ಆಸೀಸ್ ಎದುರು ಭಾರತಕ್ಕೆ ಹ್ಯಾಟ್ರಿಕ್ ಸೋಲು, ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಾಂಗರೂ ಪಡೆ
ಮೊದಲು ಬ್ಯಾಟ್ ಮಾಡಿದ ಆಸೀಸ್ 7 ವಿಕೆಟ್‌ಗೆ ಬರೋಬ್ಬರಿ 338 ರನ್ ಕಲೆಹಾಕಿತು. ಇದು ಭಾರತ ಏಕದಿನಲ್ಲಿ ಯಾವುದೇ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟ ಗರಿಷ್ಠ ಮೊತ್ತ. ಫೋಬ್ ಲಿಚ್‌ಫೀಲ್ಡ್(125 ಎಸೆತಗಳಲ್ಲಿ 119) ಭರ್ಜರಿ ಶತಕ ಸಿಡಿಸಿದರೆ, ಅಲೀಸಾ ಹೀಲಿ 82 ರನ್ ಚಚ್ಚಿದರು.
ಮುಂಬೈ(ಜ.03): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ 190 ರನ್ ಹೀನಾಯ ಸೋಲನುಭವಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 0-3 ವೈಟ್‌ವಾಶ್ ಮುಖಭಂಗಕ್ಕೊಳಗಾಗಿದೆ. ಇದು ಭಾರತಕ್ಕೆ ಏಕದಿನದಲ್ಲಿ ಎದುರಾದ ರನ್ ಅಂತರದ 3ನೇ ಅತಿ ದೊಡ್ಡ ಸೋಲು. ಜೊತೆಗೆ ಆಸೀಸ್ ವಿರುದ್ಧ ತವರಿನಲ್ಲಿ ಭಾರತ ಸತತ 10ನೇ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆಸೀಸ್ 7 ವಿಕೆಟ್‌ಗೆ ಬರೋಬ್ಬರಿ 338 ರನ್ ಕಲೆಹಾಕಿತು. ಇದು ಭಾರತ ಏಕದಿನಲ್ಲಿ ಯಾವುದೇ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟ ಗರಿಷ್ಠ ಮೊತ್ತ. ಫೋಬ್ ಲಿಚ್‌ಫೀಲ್ಡ್(125 ಎಸೆತಗಳಲ್ಲಿ 119) ಭರ್ಜರಿ ಶತಕ ಸಿಡಿಸಿದರೆ, ಅಲೀಸಾ ಹೀಲಿ 82 ರನ್ ಚಚ್ಚಿದರು. ಈ ಜೋಡಿ ಮೊದಲ ವಿಕೆಟ್‌ಗೆ 28.5 ಓವರ್‌ಗಳಲ್ಲಿ 189 ರನ್ ಜೊತೆಯಾಟವಾಡಿತು. ಕರ್ನಾಟಕದ ಶ್ರೇಯಾಂಕ ಪಾಟೀಲ್ 57 ರನ್ 3 ವಿಕೆಟ್ ಕಿತ್ತರು.
ಹೊಸ ವರ್ಷಾರಂಭದಲ್ಲೇ ರೋಹಿತ್ ಶರ್ಮಾ ಫ್ಯಾನ್ಸ್‌ಗೆ ಗುಡ್ ನ್ಯೂಸ್..!
ಬೃಹತ್ ಗುರಿ ಬೆನ್ನತ್ತಿದ ಭಾರತ 32.4 ಓವರ್‌ಗಳಲ್ಲಿ ಕೇವಲ 148ಕ್ಕೆ ಸರ್ವಪತನ ಕಂಡಿತು. ಭಾರತದ ಯಾರೊಬ್ಬರಿಗೂ 30+ ರನ್ ಗಳಿಸಲಾಗಲಿಲ್ಲ. ಜಾರ್ಜಿಯಾ ವೇರ್‌ಹ್ಯಾಮ್ 23ಕ್ಕೆ 3 ವಿಕೆಟ್ ಕಬಳಿಸಿದರು.
ಸ್ಕೋರ್:
ಆಸ್ಟ್ರೇಲಿಯಾ 50 ಓವರಲ್ಲಿ 338/7(ಲಿಚ್‌ಫೀಲ್ಡ್ 119, ಹೀಲಿ 82, ಶ್ರೇಯಾಂಕ 3-57)
ಭಾರತ 32.4 ಓವರ್‌ಗಳಲ್ಲಿ 148/10 (ಸ್ಮೃತಿ 29, ಜೆಮಿಮಾ 25, ವೇರ್‌ಹ್ಯಾಮ್ 3-23)
ನಿವೃತ್ತಿ ಟೆಸ್ಟ್ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್‌ರ ‘ಬ್ಯಾಗಿ ಗ್ರೀನ್’ ಕಳ್ಳತನ!
ಸಿಡ್ನಿ: ಬುಧವಾರದಿಂದ ನಿವೃತ್ತಿಯ ಟೆಸ್ಟ್ (ಪಾಕ್ ವಿರುದ್ಧ 3ನೇ ಟೆಸ್ಟ್) ಆಡಲಿರುವ ಆಸ್ಟ್ರೇಲಿಯಾದ ತಾರಾ ಕ್ರಿಕೆಟಿಗ ಡೇವಿಡ್ ವಾರ್ನರ್, ತಮ್ಮ ಬ್ಯಾಗಿ ಗ್ರೀನ್ (ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ಕೊಡುವ ಕ್ಯಾಪ್) ಕಳೆದುಕೊಂಡಿದ್ದಾರೆ. ಈ ಬಗ್ಗೆ ಪಂದ್ಯದ ಹಿಂದಿನ ದಿನವಾದ ಮಂಗಳವಾರ ಸಾಮಾಜಿಕ ತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ವಾರ್ನರ್, ತಮ್ಮ ಕದ್ದವರಿಗೆ ಅದನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ.
2024ರಲ್ಲಿ ಭಾರತಕ್ಕೆ ಹೊಸ ಹೊಸ ಸವಾಲುಗಳು; ಕಳೆದ ವರ್ಷ ಮಿಸ್ ಆಗಿದ್ದ ವಿಶ್ವಕಪ್ ಈ ವರ್ಷ ಸಿಗುತ್ತಾ..?
‘ನನ್ನ ಬ್ಯಾಗ್‌ನೊಳಗೆ ಬ್ಯಾಗಿ ಗ್ರೀನ್ ಕ್ಯಾಪ್ ಇತ್ತು. ಬ್ಯಾಗ್ ಯಾರೋ ಕಳವು ಮಾಡಿದ್ದಾರೆ. ದಯವಿಟ್ಟು ಅದನ್ನು ಹಿಂದಿರುಗಿಸಿ. ಕ್ಯಾಪ್‌ನೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಬೇಕಿದ್ದರೆ ಬ್ಯಾಗ್ ನೀವೇ ಇಟ್ಟುಕೊಳ್ಳಿ’ ಎಂದು ವಾರ್ನರ್ ಕೇಳಿಕೊಂಡಿದ್ದಾರೆ.