ಒಂದು ವೇಳೆ ಭಾರತ ತನ್ನ ನಿರ್ಧಾರ ಸಡಿಲಿಸದಿದ್ದರೆ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದ್ದು, ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ. ಇತ್ತೀಚೆಗೆ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದ್ದರಿಂದ ಏಷ್ಯಾಕಪ್‌ನ ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.

ಕರಾಚಿ(ನ.28): 2025ರ ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸದ್ಯ ಟೂರ್ನಿಯ ಆತಿಥ್ಯ ಪಾಕ್‌ ಬಳಿ ಇದ್ದರೂ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್‌ ಆಡುವುದು ಅನುಮಾನ. ಅಲ್ಲಿಗೆ ತೆರಳಲು ಭಾರತ ನಿರಾಕರಿಸುವುದು ಬಹುತೇಕ ಖಚಿತ. 

ಒಂದು ವೇಳೆ ಭಾರತ ತನ್ನ ನಿರ್ಧಾರ ಸಡಿಲಿಸದಿದ್ದರೆ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದ್ದು, ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ. ಇತ್ತೀಚೆಗೆ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದ್ದರಿಂದ ಏಷ್ಯಾಕಪ್‌ನ ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.

ಗುಜರಾತ್‌ಗೆ ಗಿಲ್‌ ಸಾರಥ್ಯ

ಅಹಮದಾಬಾದ್‌: ಹಾರ್ದಿಕ್‌ ಪಾಂಡ್ಯ ನಿರ್ಗಮನದಿಂದ ತೆರವಾಗಿದ್ದ ಐಪಿಎಲ್‌ನ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕತ್ವ ಸ್ಥಾನಕ್ಕೆ ಯುವ ತಾರೆ ಶುಭ್‌ಮನ್‌ ಗಿಲ್‌ ನೇಮಕಗೊಂಡಿದ್ದಾರೆ. ಇದನ್ನು ಸೋಮವಾರ ಫ್ರಾಂಚೈಸಿಯು ಅಧಿಕೃತವಾಗಿ ಪ್ರಕಟಿಸಿದೆ.

Vijay Hazare Trophy: ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯದ ಸಂಭ್ರಮ

ಭಾನುವಾರ ಗುಜರಾತ್‌ ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಾಗ, ಹಾರ್ದಿಕ್‌ರನ್ನು ರೀಟೈನ್‌ ಮಾಡಿಕೊಂಡಿತ್ತು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಹಾರ್ದಿಕ್ ತಮ್ಮ ಹಳೆ ತಂಡ ಮುಂಬೈ ಇಂಡಿಯನ್ಸ್‌ ಸೇರ್ಪಡೆಗೊಂಡಿದ್ದರು. ಹೀಗಾಗಿ ಸೋಮವಾರ ಫ್ರಾಂಚೈಸಿಯು ಗಿಲ್‌ಗೆ ನಾಯಕತ್ವದ ಹೊಣೆಗಾರಿಕೆ ನೀಡಿದೆ. ಹಾರ್ದಿಕ್‌ ಬದಲು ಕೇನ್‌ ವಿಲಿಯಮ್ಸನ್‌ ಗುಜರಾತ್‌ನ ನೂತನ ನಾಯಕನಾಗುವ ನಿರೀಕ್ಷೆ ಇದ್ದರೂ, ತಂಡದ ಆಡಳಿತ 24 ವರ್ಷದ ಯುವ ಆಟಗಾರನಿಗೆ ಮಣೆ ಹಾಕಿದೆ. ಕಳೆದೆರಡು ಆವೃತ್ತಿಗಳಲ್ಲಿ ಹಾರ್ದಿಕ್‌ ನಾಯಕತ್ವದಲ್ಲಿ ಗುಜರಾತ್‌ ಫೈನಲ್‌ಗೇರಿತ್ತು. 2022ರಲ್ಲಿ ಚಾಂಪಿಯನ್‌ ಆಗಿದ್ದರೆ, 2023ರಲ್ಲಿ ರನ್ನರ್‌-ಅಪ್‌ ಆಗಿತ್ತು.

ಗಿಲ್‌ ಕಳೆದ ಬಾರಿ ಗುಜರಾತ್‌ ಪರ ಅಭೂತಪೂರ್ವ ಪ್ರದರ್ಶನ ನೀಡಿದ್ದು, ಬರೋಬ್ಬರಿ 890 ರನ್‌ ಸಿಡಿಸಿ ತಂಡ ಫೈನಲ್‌ಗೇರಲು ಪ್ರಮುಖ ಪಾತ್ರ ವಹಿಸಿದ್ದರು.

ಗ್ರೀನ್‌ ಆರ್‌ಸಿಬಿ ತಂಡಕ್ಕೆ ಸೇರ್ಪಡೆ ಈಗ ಅಧಿಕೃತ

ಬೆಂಗಳೂರು: ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಮುಂಬರುವ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಪರ ಆಡುವುದು ಖಚಿತವಾಗಿದೆ.

ಸೋಮವಾರ ಅವರನ್ನು ಮುಂಬೈ ಇಂಡಿಯನ್ಸ್‌ನಿಂದ 17.5 ಕೋಟಿ ರು. ಆರ್‌ಸಿಬಿ ತನ್ನ ತೆಕ್ಕೆಗೆ ಪಡೆದುಕೊಂಡಿತು. 2023ರ ಐಪಿಎಲ್‌ ಹರಾಜಿನಲ್ಲಿ ಗ್ರೀನ್‌ರನ್ನು 17.5 ಕೋಟಿ ರು. ನೀಡಿ ಮುಂಬೈ ತಂಡ ಖರೀದಿಸಿತ್ತು. ಈ ಮೂಲಕ ಐಪಿಎಲ್‌ ಹರಾಜಿನಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರಲ್ಲಿ ಓರ್ವರು ಎನಿಸಿಕೊಂಡಿದ್ದರು. ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿದ್ದ ಅವರು, 1 ಶತಕ, 2 ಅರ್ಧಶತಕದೊಂದಿಗೆ 452 ರನ್‌ ಕಲೆಹಾಕಿದ್ದರು. ಜೊತೆಗೆ 6 ವಿಕೆಟ್‌ಗಳನ್ನೂ ಪಡೆದಿದ್ದರು.

ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

ಗ್ರೀನ್‌ರನ್ನು ಈ ಬಾರಿಯೂ ತಂಡದಲ್ಲಿ ಉಳಿಸಿಕೊಳ್ಳಲು ಮುಂಬೈ ಬಯಸಿದ್ದರೂ, ಹಾರ್ದಿಕ್‌ ಪಾಂಡ್ಯರನ್ನು ಖರೀದಿಸಲು ಹಣ ಒಟ್ಟುಗೂಡಿಸಬೇಕಾದ ಅನಿವಾರ್ಯತೆಯಿಂದಾಗಿ ಗ್ರೀನ್‌ರನ್ನು ಆರ್‌ಸಿಬಿಗೆ ಮಾರಾಟ ಮಾಡಿದೆ.