ಕನ್ನಡದಲ್ಲೇ ವಿಶ್ವಕಪ್ ಅನುಭವ ಹಂಚಿಕೊಂಡ ರಾಹುಲ್ ದ್ರಾವಿಡ್..! ವಿಡಿಯೋ ವೈರಲ್
ಪಂದ್ಯ ಮುಕ್ತಾಯದ ಬಳಿಕ ಸ್ಪಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಮಾಜಿ ಕ್ರಿಕೆಟಿಗರಾದ ವಿಜಯ್ ಭಾರಧ್ವಾಜ್ ಹಾಗೂ ಸುನಿಲ್ ಜೋಶಿ ಅವರ ಜತೆ ಕನ್ನಡದಲ್ಲಿಯೇ ವಿಶ್ವಕಪ್ ಅನುಭವನನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಬೆಂಗಳೂರು(ನ.13): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಮೋಘ ಪ್ರದರ್ಶನ ತೋರುತ್ತಿದ್ದು, ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಜೇಯವಾಗಿಯೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ನೆದರ್‌ಲೆಂಡ್ಸ್ ಎದುರು ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 160 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಬೀಗಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಸ್ಪಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಮಾಜಿ ಕ್ರಿಕೆಟಿಗರಾದ ವಿಜಯ್ ಭಾರಧ್ವಾಜ್ ಹಾಗೂ ಸುನಿಲ್ ಜೋಶಿ ಅವರ ಜತೆ ಕನ್ನಡದಲ್ಲಿಯೇ ವಿಶ್ವಕಪ್ ಅನುಭವನನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡ ಎನಿಸಿರುವ ಭಾರತ, ಲೀಗ್ ಹಂತದಲ್ಲಿ 9ಕ್ಕೆ 9 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಸೋಲಿಸಿದೆ.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ 128* ಮತ್ತು ಕೆ ಎಲ್ ರಾಹುಲ್ ಬಾರಿಸಿದ 102 ಆಕರ್ಷಕ ಶತಕ ಹಾಗೂ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ರೋಹಿತ್ ಶರ್ಮಾ(61), ಶುಭ್‌ಮನ್ ಗಿಲ್(51) ಮತ್ತು ವಿರಾಟ್ ಕೊಹ್ಲಿ(51) ಬಾರಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿತು. ಇದು ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತ ಎನಿಸಿಕೊಂಡಿತು.
IPL Auction ಮುನ್ನ ಮುಂಬೈ ಇಂಡಿಯನ್ಸ್ ಡೆಡ್ಲಿ ವೇಗಿಗೆ ಗೇಟ್‌ಪಾಸ್?
ಇನ್ನು ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡವು ಎರಡನೇ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ವೆಸ್ಲೆ ಬಾರ್ರಾಸಿ ವಿಕೆಟ್ ಕಳೆದುಕೊಂಡಿತಾದರೂ, ಉಳಿದ ಬ್ಯಾಟರ್‌ಗಳು ಭಾರತಕ್ಕೆ ದಿಟ್ಟ ಪ್ರತಿಸ್ಪರ್ಧೆ ನೀಡಿದರು. ನೆದರ್‌ಲೆಂಡ್ಸ್‌ನ 11 ಬ್ಯಾಟರ್‌ಗಳ ಪೈಕಿ 8 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಿದರು. ಇನ್ನು ಈಗಾಗಲೇ ವಿಶ್ವಕಪ್ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾ, ನೆದರ್‌ಲೆಂಡ್ಸ್ ಎದುರಿನ ಪಂದ್ಯವನ್ನು ಅಭ್ಯಾಸಕ್ಕೆ ಹಾಗೂ ಪ್ರಯೋಗದ ರೀತಿಯಲ್ಲಿ ಬಳಸಿಕೊಂಡಿತು. ಟೀಂ ಇಂಡಿಯಾ ಪರ ಪರ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಹೊರತುಪಡಿಸಿ 9 ಆಟಗಾರರು ಬೌಲಿಂಗ್ ಮಾಡಿ ಗಮನ ಸೆಳೆದರು. ಈ ಪೈಕಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತೀರಾ ಅಪರೂಪಕ್ಕೆ ಎನ್ನುವಂತೆ ಬೌಲಿಂಗ್ ಮಾಡಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
INDvNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!
ಇನ್ನು ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ತಂಡದ ಬೌಲಿಂಗ್ ಕಾಂಬಿನೇಷನ್ ಬಗ್ಗೆ ಕನ್ನಡದಲ್ಲೇ ಮನಬಿಚ್ಚಿ ಮಾತನಾಡಿದ್ದಾರೆ. "ಸದ್ಯದ ಪರಿಸ್ಥಿತಿಯಲ್ಲಿ ನಾವು ಐವರು ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಆಡುತ್ತಿದ್ದೇವೆ. ಇಂದು ನಾವು ನಾಲ್ವರು ಹೆಚ್ಚುವರಿಗಳನ್ನು ಆಡಿಸಿದ್ದೇವೆ. ಅವರು ಕೂಡಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಮುಖ್ಯವಾಗಿ ನಮ್ಮ ತಂಡದಲ್ಲಿ ಐವರು ಪ್ರಮುಖ ಬೌಲರ್‌ಗಳಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಈ ವಿಶ್ವಕಪ್ ಟೂರ್ನಿಯ ಬಗ್ಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಿಂತು ರಾಹುಲ್ ದ್ರಾವಿಡ್ ಕನ್ನಡದಲ್ಲೇ ಮಾತನಾಡುವ ಮೂಲಕ ತಾವೂ ಕೂಡಾ ಕನ್ನಡದ ಕಟ್ಟಾಳು ಎನ್ನುವುದನ್ನು ಸಾರಿ ಹೇಳಿದ್ದಾರೆ. ಎಷ್ಟೋ ಜನ ಕನ್ನಡದ ಗೊತ್ತಿದ್ದು ಮಾತನಾಡಲು ಹಿಂಜರಿಯುವವರ ನಡುವೆ ರಾಹುಲ್ ದ್ರಾವಿಡ್ ಕನ್ನಡ ಬಳಕೆ ಹಲವರಿಗೆ ಸ್ಪೂರ್ತಿಯಾಗುವುದರಲ್ಲಿ ಅಚ್ಚರಿಯಿಲ್ಲ. ರಾಹುಲ್ ದ್ರಾವಿಡ್‌ಗೆ ಕನ್ನಡ ಬರಲ್ಲ ಎಂದು ಟೀಕಿಸುವವರಿಗೆ ಇಲ್ಲಿದೆ ನೋಡಿ ಸ್ಪಷ್ಟ ಸಂದೇಶ. ಅಷ್ಟಕ್ಕೂ ರಾಹುಲ್ ದ್ರಾವಿಡ್ ಏನೆಲ್ಲಾ ಕನ್ನಡದಲ್ಲಿ ಮಾತನಾಡಿದರು ಎನ್ನುವುದನ್ನು ನಾವು ನೋಡೋಣ ಬನ್ನಿ.