* ಪಾಕಿಸ್ತಾನದ ಮಾಜಿ ನಾಯಕ ಇಂಜಿಗೆ ಹೃದಯಾಘಾತ* ತುರ್ತು ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪಾಕ್ ಮಾಜಿ ನಾಯಕ* ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಂಜಮಾಮ್

ಲಾಹೋರ್(ಸೆ.29)‌: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ (Inzamam-ul-Haq) ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಆಂಜಿಯೋಪ್ಲಾಸ್ಟಿ (Angioplasty) ಮಾಡಲಾಗಿದೆ. 

ಸೋಮವಾರ ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದ ಬಳಿಕ ಹೃದಯಾಘಾತ ಎಂದು ಖಚಿತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ (Sachin Tendulkar), ವಾಸೀಂ ಅಕ್ರಂ ಸೇರಿದಂತೆ ಪ್ರಮುಖರು ಹಕ್‌ ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.

ಕೊನೆಯುಸಿರೆಳೆದ ಭಾರತದ ಟೆಸ್ಟ್‌ ಕ್ರಿಕೆಟ್ ಅಂಪೈರ್ ಸತ್ಯಾಜಿ ರಾವ್

ಪ್ರೀತಿಯ ಇಂಜಿ ನಿಮ್ಮದು ಸುಂದರ ಹೃದಯ. ಈಗ ಆ ಹೃದಯದ ಮೇಲೆ ಕೆಲವು ದುಷ್ಟ ಕಣ್ಣುಗಳು ಬಿದ್ದಂತಿವೆ. ವಿಶಾಲ ಹೃದಯದ ನಿಮ್ಮಂತವರ ಹೃದಯಕ್ಕೆ ನೋವುಂಟಾಗಿರುವುದು ಬೇಸರ ತರಿಸಿದೆ. ನೀವು ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಹೃದಯ ಎಲ್ಲರೊಂದಿಗೆ ಖುಷಿಯಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಆರೋಗ್ಯದ ಕಡೆ ಕಾಳಜಿಯಿರಲಿ. ಆದಷ್ಟು ಬೇಗ ಬೇಟಿಯಾಗೋಣ ಎಂದು ವಾಸೀಂ ಅಕ್ರಂ ಟ್ವೀಟ್‌ ಮಾಡಿದ್ದಾರೆ.

ಆದಷ್ಟು ಬೇಗ ಗುಣಮುಖರಾಗಿ ಇಂಜಿ. ನೀವು ಯಾವಾಗಲೂ ಶಾಂತರೀತಿಯಲ್ಲಿದ್ದರೂ, ಆನ್ ಫೀಲ್ಡ್‌ನಲ್ಲಿ ಸದಾ ದಿಟ್ಟ ಹೋರಾಟಗಾರ. ಈ ಸಂಕಷ್ಟದ ಪರೀಕ್ಷೆಯನ್ನು ಎದುರಿಸಿ ಮತ್ತಷ್ಟು ಬಲಿಷ್ಠರಾಗಿ ಹೊರಬರುವಿರಿ ಎನ್ನುವ ವಿಶ್ವಾಸವಿದೆ. ಆದಷ್ಟು ಬೇಗ ಹುಷರಾಗಿ ಎಂದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್ ಟ್ವೀಟ್‌ ಮಾಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. 

Scroll to load tweet…
Scroll to load tweet…

51 ವರ್ಷದ ಹಕ್‌ ಪಾಕ್‌ ಪರ 120 ಟೆಸ್ಟ್‌ಗಳನ್ನಾಡಿ 25 ಶತಕ ಹಾಗೂ 56 ಅರ್ಧಶತಕ ಸಹಿತ 8,830 ರನ್‌ ಬಾರಿಸಿದ್ದಾರೆ. 329 ರನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ. ಇನ್ನು 378 ಏಕದಿನ ಪಂದ್ಯವಾಡಿ 10 ಶತಕ ಹಾಗೂ 83 ಅರ್ಧಶತಕ ಸಹಿತ 11,739 ರನ್‌ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ 3 ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದರು. 2016ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಕೋಚ್‌ ಆಗಿ ಕಾರ‍್ಯನಿರ್ವಹಿಸಿದ್ದರು.