ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್, ಮುಂದಿನ 5 ವರ್ಷ ಉಚಿತ ಪಡಿತರ ವಿಸ್ತರಣೆ ಘೋಷಿಸಿದ ಮೋದಿ!

ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರ 80 ಕೋಟಿ ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರ ವಿತರಿಸುತ್ತಿದೆ. ಕೋವಿಡ್ ಸಮಯದಲ್ಲಿ ಆರಂಭಗೊಂಡ ಈ ಹಲವು ಬಾರಿ ವಿಸ್ತರಣೆಗೊಂಡಿತ್ತು. ಇದೀಗ 20023ರ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳುತ್ತಿದ್ದ ಈ ಯೋಜನೆಯನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸುವುದಾಗಿ ಮೋದಿ ಘೋಷಿಸಿದ್ದಾರೆ.

PM Modi Announces to extend free ration of garib kalyan anna yojana next five years ckm

ಚತ್ತೀಸಘಡ(ನ.04) ದೀಪಾವಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ಕೋವಿಡ್ ಸಂದರ್ಭದಲ್ಲಿ ಆರಂಭಗೊಂಡ ಉಚಿತ ಪಡಿತರ ಕಾರ್ಯಕ್ರಮನ್ನು ಇದೀಗ ಮುಂದಿನ 5 ವರ್ಷಕ್ಕೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 2028ರ ವರೆಗೆ ಬರೋಬ್ಬರಿ 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿ ವಿತರಣೆ ಯೋಜನೆ ವಿಸ್ತರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಚತ್ತೀಸಘಡ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಭಾರತದ 8 ಕೋಟಿ ಜನರು ಗರೀಬ್ ಕಲ್ಯಾಣ್ ಅನ್ನೋ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಉಚಿತವಾಗಿ ಪಡಿತರ ನೀಡುವ ಮೂಲಕ ದೇಶದ ಜನತೆ ಹಸಿವಿನಿಂದ ಇರಬಾರದು ಅನ್ನೋ ಮಹತ್ ಯೋಜನೆ ಜಾರಿಗೆ ಬಂದಿತ್ತು. ಕೋವಿಡ್ ನಿಯಂತ್ರಣದ ಬಳಿಕವೂ ಈ ಯೋಜನೆ ವಿಸ್ತರಣೆಯಾಗತ್ತಲೇ ಬಂದಿತ್ತು. ಕೊನೆಯದಾಗಿ ಕೇಂದ್ರ ಕ್ಯಾಬಿನೆಟ್ ಸಭೆ ನಡೆಸಿ ಗರೀಬ್ ಕಲ್ಯಾಣ್ ಅನ್ನೋ ಯೋಜನೆಯ್ನು ಡಿಸೆಂಬರ್ 2023ರ ವರಗೆ ವಿಸ್ತರಿಸಲು ಅನುಮೋದನೆ ನೀಡಿತ್ತು. ಇದೀಗ ಈ ಯೋಜನೆಯನ್ನು ಮತ್ತೆ 5 ವರ್ಷಕ್ಕೆ ವಿಸ್ತರಿಸುವುದಾಗಿ ಮೋದಿ ಘೋಷಿಸಿದ್ದಾರೆ.

80 ಕೋಟಿ ಜನಕ್ಕೆ ಮೋದಿ 5 ಕೇಜಿ ಉಚಿತ ಅಕ್ಕಿ; ಇದು ಮೋದಿ ಗ್ಯಾರಂಟಿ!

ನಾನು ಬಡತನ ನೋಡಿದ್ದೇನೆ. ಬಡತನದಲ್ಲೇ ಬೆಳೆದಿದ್ದೇನೆ. ನಾನು ನಿಮ್ಮ ಮಗ. ಈ ಸಂದರ್ಭದಲ್ಲಿ ದೇಶದ ಜನತೆಗೆ ಮಾತನ್ನು ಹೇಳುತ್ತಿದ್ದೇನೆ. ದೇಶದ 80 ಕೋಟಿ ಜನತೆ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯನ್ನು 2028ರ ವರೆಗೆ ವಿಸ್ತರಿಸಲಾಗುತ್ತದೆ ಎಂದು ಮೋದಿ ಘೋಷಿಸಲಾಗಿದೆ.

2020ರ ಮಾಚ್‌ರ್‍ನಲ್ಲಿ ಈ ಯೋಜನೆಯನ್ನು 3 ತಿಂಗಳಿಗೆಂದು ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ 2020ರ ಜುಲೈ-ನವೆಂಬರ್‌ಗೆ, 3ನೇ ಹಂತದಲ್ಲಿ 2021-ರ ಮೇ- ಜೂನ್‌ಗೆ, 4ನೇ ಹಂತದಲ್ಲಿ 2021ರ ಜುಲೈ-ನವೆಂಬರ್‌, 5ನೇ ಹಂತದಲ್ಲಿ 2021ರ ಡಿಸೆಂಬರ್‌ನಿಂದ 2022ರ ಮಾಚ್‌ರ್‍ಗೆ ವಿಸ್ತರಣೆ ಮಾಡಲಾಗಿತ್ತು. 6ನೇ ಹಂತದಲ್ಲಿ 2022ರ ಮಾರ್ಚ್‌ನಿಂದ -ಸೆಪ್ಟೆಂಬರ್‌ ವರೆಗೆ ವಿಸ್ತರಣೆ ಮಾಡಲಾಗಿತ್ತು. ಬಳಿಕ ಡಿಸೆಂಬರ್‌ಗೆ ಮುಂದುವರಿಸಲಾಗಿತ್ತು. ಡಿಸೆಂಬರ್ 2022ರಲ್ಲಿ ಮತ್ತೆ ಕ್ಯಾಬಿನೆಟ್ ಸಭೆ ನಡೆಸಿದ ಪ್ರಧಾನಿ ಮೋದಿ, ಒಂದು ವರ್ಷಕ್ಕೆ ವಿಸ್ತರಣೆ ಮಾಡಿದ್ದರು. 2023ರ ಡಿಸೆಂಬರ್ ಅಂತ್ಯದ ವರೆಗೆ ಯೋಜನೆ ವಿಸ್ತರಿಸಲಾಗಿತ್ತು. ಇದೀಗ ಮತ್ತೈದು ವರ್ಷಕ್ಕೆ ಈ ಯೋಜನೆ ವಿಸ್ತರಿಸುವುದಾಗಿ ಮೋದಿ ಘೋಷಣೆ ಮಾಡಲಾಗಿದೆ. ಶೀಘ್ರದಲ್ಲೇ ಈ ಕುರಿತು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ.

Ration Card ನಲ್ಲಿ ಮಕ್ಕಳ ಹೆಸರು ಸೇರಿಸೋದು ಸುಲಭ

Latest Videos
Follow Us:
Download App:
  • android
  • ios