Asianet Suvarna News Asianet Suvarna News

ರಹಮತ್‌, ಶಾಹಿದಿ ಜವಾಬ್ದಾರಿಯುತ ಬ್ಯಾಟಿಂಗ್‌, 4ನೇ ಗೆಲುವು ಕಂಡ ಅಫ್ಘಾನಿಸ್ತಾನ

ನೆದರ್ಲೆಂಡ್ಸ್‌ ತಂಡವನ್ನು ಕೇವಲ 179 ರನ್‌ಗಳಿಗೆ ನಿಯಂತ್ರಿಸಿದ ಅಫ್ಘಾನಿಸ್ತಾನ ತಂಡ, ಬಳಿಕ ಈ ಮೊತ್ತವನ್ನು 32 ಓವರ್‌ಗಳಲ್ಲಿಯೇ ಚೇಸ್‌ ಮಾಡಿ ನಾಲ್ಕನೇ ಗೆಲುವು ಕಂಡಿದೆ.

Rahmat Shahidi power Afghanistan to fourth win of the World Cup vs Netherlands  san
Author
First Published Nov 3, 2023, 9:22 PM IST

ಲಕ್ನೋ (ನ.3): ನೆದರ್ಲೆಂಡ್ಸ್‌ ತಂಡದ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅಮೂಲ್ಯ ಅಂಕಗಳನ್ನು ಸಂಪಾದಿಸಿದೆ. ಅದರೊಂದಿಗೆ ಏಳು ಪಂದ್ಯಗಳಲ್ಲಿ 4ನೇ ಗೆಲುವು ಕಂಡ ಅಫ್ಘಾನಿಸ್ತಾನ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 7 ವಿಕೆಟ್‌ಗಳಿಂದ ನೆದರ್ಲೆಂಡ್ಸ್‌ ತಂಡದ ವಿರುದ್ಧ ಗೆಲುವು ಕಂಡಿತು. ಆಕರ್ಷಕ ಅರ್ಧಶತಕ ಬಾರಿಸಿದ ರಹಮತ್‌ ಶಾ ಮತ್ತು ಹಸ್ಮತುಲ್ಲಾ ಶಾಹಿದಿ ಅಫ್ಘಾನಿಸ್ತಾನ ಪರವಾಗಿ ಮೂರನೇ ವಿಕೆಟ್‌ಗೆ ಅಮೂಲ್ಯ 74 ರನ್‌ ಜೊತೆಯಾಟವಾಡುವ ಮೂಲಕ ನೆದರ್ಲೆಂಡ್ಸ್‌ ತಂಡಕ್ಕೆ ಸವಾಲಾದರು. ಅಫ್ಘಾನಿಸ್ತಾನದ ಪ್ರಮುಖ ವಿಕೆಟ್‌ಗಳನ್ನು ಆರಂಭದಲ್ಲಿಯೇ ಉರುಳಿಸಲು ನೆದರ್ಲೆಂಡ್ಸ್‌ ತಂಡ ಯಶಸ್ವಿಯಾಯಿತಾದರೂ, ಸಣ್ಣ ಮೊತ್ತವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಂಡದ ಹೋರಾಟ ಸಾಕಾಗಲಿಲ್ಲ.

ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್‌ ತಂಡ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಅವರ ಅರ್ಧಶತಕದ ನಡುವೆಯೂ 179 ರನ್‌ಗೆ ಆಲೌಟ್‌ ಆಯಿತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ತಂಡ 31.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 181 ರನ್‌ ಬಾರಿಸಿ ಗೆಲುವು ಕಂಡಿತು.

ನೆದರ್ಲೆಂಡ್ಸ್‌  ತಂಡದ ಪ್ರಮುಖ ನಾಲ್ಕು ಆಟಗಾರರು ರನೌಟ್‌ ಆಗಿದ್ದು ತಂಡದ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರಿತು. ಉಳಿದ ವಿಕೆಟ್‌ಗಳನ್ನು ಅಫ್ಘಾನಿಸ್ತಾದ ಸ್ಪಿನ್ನರ್‌ಗಳು ಪಡೆದುಕೊಂಡರು. ವಿಕೆಟ್‌ ಕೀಪರ್ ಐಕ್ರಾಮ್‌ ಅಲಿಖಿಲ್‌ ವಿಕೆಟ್‌ನ ಹಿಂದೆ ಆಕರ್ಷಕ ನಿರ್ವಹಣೆ ನೀಡಿದರು. ನಾಲ್ಕು ರನೌಟ್‌ಗಳ ಪೈಕಿ ಮೂರು ರನ್‌ಔಟ್‌ಗಳಲ್ಲಿ ಇವರು ಭಾಗಿಯಾಗಿದ್ದು ಮಾತ್ರವಲ್ಲದೆ, ಎರಡು ಕ್ಯಾಚ್‌ಗಳನ್ನೂ ಪಡೆದುಕೊಂಡರು. ಇದು ಅಫ್ಘಾನಿಸ್ತಾನ ತಂಡಕ್ಕೆ ಸತತ ಮೂರನೇ ಗೆಲುವಾಗಿದ್ದು 8 ಅಂಕ ಸಂಪಾದನೆ ಮಾಡಿ ಐದನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ ನಾಕೌಟ್‌ಗೇರುವ ಸಾಧ್ಯತೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.

ಅಫ್ಘಾನಿಸ್ತಾನ ತಂಡದ ಪ್ರಮುಖ ಆರಂಭಿಕ ಜೋಡಿ ರಹಮತುಲ್ಲಾ ಗುರ್ಬಾಜ್‌ ಹಾಗೂ ಇಬ್ರಾಹಿಂ ಜದ್ರಾನ್‌ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪ್ರತಿ ಓವರ್‌ಗೆ ಸರಾಸರಿ 6 ರಂತೆ ರನ್‌ ತರುತ್ತಿದ್ದರು. ಈ ಹಂತದಲ್ಲಿ ದಾಳಿಗಿಳಿದ ಲೋಗನ್‌ ವಾನ್‌ ಬೀಕ್‌, ಗುರ್ಜಾಬ್‌ರ ವಿಕೆಟ್‌ಅನ್ನು ಉರುಳಿಸಿದರು. ಅಂಪೈರ್‌ ಆರಂಭದಲ್ಲಿ ಇದನ್ನು ವೈಡ್‌ ಎಂದು ಹೇಳಿದರಾದರೂ, ನೆದರ್ಲೆಂಡ್ಸ್‌ ತಂಡ ಡಿಆರ್‌ಎಸ್‌ ಮೂಲಕ ಈ ವಿಕೆಟ್‌ ಪಡೆದುಕೊಂಡಿತು. ಈ ಹಂತದಲ್ಲಿ ಜದ್ರಾನ್‌ಗೆ ಜೊತೆಯಾದ ರಹಮತ್‌ ಶಾ ಅಫ್ಘಾನಿಸ್ತಾನಕ್ಕೆ ಗೆಲುವು ನೀಡುವ ನಿಟ್ಟಿನಲ್ಲಿ ವೇಗವಾಗಿ ಮುನ್ನಡೆದರು.

48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಅಪರೂಪದ ದಾಖಲೆ ಬರೆದ ಬುಮ್ರಾ..!

11ನೇ ಓವರ್‌ನಲ್ಲಿ ವಾನ್‌ ಡೆರ್‌ ಮರ್ವೆ ದಾಳಿಗೆ ಜದ್ರಾನ್‌ ಔಟಾದರೂ, ಅಫ್ಘಾನಿಸ್ತಾನ ಮಾತ್ರ ಗೆಲುವು ದಿಕ್ಕಿನಿಂದ ವಿಚಲಿತವಾಗಲಿಲ್ಲ. 20 ಓವರ್‌ ಮುಕ್ತಾಯದ ವೇಳೆಗೆ 109 ರನ್‌ ಬಾರಿಸಿದ್ದ ಅಫ್ಘಾನಿಸ್ತಾನಕ್ಕೆ ಆ ಬಳಿಕ ರಹಮತ್‌ ಹಾಗೂ ಶಾಹಿದಿ ಇನ್ನಿಂಗ್ಸ್‌ಗೆ ವೇಗ ನೀಡಿದರು. 23ನೇ ಓವರ್‌ನಲ್ಲಿ ಸಾಕೀಬ್‌ ಜುಲ್ಫೀಕರ್‌ಗೆ ರಹಮತ್‌ ಔಟಾದರೂ, 21 ರಿಂದ 25ನೇ ಓವರ್‌ ವೇಳೆಗೆ ಪ್ರತಿ ಓವರ್‌ಗೆ 6.5 ರನ್‌ ನಂತೆ ಅಫ್ಘಾನಿಸ್ತಾನ ತಂಡ ಆಟವಾಡಿತು.

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

Follow Us:
Download App:
  • android
  • ios