Asianet Suvarna News Asianet Suvarna News

ಕರ್ನಾಟಕ ರಣಜಿ ಸಂಭವನೀಯರ ಪಟ್ಟಿಯಲ್ಲಿ ದ್ರಾವಿಡ್‌ ಪುತ್ರ ಸಮಿತ್‌ಗೆ ಸ್ಥಾನ!

ಇತ್ತೀಚೆಗಷ್ಟೇ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸಮಿತ್ ದ್ರಾವಿಡ್, ಇದೀಗ ಮುಂಬರುವ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ಸಂಭವನೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ

Rahul Dravid Son Samit Dravid named Karnataka Ranji Trophy Probable Squad kvn
Author
First Published Sep 17, 2024, 10:29 AM IST | Last Updated Sep 17, 2024, 10:29 AM IST

ಬೆಂಗಳೂರು: ಅಕ್ಟೋಬರ್ 11ರಿಂದ ಆರಂಭಗೊಳ್ಳಲಿರುವ 2024-25ರ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸಂಭವನೀಯ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿದೆ. 36 ಆಟಗಾರರ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ರ ಪುತ್ರ ಸಮಿತ್‌ ದ್ರಾವಿಡ್‌ ಸ್ಥಾನ ಪಡೆದಿದ್ದಾರೆ. 

ಕಿರಿಯರ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿ, ಇತ್ತೀಚೆಗೆ ಮುಕ್ತಾಯಗೊಂಡ 3ನೇ ಆವೃತ್ತಿಯ ಮಹಾರಾಜ ಟ್ರೋಫಿಯಲ್ಲಿ ಆಡಿದ್ದ ಸಮಿತ್‌, ಇದೀಗ ರಾಜ್ಯ ಹಿರಿಯರ ತಂಡವನ್ನೂ ಪ್ರತಿನಿಧಿಸುವ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ಕೆಎಸ್‌ಸಿಎ ಅಂತಿಮ 15 ಆಟಗಾರರ ಪಟ್ಟಿ ಪ್ರಕಟ ಮಾಡಲಿದೆ. ‘ಸಿ’ ಗುಂಪಿನಲ್ಲಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.

ಈತನೇ ಟೀಂ ಇಂಡಿಯಾ ನಿಜವಾದ ಆಸ್ತಿ ಎಂದು ಬಣ್ಣಿಸಿದ ಅಶ್ವಿನ್! ಆದ್ರೆ ಅದು ರೋಹಿತ್, ಕೊಹ್ಲಿ ಅಲ್ಲ!

ಸಂಭವನೀಯ ಆಟಗಾರರ ಪಟ್ಟಿ: ಮಯಾಂಕ್‌ ಅಗರ್‌ವಾಲ್‌, ಕೆ.ಎಲ್‌.ರಾಹುಲ್‌, ಮನೀಶ್‌ ಪಾಂಡೆ, ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್‌ ಕೃಷ್ಣ, ವಿದ್ವತ್‌ ಕಾವೇರಪ್ಪ, ವೈಶಾಖ್‌ ವಿಜಯ್‌ಕುಮಾರ್‌, ನಿಕಿನ್‌ ಜೋಸ್‌, ಸ್ಮರಣ್‌ ಆರ್‌, ಕಿಶನ್‌ ಬೆಡಾರೆ, ಅನೀಶ್‌ ಕೆ.ವಿ., ಶರತ್‌ ಶ್ರೀನಿವಾಸ್‌, ಸುಜಯ್‌ ಸತೇರಿ, ಕೃತಿಕ್‌ ಕೃಷ್ಣ, ವಾಸುಕಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ವೆಂಕಟೇಶ್‌ ಎಂ., ಶ್ರೇಯಸ್‌ ಗೋಪಾಲ್‌, ಹಾರ್ದಿಕ್‌ ರಾಜ್‌, ಶುಭಾಂಗ್‌ ಹೆಗಡೆ, ರೋಹಿತ್‌ ಕುಮಾರ್‌, ಧೀರಜ್‌ ಗೌಡ, ಮೊಹ್ಸಿನ್‌ ಖಾನ್‌, ಶಶಿಕುಮಾರ್‌ ಕೆ., ಅಧೋಕ್ಷ್‌, ಶಿಖರ್‌ ಶೆಟ್ಟಿ, ಯಶೋವರ್ಧನ್‌, ವಿಶಾಲ್‌ ಓನತ್‌, ಜ್ಯಾಸ್ಪರ್‌ ಇ.ಜೆ., ಸಮಿತ್‌ ದ್ರಾವಿಡ್‌, ಕಾರ್ತಿಕೇಯ ಕೆ.ಪಿ., ಸಮರ್ಥ್‌ ನಾಗರಾಜ್‌, ಲುವ್ನಿತ್‌ ಸಿಸೋಡಿಯಾ, ಚೇತನ್‌ ಎಲ್‌.ಆರ್‌., ಅಭಿನವ್‌ ಮನೋಹರ್‌.

ಮಾನಸಿಕ ಸದೃಢತೆ ಕಡೆ ಹೆಚ್ಚಿನ ಗಮನ: ಹರ್ಮನ್‌ಪ್ರೀತ್ ಕೌರ್

ಮುಂಬೈ: ಅ.4ರಿಂದ ಆರಂಭಗೊಳ್ಳಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಭಾರತ ತಂಡ, ಮಾನಸಿಕ ಸದೃಢತೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ನಾಯಕಿ ಹರ್ಮನ್‌ ಪ್ರೀತ್ ಕೌರ್ ಹೇಳಿದ್ದಾರೆ. 

2020ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತ, ಈ ಬಾರಿ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಭಾರತ ತಂಡ 'ಎ' ಗುಂಪಿನಲ್ಲಿ 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳ ಜೊತೆ ಸ್ಥಾನ ಪಡೆದಿದೆ. ಭಾರತಕ್ಕೆ ಅ.4ರಂದು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಗಲಿದೆ.

Latest Videos
Follow Us:
Download App:
  • android
  • ios