ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತ, ಮದುವೆ ಸೇರಿ ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಕ್ರಿಕೆಟರ್
ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತ, ಮದುವೆ ಸೇರಿ ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಕ್ರಿಕೆಟರ್, ಸದ್ಯ ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಆರೋಗ್ಯದ ಕುರಿತು ಮ್ಯಾನೇಜರ್ ಅಪ್‌ಡೇಟ್ ನೀಡಿದ್ದಾರೆ.

ಶ್ರೀನಿವಾಸ್ ಮಂಧನಾಗೆ ತೀವ್ರ ಹೃದಯಾಘಾತ
ಭಾರತ ಮಹಿಳಾ ತಂಡ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಮದುವೆ ಇಂದು ಅದ್ಧೂರಿಯಾಗಿ ಮ್ಯೂಸಿಕ್ ನಿರ್ದೇಶಕ ಪಲಾಶ್ ಮುಚ್ಚಾಲ್ ಜೊತೆ ನಡೆಯಬೇಕಿತ್ತು. ಆದರೆ ಇಂದು ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಇದರ ಪರಿಣಾಮ ಮದುವೆ ಸೇರಿದಂತೆ ಇಂದಿನ ಎಲ್ಲಾ ಕಾರ್ಯಕ್ರಮವನ್ನು ಸ್ಮೃತಿ ಮಂಧನಾ ರದ್ದುಗೊಳಿಸಿದ್ದಾರೆ.
ಆಸ್ಪತ್ರೆಯಲ್ಲಿ ತಂದೆ ಜೊತೆಗಿರುವ ಸ್ಮೃತಿ ಮಂಧನಾ
ಕಳೆದ ಒಂದು ವಾರದಿಂದ ಸ್ಮೃತಿ ಮಂಧನಾ ಮನೆಯಲ್ಲಿ ಮೆಹಂದಿ, ಹಳದಿ, ಸಂಗೀತ್ ಸೇರಿದಂತೆ ಹಲವು ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದೆ. ಇಂದು ಮಹಾರಾಷ್ಟ್ರದ ಹೂಟ್ಟೂರಾದ ಸಾಂಗ್ಲಿಯಲ್ಲಿ ಮದುವೆ ಆಯೋಜನೆಗೊಂಡಿತ್ತು. ಆದರೆ ಬೆಳಗ್ಗೆ ಉಪಾಹರ ಸೇವಿಸಿದ ಸ್ಮೃತಿ ಮಂಧನಾ ತಂದೆ ಅಸ್ವಸ್ಥಗೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆ ದಾಖಲಾಗಿದ್ದಾರೆ. ಈ ವೇಳೆ ಸ್ಮೃತಿ ಮಂಧನಾ ತಂಗೆ ಶ್ರೀನಿವಾಸ್ ಮಂಧನಾಗೆ ಹೃದಯಾಘಾತವಾಗಿರುವುದು ಪತ್ತೆಯಾಗಿದೆ.
ಮದುವೆ ಮುಂದೂಡಿದ ಮಂಧನಾ
ತಂದೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಹೇಗೆ ಮದುವೆಯಾಗಲಿ, ಇದು ಸಾಧ್ಯವಿಲ್ಲ ಎಂದು ಸ್ಮತಿ ಮಂಧನಾ ಹೇಳಿದ್ದಾರೆ. ಹೀಗಾಗಿ ಮದುವೆ ಮಂದೂಡಲಾಗಿದೆ. ಮದುವೆ ಜೊತೆಗೆ ನಡೆಯಬೇಕಿದ್ದ ಕೆಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ತಂದೆ ಆರೋಗ್ಯದ ಬಗ್ಗೆ ಗಮನ ಕೇಂದ್ರಕರಿಸಿರುವ ಸ್ಮೃತಿ ಮಂಧನಾ ಮದುವೆ ದಿನಾಂಕ ಯಾವುದನ್ನೂ ನಿರ್ಧರಿಸಿಲ್ಲ ಎಂದು ಮಂಧನಾ ಮ್ಯಾನೇಜರ್ ತುಹಿನ್ ಮಿಶ್ರಾ ಹೇಳಿದ್ದಾರೆ.
ಶ್ರೀನಿವಾಸ್ ಮಂಧನಾ ಆರೋಗ್ಯ ಹೇಗಿದೆ?
ತುಹಿನ್ ಮಿಶ್ರಾ ಆರೋಗ್ಯದ ಕುರಿತು ಅಪ್‌ಡೇಟ್ ನೀಡಿದ್ದಾರೆ. ಹೃದಯಾಘಾತದಿಂದ ಐಸಿಯುವಿನಲ್ಲಿ ಶ್ರೀನಿವಾಸ್ ಮಂಧನಾಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸತತ ಪ್ರಯತ್ನಗಳ ಬಳಿಕ ಶ್ರೀನಿವಾಸ್ ಆರೋಗ್ಯ ಸ್ಥಿರವಾಗಿದೆ. ಆದರೆ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ತುಹಿನ್ ಮಿಶ್ರಾ ಹೇಳಿದ್ದಾರೆ.
ತಂದೆ ಗುಣಮುಖರಾಗುವ ವರೆಗೆ ಮದುವೆ ಮುಂದೂಡಿಕೆ
ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಕ್ರಿಕೆಟ್‌ನಿಂದ ಬಿಡುವಿನ ವೇಳೆಯಲ್ಲಿ ತಂದೆ ಜೊತೆ ಕಾಲ ಕಳೆಯುತ್ತಾರೆ. ಹೀಗಾಗಿ ತಂದೆ ಆರೋಗ್ಯದಲ್ಲಿ ಏರುಪೇರು ಸ್ಮೃತಿ ಮಂಧನಾ ತೀವ್ರ ಆತಂಕ ಸೃಷ್ಟಿಸಿದೆ. ತಂದೆ ಗುಣಮುಖರಾದ ಬಳಿಕ ಮದುವೆಯಾಗುತ್ತೇನೆ ಎಂದು ಸ್ಮೃತಿ ಮಂಧನಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

