Asianet Suvarna News Asianet Suvarna News

ಐಸಿಸಿ ಆದಾಯ ಹಂಚಿಕೆ ಬಗ್ಗೆ ಪಾಕಿಸ್ತಾನ ಆಕ್ಷೇಪ!

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ ಪ್ರಸ್ತಾಪದ ಬಗ್ಗೆ ಪಾಕಿಸ್ತಾನ ಆಕ್ಷೇಪ
ಆದಾಯ ಹಂಚಿಕೆ ಮಾದರಿ ಬಗ್ಗೆ ಪಿಸಿಬಿ ಅಸಮಾಧಾನ
ಭಾರತಕ್ಕೆ 38.5%, ಪಾಕಿಸ್ತಾನಕ್ಕೆ 5.75% ಮೊತ್ತ ಹಂಚಿಕೆ

PCB unhappy with ICC proposed revenue distribution model kvn
Author
First Published May 17, 2023, 11:23 AM IST

ಕರಾಚಿ(ಮೇ.17): ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯಲ್ಲಿ ಹಲವು ಗೊಂದಲಗಳಿಗೆ ಸಿಲುಕಿದ್ದು, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನೂತನ ಆದಾಯ ಹಂಚಿಕೆ ಮಾದರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಐಸಿಸಿಯ ಆದಾಯ ಹಂಚಿಕೆ ವಿವರವನ್ನು ಇತ್ತೀಚೆಗೆ ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ಪ್ರಕಟಿಸಿತ್ತು. ಅದರ ಪ್ರಕಾರ ಐಸಿಸಿಯ ಒಟ್ಟು ಆದಾಯದಲ್ಲಿ ಭಾರತಕ್ಕೆ 38.5%, ಪಾಕಿಸ್ತಾನಕ್ಕೆ 5.75% ಮೊತ್ತ ಹಂಚಿಕೆಯಾಗಲಿದೆ ಎನ್ನಲಾಗಿತ್ತು. 

ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಿಸಿಬಿ, ‘ಐಸಿಸಿ ಆದಾಯಕ್ಕೆ ಭಾರತದ ಕೊಡುಗೆ ಬಹಳ ದೊಡ್ಡದು. ಹೀಗಾಗಿ ಭಾರತಕ್ಕೆ ಸಿಂಹಪಾಲು ನೀಡುವುದು ಸರಿ. ಆದರೆ ತನಗೇಕೆ 5.75% ಮೊತ್ತ ಹಂಚಿಕೆ ಎನ್ನುವ ಬಗ್ಗೆ ವಿವರಣೆ ನೀಡದಿದ್ದರೆ ಜೂನ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ಮಾದರಿಗೆ ಸಮ್ಮತಿಸುವುದಿಲ್ಲ’ ಎಂದು ಪಿಸಿಬಿ ತಿಳಿಸಿದೆ.

ಬಿಸಿ​ಸಿ​ಐ​ಗೆ ಐಸಿಸಿಯಿಂದ ವರ್ಷಕ್ಕೆ 1886 ಕೋಟಿ ರುಪಾಯಿ ಆದಾಯ?

ನವ​ದೆ​ಹ​ಲಿ: 2024-27ರ ಅವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಆದಾಯ ಹಂಚಿಕೆಯಲ್ಲಿ ಬಿಸಿ​ಸಿಐ ಪಾಲು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನ​ಲಾ​ಗಿದ್ದು, 4 ವರ್ಷ​ಗಳ ಅವ​ಧಿ​ಯಲ್ಲಿ ಐಸಿಸಿ ಆದಾಯದಿಂದ ಬಿಸಿಸಿಐಗೆ ವಾರ್ಷಿಕ 1886 ಕೋಟಿ ರುಪಾಯಿ ಪಾವತಿಯಾಗ​ಲಿದೆ ಎಂದು ವರ​ದಿ​ಯಾ​ಗಿದೆ. 

IPL 2023 ಡೆಲ್ಲಿ ಎದುರು ಪಂಜಾಬ್ ಕಿಂಗ್ಸ್‌ಗೆ ಡು ಆರ್‌ ಡೈ ಪಂದ್ಯ

2016-23ರ ಅವಧಿಯಲ್ಲಿ ಐಸಿಸಿಯ ಒಟ್ಟು ಆದಾಯದಲ್ಲಿ ಶೇ.22ರಷ್ಟುಅಂದರೆ ಅಂದಾಜು 3,300 ಕೋಟಿ ರು. ಬಿಸಿಸಿಐ ಖಜಾನೆ ಸೇರಿತ್ತು. ಆದರೆ 2024-27ರ ಅವ​ಧಿ​ಯಲ್ಲಿ ಸುಮಾರು ಶೇ.38.5ರಷ್ಟುಅದಾ​ಯ​ವನ್ನು ಬಿಸಿ​ಸಿಐ ತನ್ನ ತೆಕ್ಕೆಗೆ ಪಡೆ​ಯ​ಲಿದೆ ಎಂದು ತಿಳ​ದಿ​ಬಂದಿದೆ. ಇದೇ ವೇಳೆ ಇಂಗ್ಲೆಂಡ್‌ಗೆ 6.89%, ಆಸ್ಪ್ರೇಲಿಯಾಗೆ 6.25% ಹಾಗೂ ಪಾಕಿಸ್ತಾನಕ್ಕೆ 5.75% ಹಣ ಹಂಚಿ​ಕೆ​ಯಾ​ಗ​ಲಿದೆ ಎಂದು ವರ​ದಿ​ಯಾ​ಗಿತ್ತು. ಉಳಿ​ದೆಲ್ಲಾ ಪೂರ್ಣ ಸದ​ಸ್ಯತ್ವ ರಾಷ್ಟ್ರ​ಗಳಿಗೆ ತಲಾ ಶೇ.5ಕ್ಕಿಂತ ಕಡಿಮೆ ಆದಾಯ ಸಿಗ​ಲಿದೆ ಎಂದು ತಿಳಿ​ದು​ಬಂದಿದೆ.

ಐಸಿಸಿ ಏಕ​ದಿನ ವಿಶ್ವ​ಕ​ಪ್‌​ಗೆ ದಕ್ಷಿಣ ಆ​ಫ್ರಿಕಾ ನೇರ ಅರ್ಹ​ತೆ

ಎಸೆಕ್ಸ್‌(​ಇಂಗ್ಲೆಂಡ್‌​): ಬಾಂಗ್ಲಾ​ದೇಶ ಹಾಗೂ ಐರ್ಲೆಂಡ್‌ ನಡು​ವಿನ ಮೊದಲ ಏಕ​ದಿನ ಪಂದ್ಯ ಮಳೆ​ಯಿಂದಾಗಿ ರದ್ದು​ಗೊಂಡ ಹಿನ್ನೆ​ಲೆ​ಯಲ್ಲಿ ದಕ್ಷಿಣ ಆಫ್ರಿಕಾ ವರ್ಷಾಂತ್ಯ​ದಲ್ಲಿ ಭಾರ​ತ​ದಲ್ಲಿ ನಡೆ​ಯ​ಲಿ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌ಗೆ 8ನೇ ತಂಡ​ವಾಗಿ ನೇರ ಅರ್ಹತೆ ಗಿಟ್ಟಿ​ಸಿ​ಕೊಂಡಿದೆ. ದ.ಆ​ಫ್ರಿ​ಕಾ​ವನ್ನು ಹಿಂದಿಕ್ಕಿ ವಿಶ್ವ​ಕ​ಪ್‌ಗೆ ಅರ್ಹತೆ ಪಡೆ​ಯಲು ಐರ್ಲೆಂಡ್‌ಗೆ ಸರ​ಣಿಯ ಮೂರೂ ಪಂದ್ಯ​ಗ​ಳನ್ನು ಗೆಲ್ಲ​ಬೇ​ಕಿತ್ತು. ಅದರೆ ಮಳೆ​ರಾಯ ಐರ್ಲೆಂಡ್‌ ಕನ​ಸಿಗೆ ತಣ್ಣೀ​ರೆ​ರ​ಚಿ​ತು. 

ಹೀಗಾಗಿ ಜೂನ್‌ನಲ್ಲಿ ಜಿಂಬಾ​ಬ್ವೆ​ಯ​ಲ್ಲಿ ನಡೆ​ಯ​ಲಿ​ರುವ ಅರ್ಹತಾ ಸುತ್ತಿ​ನಲ್ಲಿ ಐರ್ಲೆಂಡ್‌ ತಂಡ ಆಡ​ಬೇಕಿದೆ. ಭಾರತ, ಪಾಕಿ​ಸ್ತಾನ, ಆಸ್ಪ್ರೇ​ಲಿಯಾ ಸೇರಿ​ದಂತೆ 8 ತಂಡ​ಗಳು ನೇರ ಅರ್ಹತೆ ಪಡೆ​ದಿದ್ದು, ಇನ್ನೆರಡು ಸ್ಥಾನ​ಕ್ಕಾಗಿ ವೆಸ್ಟ್‌​ಇಂಡೀಸ್‌, ಶ್ರೀಲಂಕಾ, ನೆದ​ರ್‌​ಲೆಂಡ್‌್ಸ ಸೇರಿ​ದಂತೆ 10 ತಂಡ​ಗಳು ಪೈಪೋಟಿ ನಡೆ​ಸ​ಲಿ​ವೆ.

ಏಷ್ಯಾಕಪ್‌: ಲಂಕಾಕ್ಕೆ ಪಾಕಿಸ್ತಾನ ಬೆದರಿಕೆ!

ಕರಾಚಿ: ಶತಾಯಗತಾಯ ಏಷ್ಯಾ ಕಪ್‌ ಏಕದಿನ ಟೂರ್ನಿಯ ಆತಿಥ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಈಗ ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ಜೊತೆ ಕಿತ್ತಾಟಕ್ಕಿಳಿದಿದೆ. ಏಷ್ಯಾಕಪ್‌ ಹೈಬ್ರೀಡ್‌ ಮಾದರಿ ಅಂದರೆ ಭಾರತದ ಪಂದ್ಯಗಳು ಯುಎಇನಲ್ಲಿ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಲು ಒಪ್ಪದ ಶ್ರೀಲಂಕಾ ಮೇಲೆ ಪಿಸಿಬಿ ಸಿಟ್ಟಾಗಿದ್ದು, ತನ್ನ ಬೆಂಬಲಕ್ಕೆ ನಿಲ್ಲದಿದ್ದರೆ ಲಂಕಾದಲ್ಲಿ ಜುಲೈನಲ್ಲಿ ನಡೆಯಬೇಕಿರುವ ಟೆಸ್ಟ್‌ ಸರಣಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
 

Follow Us:
Download App:
  • android
  • ios