ಲಾಹೋರ್‌: ಭಾರತ ಈ ವರ್ಷ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ 2021ರ ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ದೂರ ಉಳಿಯುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸಿಇಒ ವಾಸೀಂ ಖಾನ್‌ ಈಗ ಉಲ್ಟಾಹೊಡೆದಿದ್ದಾರೆ. 

ಏಷ್ಯಾಕಪ್‌ಗೆ ಬರದಿದ್ದರೆ, ಟಿ20 ವಿಶ್ವಕಪ್‌ಗೆ ಬರಲ್ಲ! ಪಾಕ್ ಎಚ್ಚರಿಕೆ

ತಮ್ಮ ಈ ಹೇಳಿಕೆಗೆ ಕ್ರಿಕೆಟ್‌ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಬಂದ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ. ಇವೆಲ್ಲವೂ ಆಧಾರ ರಹಿತವಾದ ಸುದ್ದಿಗಳು ಎಂದಿದ್ದಾರೆ. 

ಭಾರತ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳದೇ ಇದ್ದರೆ ಅದನ್ನು ನಿಭಾಯಿಸಲು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಇದೆ. ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆಯಷ್ಟೆ. ಈ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ಏಷ್ಯಾಕಪ್‌ ಆತಿಥ್ಯವನ್ನೂ ಬದಲಾವಣೆ ಮಾಡುವ ಸಾಧ್ಯತೆಗಳು ಇಲ್ಲ. ಪಾಕಿಸ್ತಾನದಲ್ಲೇ ನಡೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.