ಮುಂಬೈ(ಜ.19): ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದುಕೊಂಡಿತು. ಬೆಂಗಳೂರು ಪಂದ್ಯದಲ್ಲಿ ರೋಹಿತ್ ಶರ್ಮಾ 119 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನ ಬಳಿಕ ಉದ್ಯಮಿ ಹರ್ಷಾ ಗೋಯೆಂಕಾ ಮಾಡಿದ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಘರ್ಜಿಸಿದ ಟೀಂ ಇಂಡಿಯಾ; ಏಕದಿನ ಸರಣಿ ಕೈವಶ!.

ಹರ್ಷಾ ಗೋಯೆಂಕಾ ಭಾರತದಲ್ಲಿನ ಬೆಸ್ಟ್ ಕಾಂಬಿನೇಷನ್ ಕುರಿತು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಗೋಯೆಂಕಾ ಅವರ ಅತ್ಯುತ್ತಮ ಕಾಂಬಿನೇಷನ್ ಯಾವುದು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಪಿಜ್ಜಾ ಹಾಗೂ ಕೋಕ್‌ನಿಂದ ಆರಂಭಿಸಿರುವ ಗೋಯೆಂಕಾ, ರೋಹಿತ್ ಶರ್ಮಾ ಹಾಗೂ ಸಿಎಟ್ ಬ್ಯಾಟ್ ಕಾಂಬಿನೇಷನ್‌ಗೆ ಅಂತ್ಯಗೊಳಿಸಿದ್ದಾರೆ. ರೋಹಿತ್ ಅದ್ಭುತ ಇನಿಂಗ್ಸ್ ಬಳಿಕ ಗೋಯೆಂಕಾ ಮಾಡಿದ ಟ್ವೀಟ್ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.

 

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ; ಜಯಸೂರ್ಯ ದಾಖಲೆ ಪುಡಿ ಪುಡಿ!

ಪಿಜ್ಜಾ ಹಾಗೂ ಕೋಕ್, ಆಲೂ ಚಿಪ್ಸ್ ಹಾಗೂ ಕೆಚಪ್,ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಟಾಮ್ ಹಾಗೂ ಜೆರಿ, ತಂದೆ ಮತ್ತು ತಾಯಿ, ಬೆಲ್ ಹಾಗೂ ತಲೆದಿಂಬು, ಇಡ್ಲಿ ಹಾಗೂ ಸಾಂಬಾರ್, ರೋಹಿತ್ ಶರ್ಮಾ ಹಾಗೂ ಸಿಇಎಟಿ ಬ್ಯಾಟ್ ಎಂದು ಹರ್ಷಾ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ಹರ್ಷಾ ಗೋಯೆಂಕಾ ಅವರ ಫೇವರಿಟ್ ಕಾಂಬಿನೇಷನ್‌ನಲ್ಲಿ ಇದೀಗ ರೋಹಿತ್ ಶರ್ಮಾ ಹಾಗೂ ಬ್ಯಾಟ್ ಸೇರಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿ ಸರಣಿಯಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ. ರೋಹಿತ್ ಶರ್ಮಾ ಪ್ರತಿ ಸೆಂಚುರಿ, ಹಾಫ್ ಸೆಂಚುರಿ ಸಿಡಿಸಿ ಬ್ಯಾಟ್ ಮೇಲಕ್ಕೆತ್ತಿ ಸಂಭ್ರಮಿಸುತ್ತಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ಶರ್ಮಾ ಬ್ಯಾಟ್ ಸ್ಪಾನ್ಸರ್ ಸಿಎಇಟಿ ಗೋಯೆಂಕಾ ಲಿಸ್ಟ್‌ಗೇ ಸೇರಿಕೊಂಡಿದೆ.