Asianet Suvarna News Asianet Suvarna News

ಏಕದಿನ ವಿಶ್ವಕಪ್‌ನಲ್ಲಿ 3ನೇ ಶತಕ ಚಚ್ಚಿದ ಕ್ವಿಂಟನ್ ಡಿ ಕಾಕ್..! ಹೊಸ ದಾಖಲೆ ಬರೆದ ಓಪನ್ನರ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರಾದರೂ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರೇ ಹೇಳಿಕೊಂಡಿರುವಂತೆ ಕೊನೆಯ ಏಕದಿನ ವಿಶ್ವಕಪ್ ಆಡುತ್ತಿರುವ ಡಿ ಕಾಕ್, ಈಗಾಗಲೇ ಮೂರು ಶತಕ ಸಿಡಿಸಿ ಮುನ್ನುಗ್ಗತ್ತಿದ್ದಾರೆ. 

Quinton de Kock becomes 1st South African batter to hit 3 hundreds in single World Cup edition kvn
Author
First Published Oct 24, 2023, 5:28 PM IST

ಮುಂಬೈ(ಅ.24): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ತಮ್ಮ ಭರ್ಜರಿ ಫಾರ್ಮ್‌ ಮುಂದುವರೆಸಿದ್ದು, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸುವ ಮೂಲಕ ಹರಿಣಗಳ ಪಡೆಯ ಪರ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಡಿ ಕಾಕ್ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಕ್ವಿಂಟನ್ ಡಿ ಕಾಕ್, ತಾವು ಈ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದಾದ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಡಿ ಕಾಕ್ ಶತಕಗಳ ಮೇಲೆ ಶತಕ ಸಿಡಿಸುವ ಮೂಲಕ ಮಿಂಚುತ್ತಿದ್ದಾರೆ. ಇಂದು ಬಾಂಗ್ಲಾದೇಶ ಎದುರು ಕೇವಲ 101 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆಫ್ಘಾನ್‌ಗೆ ಶರಣಾದ ಪಾಕಿಸ್ತಾನವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ವಾಸೀಂ ಜಾಫರ್..!

ಇದೀಗ ಕ್ವಿಂಟನ್ ಡಿ ಕಾಕ್, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ, ವಿಶ್ವಕಪ್ ಆವೃತ್ತಿಯೊಂದರಲ್ಲಿ ಕನಿಷ್ಠ 3 ಶತಕ ಸಿಡಿಸಿದ ಜಗತ್ತಿನ ಏಳನೇ ಹಾಗೂ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ, ಕುಮಾರ ಸಂಗಕ್ಕರ, ಹಾಗೂ ಸೌರವ್ ಗಂಗೂಲಿ ಅವರಂತಹ ಬ್ಯಾಟರ್‌ಗಳು ಒಂದು ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 3+ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರಾದರೂ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರೇ ಹೇಳಿಕೊಂಡಿರುವಂತೆ ಕೊನೆಯ ಏಕದಿನ ವಿಶ್ವಕಪ್ ಆಡುತ್ತಿರುವ ಡಿ ಕಾಕ್, ಈಗಾಗಲೇ ಮೂರು ಶತಕ ಸಿಡಿಸಿ ಮುನ್ನುಗ್ಗತ್ತಿದ್ದಾರೆ. 

'ದಿನಕ್ಕೆ 8 ಕೆಜಿ ಮಟನ್ ತಿಂದ್ರೆ ಫಿಟ್ನೆಸ್ ಎಲ್ಲಿಂದ ಬರುತ್ತೆ?': ಪಾಕ್ ಕ್ರಿಕೆಟಿಗರ ಮೇಲೆ ವಾಸೀಂ ಅಕ್ರಂ ಸಿಡಿಮಿಡಿ

ವಿಶ್ವಕಪ್‌ನಲ್ಲಿ ಗಿಲ್ಲಿ ದಾಖಲೆ ಮುರಿದ ಡಿ ಕಾಕ್: ಹೌದು, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ದಾಖಲೆ ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್ ಹೆಸರಿನಲ್ಲಿತ್ತು. ಗಿಲ್ಲಿ 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 149 ರನ್ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ಕ್ವಿಂಟನ್ ಡಿ ಕಾಕ್, 140 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 174 ರನ್ ಸಿಡಿಸುವ ಮೂಲಕ, ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ವೈಯುಕ್ತಿಕ ಸ್ಕೂರ್ ಮಾಡಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
 

Follow Us:
Download App:
  • android
  • ios