Asianet Suvarna News Asianet Suvarna News

ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್‌ ರೆಡಿ?

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿ ಇದೀಗ ಸ್ಥಳಾಂತರವಾಗುವ ಸಾಧ್ಯತೆಯಿದೆ. ಒಂದು ವೇಳೆ ಪಾಕಿಸ್ತಾನದಲ್ಲೇ ಏಷ್ಯಾಕಪ್ ಟೂರ್ನಿ ನಡೆದರೆ ಭಾರತ ತಂಡವು ಭಾಗವಹಿಸುವುದು ಅನುಮಾನ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಆತಿಥ್ಯದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

PCB chief Ehsan Mani hints at Pakistan giving up Asia Cup hosting rights
Author
Karachi, First Published Feb 20, 2020, 3:44 PM IST

ಕರಾಚಿ(ಫೆ.20): ಭಾರತ ತಂಡ ಏಷ್ಯಾಕಪ್‌ ಟೂರ್ನಿ ಆಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಕಾರಣ, ಟೂರ್ನಿಯ ಆತಿಥ್ಯ ಹಕ್ಕನ್ನೇ ಬಿಟ್ಟುಕೊಡಲು ಚಿಂತಿಸುತ್ತಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಾಸೀಂ ಖಾನ್‌ ತಿಳಿಸಿದ್ದಾರೆ. 

ಏಷ್ಯಾಕಪ್‌ಗೆ ಬರದಿದ್ದರೆ, ಟಿ20 ವಿಶ್ವಕಪ್‌ಗೆ ಬರಲ್ಲ! ಪಾಕ್ ಎಚ್ಚರಿಕೆ

ಮಾರ್ಚ್ ಮೊದಲ ವಾರದಲ್ಲಿ ಏಷ್ಯಾ ಕ್ರಿಕೆಟ್‌ ಸಮಿತಿ ಸಭೆ ನಡೆಯಲಿದ್ದು, ಟೂರ್ನಿ ನಡೆಯುವ ಸ್ಥಳ, ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಪಿಸಿಬಿ ಮುಖ್ಯಸ್ಥ ಎಸ್ಸಾನ್‌ ಮಣಿ ಹೇಳಿದ್ದಾರೆ. ಈ ಮೂಲಕ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನೇ ಬಿಟ್ಟು ಕೊಡುವ ಸುಳಿವನ್ನು ನೀಡಿದ್ದಾರೆ. 

ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ ಎಂದ ಪಿಸಿಬಿ ಯು ಟರ್ನ್

ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ತಂಡವು 2008ರಿಂದಲೂ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿಲ್ಲ. ಇನ್ನು 2012ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಸೆಣಸುತ್ತಿವೆ.  2018ರಲ್ಲಿ ಪಾಕಿಸ್ತಾನಕ್ಕೆ ಆತಿಥ್ಯ ನೀಡಲು ಭಾರತ ನಿರಾಕರಿಸಿದ ಕಾರಣ, ಟೂರ್ನಿಯನ್ನು ಯುಎಇನಲ್ಲಿ ನಡೆಸಲಾಗಿತ್ತು.
ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios