ಹೊಸ ವರ್ಷದ 3ನೇ ದಿನ ಅಂದ್ರೆ ನಾಳೆಯಿಂದ ಭಾರತ-ಸೌತ್ ಆಫ್ರಿಕಾ 2ನೇ ಟೆಸ್ಟ್ ಆರಂಭವಾಗ್ತಿದೆ. ಮೊದಲ ಟೆಸ್ಟ್ ಸೋತಿರುವ ಭಾರತೀಯರು, ಈ ಟೆಸ್ಟ್ ಗೆದ್ರೆ ಸರಣಿ ಡ್ರಾ ಆಗಲಿದೆ. ಈ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಭಾರತದಲ್ಲಿ ಆಫ್ಫಾನಿಸ್ತಾನ ವಿರುದ್ಧ ಟಿ20 ಸರಣಿ ನಡೆಯಲಿದೆ. ಟಿ20 ವರ್ಲ್ಡ್‌ಕಪ್ ದೃಷ್ಟಿಯಿಂದ ಈ ಸಿರೀಸ್ ವೆರಿ ವೆರಿ ಇಂಪಾರ್ಟೆಂಟ್.

ಬೆಂಗಳೂರು(ಜ.02): 2023ರ ವರ್ಷ ಮುಗಿದಿದೆ. ಕಳೆದ ವರ್ಷ ಎರಡು ವಿಶ್ವಕಪ್ ಟೀಂ ಇಂಡಿಯಾದಿಂದ ಮಿಸ್ ಆಗಿವೆ. 2024ರಲ್ಲೂ ಒಂದು ವರ್ಲ್ಡ್‌ಕಪ್ ಟೂರ್ನಿ ಇದೆ. ಹಾಗೆ ಸಾಲು ಸಾಲು ಸರಣಿಗಳಿವೆ. ಹಾಗಾದ್ರೆ ಈ ವರ್ಷ ಭಾರತೀಯ ಕ್ರಿಕೆಟರ್ಸ್ ಯಾವೆಲ್ಲಾ ಸರಣಿಗಳನ್ನ ಆಡಲಿದ್ದಾರೆ. ಅವರ ಮುಂದಿರುವ ಬಿಗ್ ಚಾಲೆಂಜ್ ಆದ್ರೂ ಏನು ಅನ್ನೋದನ್ನ ನೋಡಿಕೊಂಡು ಬರೋಣ ಬನ್ನಿ.

ಹೊಸ ವರ್ಷದಲ್ಲಿ ಭಾರತಕ್ಕೆ ಹೊಸ ಹೊಸ ಸವಾಲುಗಳು

2023ರ ವರ್ಷವನ್ನ ನಿರಾಸೆಯಾಗಿ ಮುಗಿಸಿರುವ ಭಾರತ ಕ್ರಿಕೆಟ್ ತಂಡಕ್ಕೆ 2024ರಲ್ಲಿ ಸಾಲು ಸಾಲು ಸವಾಲುಗಳಿವೆ. ಕಳೆದ ವರ್ಷ ಬಹುತೇಕ ಎಲ್ಲಾ ದ್ವಿಪಕ್ಷೀಯ ಸರಣಿ ಮತ್ತು ಏಷ್ಯಾಕಪ್ ಗೆದ್ದ ಟೀಂ ಇಂಡಿಯಾಗೆ ಟೆಸ್ಟ್ ಮತ್ತು ಮತ್ತು ಏಕದಿನ ವಿಶ್ವಕಪ್ ಗೆಲ್ಲಲಾಗಲಿಲ್ಲ. ಈ ನಿರಾಸೆಯಲ್ಲೇ 2023ಕ್ಕೆ ಗುಡ್ ಬೈ ಹೇಳಿ, 2023ರನ್ನ ವೆಲ್ ಕಮ್ ಮಾಡಿದೆ. ಈ ವರ್ಷವೂ ಭಾರತೀಯ ಕ್ರಿಕೆಟ್‌ಗೆ ಫುಲ್ ಬ್ಯುಸಿ ಶೆಡ್ಯೂಲ್ ಇದೆ. ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಿವೆ.

ಭಾರತೀಯರ ಮೊದಲ ಬೇಟೆ ಹರಿಣಗಳು

ಹೊಸ ವರ್ಷದ 3ನೇ ದಿನ ಅಂದ್ರೆ ನಾಳೆಯಿಂದ ಭಾರತ-ಸೌತ್ ಆಫ್ರಿಕಾ 2ನೇ ಟೆಸ್ಟ್ ಆರಂಭವಾಗ್ತಿದೆ. ಮೊದಲ ಟೆಸ್ಟ್ ಸೋತಿರುವ ಭಾರತೀಯರು, ಈ ಟೆಸ್ಟ್ ಗೆದ್ರೆ ಸರಣಿ ಡ್ರಾ ಆಗಲಿದೆ. ಈ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಭಾರತದಲ್ಲಿ ಆಫ್ಫಾನಿಸ್ತಾನ ವಿರುದ್ಧ ಟಿ20 ಸರಣಿ ನಡೆಯಲಿದೆ. ಟಿ20 ವರ್ಲ್ಡ್‌ಕಪ್ ದೃಷ್ಟಿಯಿಂದ ಈ ಸಿರೀಸ್ ವೆರಿ ವೆರಿ ಇಂಪಾರ್ಟೆಂಟ್.

ಜನವರಿ-ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿದೆ ಇಂಗ್ಲೆಂಡ್

ಜನವರಿ ಅಂತ್ಯ ಮತ್ತು ಫೆಬ್ರವರಿಯಲ್ಲಿ ಭಾರತದಲ್ಲೇ ಭಾರತ-ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಸೋತಿರುವ ಭಾರತಕ್ಕೆ ತವರಿನಲ್ಲಿ ಗೆಲ್ಲೋ ಛಲ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಬೇಕಾದ್ರೆ ಈ ಸರಣಿ ಗೆಲ್ಲಬೇಕು.

ಮಾರ್ಚ್-ಏಪ್ರಿಲ್-ಮೇನಲ್ಲಿ ಐಪಿಎಲ್ 17ನೇ ಆವೃತ್ತಿ 

ಐಪಿಎಲ್ 17ನೇ ಆವೃತ್ತಿ ನಡೆಯೋ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಮಾರ್ಚ್ ಕೊನೆಯಲ್ಲಿ ಆರಂಭವಾಗಿ ಮೇ ಕೊನೆಯಲ್ಲಿ ಕ್ಲೋಸ್ ಆಗಲಿದೆ. 10 ತಂಡಗಳು ಭಾಗವಹಿಸಿರೋದ್ರಿಂದ ಕ್ರಿಕೆಟ್ ಜಾತ್ರೆ ಜೋರಾಗಿ ನಡೆಯಲಿದೆ.

ಜೂನ್‌ನಲ್ಲಿ ಟಿ20 ವಿಶ್ವಕಪ್

ಐಪಿಎಲ್ ಮುಗಿದ 15 ದಿನಗಳ ಬಳಿಕ ಅಂದ್ರೆ ಜೂನ್ನಲ್ಲಿ ಟಿ20 ವರ್ಲ್ಡ್‌ಕಪ್ ನಡೆಯಲಿದೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ಮತ್ತೊಂದು ಟಿ20 ವಿಶ್ವಕಪ್ ಗೆದ್ದಿಲ್ಲ. ಈಗ ವೆಸ್ಟ್ ಇಂಡೀಸ್-ಅಮೇರಿಕಾದಲ್ಲಿ ನಡೆಯೋ ವರ್ಲ್ಡ್‌ಕಪ್ ಗೆಲ್ಲೋ ಟಾರ್ಗೆಟ್ ಇಟ್ಟುಕೊಂಡಿದೆ. ಅಲ್ಲಿಗೆ ಫ್ಯಾನ್ಸ್‌ಗೆ ಫುಲ್ ಮನರಂಜನೆ.

ಭಾರತದಲ್ಲಿ ಬಾಂಗ್ಲಾ-ಕಿವೀಸ್ ಸರಣಿ

ಹೌದು, ಈ ವರ್ಷ ಭಾರತದಲ್ಲಿ ಹೆಚ್ಚು ಸರಣಿ ಆಡುವ ಟೀಂ ಇಂಡಿಯಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಳನ್ನಾಡಲಿದೆ. ಜೊತೆಗೆ ವೈಟ್ ಬಾಲ್ ಕ್ರಿಕೆಟ್ ಸಹ ನಡೆಯಲಿದೆ.

ವರ್ಷದ ಕೊನೆಯಲ್ಲಿ ಕಾಂಗರೂ ನಾಡಿಗೆ ಭಾರತ

ಹೌದು, ಈ ವರ್ಷದ ಕೊನೆಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕೈಗೊಳ್ಳಲಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನ ಆಡಲಿದೆ. ಸತತ ಎರಡು ಬಾರಿ ಆಸೀಸ್ ನಾಡಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಭಾರತೀಯರು, ಈ ಸಲ ಹ್ಯಾಟ್ರಿಕ್ ಸಾಧಿಸಲು ಕಾಯ್ತಿದ್ದಾರೆ.

ಯಾರಾಗ್ತಾರೆ ಟೀಂ ಇಂಡಿಯಾ ನಾಯಕ..?

ಸದ್ಯ ಮೂರು ಮಾದರಿ ತಂಡಕ್ಕೆ ಯಾರೊಬ್ಬರೂ ಕಾಯಂ ನಾಯಕರಿಲ್ಲ. ಏಕದಿನ ವಿಶ್ವಕಪ್ ಫೈನಲ್ ಸೋತಮೇಲೆ ರೋಹಿತ್ ಶರ್ಮಾ ನಾಯಕತ್ವ ಅಲುಗಾಡುತ್ತಿದೆ. ಹಾರ್ದಿಕ್ ಪಾಂಡ್ಯ ಪದೇ ಪದೇ ಇಂಜುರಿಯಾಗಿ ಟಿ20 ನಾಯಕತ್ವ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ. ಹಾಗಾಗಿ ಈ ವರ್ಷ ಮೂರು ಮಾದರಿ ತಂಡಕ್ಕೆ ಯಾಱರು ನಾಯಕರಾಗ್ತಾರೆ ಅನ್ನೋ ಕುತೂಹಲವಿದೆ. ಬಿಸಿಸಿಐ ಈ ಬಿಗ್ ಚಾಲೆಂಜನ್ನು ಹೇಗೆ ನಿಭಾಯಿಸುತ್ತೆ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್