* ಕಿತ್ತುಹೋದ ಶೂ ಫೋಟೋ ಹಾಕಿ ನೆರವು ಯಾಚಿಸಿದ ಜಿಂಬಾಬ್ವೆ ಕ್ರಿಕೆಟಿಗ* ನಿಮ್ಮ ಜತೆ  ನಾವಿದ್ದೇವೆ ಎಂದು ನೆರವಿಗೆ ಬಂದ ಪೂಮಾ ಕ್ರಿಕೆಟ್ ಕಂಪನಿ* ನೆರವಿಗೆ ಬಂದ ಪೂಮಾಗೆ ಧನ್ಯವಾದ ಅರ್ಪಿಸಿದ ಜಿಂಬಾಬ್ವೆ ಕ್ರಿಕೆಟಿಗ ರಾರ‍ಯನ್‌ ಬರ್ಲ್‌

ಹರಾರೆ(ಮೇ.24): ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ ರ‍್ಯಾನ್‌ ಬರ್ಲ್‌ ಟ್ವೀಟರ್‌ನಲ್ಲಿ ಕಿತ್ತು ಹೋಗಿರುವ ತಮ್ಮ ಶೂ ಫೋಟೋವನ್ನು ಹಾಕಿ ಪ್ರಾಯೋಜಕತ್ವಕ್ಕೆ ಮನವಿ ಮಾಡಿದ್ದರು. ಅವರ ಟ್ವೀಟ್‌ ವೈರಲ್‌ ಆಗಿದ್ದು, ಖ್ಯಾತ ಕ್ರೀಡಾ ಉತ್ಫನ್ನ ತಯಾರಿಕಾ ಸಂಸ್ಥೆ ಪೂಮಾ ನೆರವಿಗೆ ಜಿಂಬಾಬ್ವೆ ಆಟಗಾರನ ಧಾವಿಸಿದೆ.

‘ನಮಗೆ ಶೂ ಪ್ರಾಯೋಜಕತ್ವ ಸಿಗಬಹುದೇ?, ಪ್ರತಿ ಸರಣಿ ಬಳಿಕ ಕಿತ್ತು ಹೋಗಿರುವ ಶೂಗೆ ಗಮ್‌ ಹಾಕಿ ಅಂಟಿಸುವುದು ತಪ್ಪಲಿದೆ’ ಎಂದು ರ‍್ಯಾನ್‌ ಬರ್ಲ್‌ ಟ್ವೀಟ್‌ ಮಾಡಿದ್ದರು. 

Scroll to load tweet…

ಇನ್ನು ಮುಂದೆ ನೀವು ಅಂಟು ದೂರ ಇರುವ ಕಾಲ ಬಂದಿದೆ. ನಾವು ನಿಮಗೆ ನೆರವಾಗಲಿದ್ದೇವೆ ಎಂದು ಪೂಮಾ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿದೆ. 

Scroll to load tweet…

ಪೂಮಾದ ಸಹಕಾರವನ್ನು ರ‍್ಯಾನ್‌ ಬರ್ಲ್‌ ಟ್ವೀಟ್‌ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಾನು ಪೂಮಾ ಕ್ರಿಕೆಟ್‌ ತಂಡ ಸೇರಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಅಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ನಿಮ್ಮೆಲ್ಲರ ಕೃತಜ್ಞತೆಗೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಾರೆ

Scroll to load tweet…

27 ವರ್ಷದ ರ‍್ಯಾನ್‌ ಬರ್ಲ್‌ ಜಿಂಬಾಬ್ವೆ ಪರ 3 ಟೆಸ್ಟ್‌, 18 ಏಕದಿನ ಹಾಗೂ 25 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.

ಐಪಿಎಲ್ 2021: ಪಡಿಕ್ಕಲ್‌ - ಸುಂದರ್ ಜತೆ ಒಪ್ಪಂದ ಮಾಡಿಕೊಂಡ ಪೂಮಾ

1983ರ ವಿಶ್ವಕಪ್ ಟೂರ್ನಿಗೂ ಮುನ್ನ ಜಿಂಬಾಬ್ವೆ ಕ್ರಿಕೆಟ್‌ ತಂಡವು ಏಕದಿನ ಕ್ರಿಕೆಟ್‌ಗೆ ಐಸಿಸಿಯಿಂದ ಮಾನ್ಯತೆ ಪಡೆದಿತ್ತು. ಇನ್ನು 1992ರಲ್ಲಿ ಟೆಸ್ಟ್‌ ಮಾನ್ಯತೆ ಪಡೆದಿದೆ. ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಆರ್ಥಿಕ ಸಂಕಷ್ಟದಲ್ಲಿದ್ದು, ತನ್ನ ಆಟಗಾರರಿಗೆ ವೇತನವನ್ನೂ ಪಾವತಿಸಲು ಸಾಧ್ಯವಾಗುತ್ತಿಲ್ಲ.