Asianet Suvarna News Asianet Suvarna News

ಏಷ್ಯಾಕಪ್‌ಗೆ ಬರದಿದ್ದರೆ, ಟಿ20 ವಿಶ್ವಕಪ್‌ಗೆ ಬರಲ್ಲ! ಪಾಕ್ ಎಚ್ಚರಿಕೆ

ಇದೇ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಒಂದು ವೇಳೆ ಪಾಕಿಸ್ತಾನದಲ್ಲೇ ಟೂರ್ನಿ ನಡೆದರೆ, ಭಾರತ ಭಾಗವಹಿಸುವುದು ಅನುಮಾನ. ಹೀಗಿರುವಾಗಲೇ ಪಾಕ್ ಬಿಸಿಸಿಐಗೆ ಎಚ್ಚರಿಕೆಯನ್ನು ರವಾನಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

If Team India skip Asia Cup Pakistan wont play 2021 T20 World Cup in India says PCB
Author
Karachi, First Published Jan 26, 2020, 3:12 PM IST

ಕರಾಚಿ(ಜ.26): ಈ ವರ್ಷ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ ಟಿ20 ಟೂರ್ನಿಗೆ ಭಾರತ ತಂಡವನ್ನು ಕಳುಹಿಸದೆ ಇದ್ದರೆ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಕಳುಹಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸಿಇಒ ವಾಸೀಂ ಖಾನ್‌ ಶನಿವಾರ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.

ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

ರಾಜಕೀಯ ಸಂಘರ್ಷದ ಕಾರಣ, ಭಾರತ ತಂಡ 2008ರಿಂದ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2007ರಿಂದ ದ್ವಿಪಕ್ಷೀಯ ಟೆಸ್ಟ್‌ ಸರಣಿಯನ್ನು ಆಡಿಲ್ಲ. ಆದರೆ ಪಾಕಿಸ್ತಾನ 2012ರಲ್ಲಿ ಸೀಮಿತ ಓವರ್‌ ಸರಣಿಯನ್ನು ಆಡಲು ಭಾರತಕ್ಕೆ ಆಗಮಿಸಿತ್ತು.

ಪಾಕಿಸ್ತಾನಕ್ಕೆ 2020ರ ಏಷ್ಯಾ ಕಪ್‌ ಆತಿಥ್ಯ

ಭದ್ರತೆ ಸಮಸ್ಯೆಯಿಂದಾಗಿ ಪಾಕಿಸ್ತಾನದಲ್ಲಿ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆದಿರಲಿಲ್ಲ. ಆದರೆ ಪಿಸಿಬಿ, ಅಂತಾರಾಷ್ಟ್ರೀಯ ಸರಣಿಗಳನ್ನು ಆಯೋಜಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಕಾರಣ, ಕಳೆದ ಆವೃತ್ತಿಯನ್ನು ಯುಎಇನಲ್ಲಿ ನಡೆಸಲಾಗಿತ್ತು. ಈ ವರ್ಷವೂ ಟೂರ್ನಿ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

 

Follow Us:
Download App:
  • android
  • ios