ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ(74) ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎಸ್‌ಪಿಬಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ 

ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ ಎಂದು ಡಿ ಬಾಸ್ ದರ್ಶನ್ ಟ್ವೀಟ್ ಮಾಡಿದ್ದಾರೆ.

ನಟ ಕಿಚ್ಚ ಸುದೀಪ್ ಅವರೂ ಟ್ವಿಟರ್ ಮೂಲಕ ಗಾನ ಗಂಧರ್ವ ಎಸ್‌ಪಿಬಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಅವರೂ ಹಿರಿಯ ಗಾಯಕರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ರೆಸ್ಟ್ ಇನ್ ಪೀಸ್ ಬಾಲಸುಬ್ರಹ್ಮಣ್ಯಂ ಗುರು, ನೀವು ಸದಾ ನಮ್ಮ ಹೃದಯದಲ್ಲಿ ಜೀವಂತವಿರುತ್ತೀರಿ ಎಂದು ಬರೆದಿದ್ದಾರೆ

"

Heart breaking ....Rest in peace Balasubramaniam garu ...you will Always live in our hearts , strength and prayers to the family and all admirers

Posted by Anushka Shetty on Friday, September 25, 2020

ಜನ್ಮ ಸಾರ್ಥಕ ಎಂಬುದಕ್ಕೆ ಉದಾಹರಣೆಯಾಗಿ ಬಾಳಿ ಗಾಯಕ ಚೇತನಕ್ಕೆ ನಮನ ಮತ್ತು ಶುಭ ವಿದಾಯ.. ವಿಷಾದ ಮರೆಸುಷ್ಟು ಹಾಡುಗಳನ್ನು ಕರುಣಿಸಿ ನೆನಪುಗಳಲ್ಲೆ ಸದಾಕಾಲ ಜೀವಂತ ಉಳಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಎಂದಿಗೂ ಬದುಕುಳಿವ ತಾಕತ್ತು ಕಲೆಗಾರನಿಗೆ ಮಾತ್ರ ಸಾಧ್ಯ. ಹೋಗಿ ಬನ್ನಿ ನಮನ, ಜೈ SPB ಎಂದು ನಿರ್ದೇಶಕ ಯೋಗರಾಜ್‌ಭಟ್ ನುಡಿ ನಮನ ಸಲ್ಲಿಸಿದ್ದಾರೆ.

Posted by Yogaraj Bhat on Friday, September 25, 2020

ಎಸ್‌ಪಿಬಿ ನಿಧನದಿಂದ ಭಾರತ ಸಂಗೀತ ಲೋಕದ ಅತ್ಯಂತ ಸುಮಧುರ ಕಂಠವನ್ನು ಕಳೆದುಕೊಂಡಿದೆ. ಪಾಡುಂ ನಿಲ ಅಥವಾ ಹಾಡುವ ಚಂದಿನೆಂದೇ ಕರೆಯಲ್ಪಡುತ್ತಿದ್ದ ಎಸ್‌ಪಿಬಿ ಪದ್ಮಭೂ‍ಣ್ ಸೇರಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಅವರ ಅಗಲುವಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದು ರಾಷ್ಟ್ರಪತಿ ರಮನಾಥ್ ಕೋಂವಿಂದ್ ಟ್ವೀಟ್ ಮಾಡಿದ್ದಾರೆ.

ಎಸ್‌ಪಿಬಿ ಅಗಲುವಿಕೆಯಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಭಾರತ ದಶಕಗಳ ಕಾಲ ಅವರ ಸುಮಧುರ ಕಂಡ ಕೇಳುತ್ತಾ ಬಂದಿದೆ. ಈ ನೋವಿನ ಸಂದರ್ಭ ಅವರ ಆಪ್ತರಿಗೆ ನೋವು ಭರಿಸುವ ಶಕ್ತಿ ಸಿಗಲಿ, ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ