿ ವಿಶ್ವಕಪ್ ಆಯೋಜಿಸುತ್ತಿದೆ. 10 ತಂಡಗಳು ಭಾಗವಹಿಸುವ ಮೆಗಾ ಟೂರ್ನಿ ಪಂದ್ಯಗಳು  10 ಸ್ಟೇಡಿಯಂನಲ್ಲಿ ನಡೆಯಲಿವೆ. ಈ 10 ಮೈದಾನಗಳು ಒಟ್ಟು 48 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಆದರೆ ಈ 10ರಲ್ಲಿ 7 ಸ್ಟೇಡಿಯಂನಲ್ಲಿ ಈ ಹಿಂದಿನ ವಿಶ್ವಕಪ್​​ ಪಂದ್ಯಗಳು ನಡೆದಿದ್ದವು. ಉಳಿದ ಮೂರು ಸ್ಟೇಡಿಯಂಗಳು ಫಾರ್ ದ ಫಸ್ಟ್ ಟೈಮ್ ವರ್ಲ್ಡ್​ಕಪ್ ಮ್ಯಾಚ್​ಗಳಿಗೆ ಆತಿಥ್ಯ ವಹಿಸುತ್ತಿವೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ 

Rajiv Gandhi International Stadium Ekana Stadium and Pune MCA Stadium for the first time host World Cup matches kvn

ಮಹಾರಾಷ್ಟ್ರದ ಪುಣೆಯಲ್ಲಿ 1987 ಮತ್ತು 1996ರ ವಿಶ್ವಕಪ್​ನ ಕೆಲ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಆದರೆ ಆ ಮ್ಯಾಚ್​ಗಳು ನೆಹರು ಸ್ಟೇಡಿಯಂನಲ್ಲಿ ನಡೆದಿದ್ದವು. 2012ರಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​, ಪುಣೆಯಲ್ಲಿ ​ಸ್ಟೇಡಿಯಂ ನಿರ್ಮಾಣ ಮಾಡಿತು. ನೆಹರು ಕ್ರೀಡಾಂಗಣವನ್ನ ನವೀಕರಿಸಿ, ಉತ್ತಮ ಸೌಲಭ್ಯ ಮತ್ತು ಪ್ರೇಕ್ಷಕರ ಸಾಮರ್ಥ್ಯವನ್ನ 37 ಸಾವಿರಕ್ಕೆ ಹೆಚ್ಚಿಸಿತು. ಬಳಿಕ ಐಪಿಎಲ್ ಮತ್ತು 7 ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲಿ ನಡೆದಿವೆ. ಈ 7ರಲ್ಲಿ ಭಾರತ 4 ಗೆದ್ದು ಮೂರನ್ನ ಸೋತಿದೆ. ಈಗ ಮೊದಲ ಸಲ ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸ್ತಿದೆ. ಇಲ್ಲಿ ಒಟ್ಟು ಐದು ವರ್ಲ್ಡ್​ಕಪ್ ಮ್ಯಾಚ್​ಗಳು ನಡೆಯಲಿದ್ದು, ಅಕ್ಟೋಬರ್ 19ರಂದು ಭಾರತ-ಬಾಂಗ್ಲಾದೇಶ ನಡುವಿನ ಲೀಗ್ ಪಂದ್ಯ ಪುಣೆಯಲ್ಲೇ ನಡೆಯಲಿದೆ.

ಸಚಿನ್​​ರನ್ನ ಹೆಗಲ ಮೇಲೆ ಕೊಹ್ಲಿ ಹೊತ್ತು ತಿರುಗಿದ್ದೇಕೆ..? ರಹಸ್ಯ ಬಿಚ್ಚಿಟ್ಟ ಸೆಹ್ವಾಗ್

ಹೈದರಾಬಾದ್​ನ ರಾಜೀವ್​ಗಾಂಧಿ ಇಂಟರ್​​ನ್ಯಾಷನಲ್ ಸ್ಟೇಡಿಯಂ:

Rajiv Gandhi International Stadium Ekana Stadium and Pune MCA Stadium for the first time host World Cup matches kvn

ಹೈದರಾಬಾದ್​ನಲ್ಲಿ 1987 ಮತ್ತು 1996ರ ವಿಶ್ವಕಪ್ ಪಂದ್ಯಗಳು ನಡೆದಿದ್ದವಾದ್ರೂ ಅವೆಲ್ಲವೂ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ನಡೆದಿದ್ದವು. ಆದ್ರೆ ಈಗ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಮೊದಲ ಸಲ ಮೂರು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಆದ್ರೆ ಭಾರತದ ಪಂದ್ಯ ಮಾತ್ರ ಹೈದ್ರಾಬಾದ್​ನಲ್ಲಿ ನಡೆಯುತ್ತಿಲ್ಲ. 2003ರಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂನಲ್ಲಿ 55 ಸಾವಿರ ಆಸನಗಳ ಸಾಮರ್ಥ್ಯ ಇದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಮೈದಾನ. ಇಲ್ಲಿ ಟೀಂ ಇಂಡಿಯಾ ಆಡಿದ್ದ ಮೊದಲ ಮೂರು ಪಂದ್ಯಗಳನ್ನೂ ಸೋತಿತ್ತು. ಬಳಿಕ ಸತತ 4 ಮ್ಯಾಚ್ ಗೆದ್ದಿದೆ.

ಅಟಲ್​​​​​​​​​​​​​​​​​​​​​​​​​​​​​​​​​​​​​​​​​​​​​​ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಂ ಲಖನೌ:

Rajiv Gandhi International Stadium Ekana Stadium and Pune MCA Stadium for the first time host World Cup matches kvn

ಲಖನೌದಲ್ಲಿ ಈ ಹಿಂದೆ ವಿಶ್ವಕಪ್ ಪಂದ್ಯಗಳು ನಡೆದಿದ್ದರೂ ಅವೆಲ್ಲವೂ ಕೆ.ಡಿ. ಸಿಂಗ್ ಬಾಬು ಕ್ರೀಡಾಂಗಣದಲ್ಲಿ ನಡೆದಿದ್ದವು. ಈಗ 2017ರಲ್ಲಿ ಸ್ಥಾಪನೆಯಾದ ಲಖನೌದ ಏಕನಾ ಕ್ರೀಡಾಂಗಣದಲ್ಲಿ ಈ ಸಲದ ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ. 50 ಸಾವಿರ ಸಾಮರ್ಥ್ಯವಿರುವ ಲಖನೌ ಸ್ಟೇಡಿಯಂ, ವೇಗವಾಗಿ ಬೆಳೆಯುತ್ತಿದೆ. 2017ರಲ್ಲಿ ಸ್ಟೇಡಿಯಂ ಆರಂಭವಾಗಿದ್ದು, ಈಗಾಗಲೇ 4 ಇಂಟರ್​ ನ್ಯಾಷನಲ್ ಮ್ಯಾಚ್​ಗಳಿಗೆ ಆತಿಥ್ಯ ವಹಿಸಿದೆ. ಆದ್ರೆ ಭಾರತ ಇಲ್ಲಿ ಆಡಿರೋದು ಏಕೈಕ ಪಂದ್ಯ ಮಾತ್ರ. 2023ರಲ್ಲಿ ಫಸ್ಟ್ ಟೈಮ್ ಐಪಿಎಲ್ ಪಂದ್ಯಗಳು ಇಲ್ಲಿ ನಡೆದಿದ್ದವು. ಈಗ ಮೊದಲ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದ್ದು, ಅಕ್ಟೋಬರ್ 29ರಂದು ಭಾರತ-ಇಂಗ್ಲೆಂಡ್ ಪಂದ್ಯ ಇಲ್ಲಿ ನಡೆಯಲಿದೆ.

ಐಸಿಸಿ ಮನಸ್ಸು ಗೆದ್ದ ಮೂರು ಸ್ಟೇಡಿಯಂ

ವಿಶ್ವಕಪ್ ಆತಿಥ್ಯ ರಾಷ್ಟ್ರ ತಮ್ಮ ದೇಶದಲ್ಲಿರುವ ಪ್ರಮುಖ ಸ್ಟೇಡಿಯಂಗಳ ಹೆಸರನ್ನ ಐಸಿಸಿಗೆ ಕಳುಹಿಸುತ್ತೆ. ಐಸಿಸಿಯು ಪರಿಶೀಲನೆಗೆ ಬಂದಾಗ ಆ ಸ್ಟೇಡಿಯಂ ಅಂತಾರಾಷ್ಟ್ರಿಯ ಮಟ್ಟದ ಸೌಕರ್ಯವನ್ನ ಹೊಂದಿರಬೇಕು. ಅಂತಹ ಸ್ಟೇಡಿಯಂಗಳಿಗೆ ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗಲಿದೆ. ಐಸಿಸಿಯ ಮಾನದಂಡಗಳನ್ನು ಪೂರೈಸಿರುವುದರಿಂದ ಈ ಮೂರು ಕ್ರೀಡಾಂಗಣಗಳಿಗೆ ವರ್ಲ್ಡ್​ಕಪ್ ಮ್ಯಾಚ್​​​​​​​​​​​​​​​​​​​​​​​​ ಆತಿಥ್ಯ ಸಿಕ್ಕಿದೆ. ಈಗ ಐತಿಹಾಸಿಕ ಕ್ಷಣಕ್ಕಾಗಿ ಕಾಯ್ತಿವೆ.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

Rajiv Gandhi International Stadium Ekana Stadium and Pune MCA Stadium for the first time host World Cup matches kvn

Follow Us:
Download App:
  • android
  • ios