ನವ​ದೆ​ಹ​ಲಿ(ಜು.06): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಕೋಚ್ ಆಗಿದ್ದ ಗ್ರ್ಯಾಂಟ್‌ ಫ್ಲವರ್‌ ಅವರ ಕುತ್ತಿಗೆಗೆ ಚಾಕನ್ನು ಇಟ್ಟಿದ್ದರು ಎನ್ನುವ ಒಂದು ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದೆ.

ಹೌದು, 2016ರ ಆಸ್ಪ್ರೇಲಿಯಾ ಪ್ರವಾ​ಸದ ವೇಳೆ ಸಲಹೆ ನೀಡಲು ಮುಂದಾ​ಗಿ​ದ್ದಕ್ಕೆ ಹಿರಿಯ ಕ್ರಿಕೆ​ಟಿಗ ಯೂನಿಸ್‌ ಖಾನ್‌ ಕುತ್ತಿಗೆಗೆ ಚಾಕು ಹಿಡಿ​ದಿ​ದ್ದರು ಎಂದು ಪಾಕಿ​ಸ್ತಾ​ನದ ಮಾಜಿ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಅಚ್ಚರಿಯ ಹೇಳಿಕೆ ನೀಡಿ​ದ್ದಾರೆ. 

ಬ್ರಿ​ಸ್ಬೇನ್‌ ಟೆಸ್ಟ್‌ ವೇಳೆ ಭೋಜನ ಸೇವಿಸುತ್ತಿದ್ದಾಗ ಯೂನಿಸ್‌ಗೆ ಕೆಲ ಬ್ಯಾಟಿಂಗ್‌ ಸಲಹೆಗಳನ್ನು ನೀಡಲು ಮುಂದಾದೆ. ಅದು ಅವ​ರಿಗೆ ಇಷ್ಟ​ವಾ​ಗ​ಲಿಲ್ಲ. ತಕ್ಷಣ ಮೇಜಿನ ಮೇಲಿದ್ದ ಚಾಕು​ವನ್ನು ಕೈಗೆತ್ತಿಕೊಂಡು ನನ್ನ ಕುತ್ತಿಗೆ ಬಳಿ ಇಟ್ಟರು. ಪ್ರಧಾನ ಕೋಚ್‌ ಮಿಕ್ಕಿ ಆರ್ಥರ್‌, ಯೂನಿಸ್‌ರನ್ನು ತಡೆಯಬೇ​ಕಾ​ಯಿ​ತು’ ಎಂದು ಫ್ಲವರ್‌ ಸಂದ​ರ್ಶ​ನ​ವೊಂದ​ರಲ್ಲಿ ಹೇಳಿ​ಕೊಂಡಿ​ದ್ದಾರೆ.

ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಆರೋಪ; ಬಿಸಿಸಿಐಗೆ ಪತ್ರ!

ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗ್ರ್ಯಾಂಟ್‌ ಫ್ಲವರ್‌ ಸದ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಆ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. 2016ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಯೂನಿಸ್ ಖಾನ್ ಸೊನ್ನೆ ಸುತ್ತಿದ್ದರು. ಈ ವೇಳೆ ಸಲಹೆ ನೀಡಲು ಹೋಗಿದ್ದು ಜೀವ ಬಾಯಿಗೆ ಬಂದಂತೆ ಆಗಿತ್ತು ಎಂದು ಸಹೋದರ ಆಂಡಿ ಫ್ಲವರ್ ಜತೆ ನಡೆದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.